ಫೋಟೋಗ್ರಫಿ ಪ್ರಿಯರಿಗಾಗಿಯೇ ಈ ಸ್ಮಾರ್ಟ್ ಫೋನ್ ! – 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರೋ ಇದರ ಬೆಲೆ ಕೇವಲ ₹.16,999/-

ಫೋಟೋಗ್ರಫಿ ಪ್ರಿಯರಿಗಾಗಿಯೇ ಈ ಸ್ಮಾರ್ಟ್ ಫೋನ್ ! – 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರೋ ಇದರ ಬೆಲೆ ಕೇವಲ ₹.16,999/-

ನ್ಯೂಸ್ ಆ್ಯರೋ : ಫೋಟೋಗ್ರಫಿ ಪ್ರಿಯರಿಗಾಗಿ ಮಾರುಕಟ್ಟೆಯಲ್ಲಿ ಈಗ ತರಹೇವಾರಿ ಫೋನ್ ಗಳು ಲಭ್ಯವಿವೆ. ಒಂದಕ್ಕಿಂತ ಒಂದು ಉತ್ತಮ ಎನ್ನುವ ಈ ಫೋನ್ ಗಳು ಪರಸ್ಪರ ಪೈಪೋಟಿ ನೀಡಿ ಗ್ರಾಹಕರನ್ನು ಒಂದು ಕ್ಷಣ ಗೊಂದಲಗೊಳ್ಳುವಂತೆ ಮಾಡುತ್ತದೆ. ನೂರಾರು ಆಯ್ಕೆಗಳಿರುವಾಗ ಈ ಗೊಂದಲ ಸಹಜ.

ಒಂದುವೇಳೆ ಫೋಟೋಗ್ರಫಿ ಪ್ರಿಯರು ನೀವಾಗಿದ್ದರೆ ನಿಮಗಾಗಿ ಕ್ಯಾಮೆರಾ ಗುಣಮಟ್ಟ ಪರಿಶೀಲಿಸುವುದು ಬಹುಮುಖ್ಯವಾಗುತ್ತದೆ. ಈಗ ಫೋಟೋಗ್ರಫಿಗೆ ಡಿಎಸ್​ಎಲ್​ಆರ್ ಕೆಮರಾದ ಅಗತ್ಯವೇ ಇಲ್ಲ. ಯಾಕೆಂದರೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಆದರೆ, ಇದು ಜೇಬಿಗೆ ಕತ್ತರಿ ಹಾಕಬಹುದು. ಆದರೆ ಈ ಮಧ್ಯೆ ಈಗ 108 ಮೆಗಾಪಿಕ್ಸೆಲ್ ಕ್ಯಾಮೆರಾದ ಫೋನ್ ಕೈಗೆಟುವ ಬೆಲೆಗೆ ಲಭ್ಯವಿದೆ.

ಶವೋಮಿ, ರೆಡ್ಮಿ, ರಿಯಲ್ ಮಿ, ಮೋಟೋ, ಸ್ಯಾಮ್​ಸಂಗ್ ಹೀಗೆ ಬಹುತೇಕ ಎಲ್ಲ ಮೊಬೈಲ್ ಬ್ರ್ಯಾಂಡ್​ಗಳು 108 ಮೆಗಾಫಿಕ್ಸೆಲ್ ಕೆಮರಾದ ಫೋನ್ ಗಳನ್ನು ಪರಿಚಯಿಸಿವೆ. ಆದರೆ ಹೆಚ್ಚಿನ ಗ್ರಾಹಕರು ಇಷ್ಟಪಡುವ ಮೋಟೋರೊಲಾ ಕಂಪೆನಿ ಕಳೆದ ವರ್ಷ ಬಿಡುಗಡೆ ಮಡಿದ 108 ಮೆಗಾಫಿಕ್ಸೆಲ್ ಕೆಮರಾದ ಮೋಟೋ ಜಿ72 (Moto G72) ಸ್ಮಾರ್ಟ್​ಫೋನ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ.

6GB ರಾಮ್ ಹಾಗೂ 128ಜಿಬಿ ಸ್ಟೋರೇಜ್‌ ಸಾಮರ್ಥ್ಯದ ಮೋಟೋ ಜಿ72 ರ ಬೆಲೆ 21,999 ರೂ. ಆದರೆ ಈ ಫೋನ್ ಮೇಲೆ ಈಗ ಬರೋಬ್ಬರಿ 5,000 ರೂ. ಇಳಿಕೆ ಮಾಡಲಾಗಿದೆ. ಹೀಗಾಗಿ ಇದು ಫ್ಲಿಪ್​ಕಾರ್ಟ್ ಕೇವಲ 16,999ರೂ. ಗಳಿಗೆ ಲಭ್ಯವಿದೆ. ಶೇ. 21ರ ರಿಯಾಯಿತಿಯೊಂದಿಗೆ ಎಕ್ಸ್​ಚೇಂಜ್ ಆಫರ್ ಕೂಡ ಇಲ್ಲಿ ಅವಕಾಶವಿದೆ.

ಗ್ರೇ ಮತ್ತು ಪೋಲಾರ್ ಬ್ಲೂ ಬಣ್ಣದಲ್ಲಿ ಆಯ್ಕೆಯಲ್ಲಿ ಸಿಗುವ ಮೋಟೋ ಜಿ72ನ ಪಿಕ್ಸಲ್ ರೆಸಲ್ಯೂಶನ್ 1080 x 2400 ರ ಬೆಂಬಲದೊಂದಿಗೆ 6.6 ಇಂಚಿನ ಫುಲ್​ ಹೆಚ್​ಡಿಯೊಂದಿಗೆ ಪೋಲ್ಡ್ ಡಿಸ್‌ಪ್ಲೇ ಹೊಂದಿದೆ. ಆಂಡ್ರಾಯ್ಡ್‌ 12 ಓಎಸ್‌ ಬೆಂಬಲದೊಂದಿಗೆ ಇದು ಕಾರ್ಯನಿರ್ವಹಿಸಲಿದೆ.

ಮೆಮೊರಿ ಕಾರ್ಡ್‌ ಅಳವಡಿಸಿ ಸಂಗ್ರಹ ವಿಸ್ತರಣೆ ಮಾಡಬಹುದು. ವಾಟರ್ ರೆಸಿಸ್ಟೆನ್ಸ್‌ ಆಯ್ಕೆ ಇದರಲ್ಲಿದ್ದು, ಟ್ರಿಪಲ್ ರಿಯರ್ ಕೆಮರಾ ಸೆಟ್‌ಅಪ್ ಹೊಂದಿದೆ. ಇದರ ಮುಖ್ಯ ಕೆಮರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಸ್ಯಾಮ್​ಸಂಗ್ ಹೆಚ್ ಎಂ6 ಸೆನ್ಸಾರ್ ಇದರಲ್ಲಿದೆ.

ಎರಡನೇ ಕೆಮರಾ 8 ಮೆಗಾಫಿಕ್ಸೆಲ್​ನ ಆಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಹಾಗೂ ಮೂರನೇ ಕೆಮರಾ 2 ಮೆಗಾಫಿಕ್ಸೆಲ್​ನ ಮೈಕ್ರೋ ಶೂಟರ್ ಸೆನ್ಸಾರ್‌ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಕೆಮರವೂ 16 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ.

ದೀರ್ಘ ಸಮಯದ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಫೋನ್ ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 33W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವೂ ಇದೆ. 4 ಜಿ, ವೈ-ಫೈ, ಬ್ಲೂಟೂತ್ 5.0, ಎನ್‌ಎಫ್‌ಸಿ, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಇದರಲ್ಲಿದೆ. ಒಟ್ಟಿನಲ್ಲಿ ಫೋಟೋಗ್ರಫಿ ಪ್ರಿಯರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *