ಹೊಸ ಟ್ರೆಂಡ್ ಸೃಷ್ಟಿಸಿದ ಮೋದಿ ಎಐ ವಾಯ್ಸ್‌ – ಮೋದಿ ವಾಯ್ಸ್ ನಲ್ಲಿ ಕನ್ನಡ ಹಾಡು ಕೂಡ ಕೇಳಬಹುದು : ಹೇಗೆ ಗೊತ್ತಾ?

ಹೊಸ ಟ್ರೆಂಡ್ ಸೃಷ್ಟಿಸಿದ ಮೋದಿ ಎಐ ವಾಯ್ಸ್‌ – ಮೋದಿ ವಾಯ್ಸ್ ನಲ್ಲಿ ಕನ್ನಡ ಹಾಡು ಕೂಡ ಕೇಳಬಹುದು : ಹೇಗೆ ಗೊತ್ತಾ?

ನ್ಯೂಸ್‌ ಆ್ಯರೋ : ಆಧುನಿಕ ಕಾಲಘಟ್ಟದಲ್ಲಿ ಕೃತಕ ಬುದ್ಧಿಮತ್ತೆ ಎಲ್ಲೆಡೆ ಸದ್ದು ಮಾಡುತ್ತಿದ್ದು, ಇದೀಗ ಪ್ರಸಿದ್ಧರ ಧ್ವನಿಗಳನ್ನು ನಕಲು ಮಾಡಲು ಕೂಡ ಎಐ ಬಳಕೆಯಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್‌ಗಳಿಗೆ, ಮೆಮ್‌ ಪೇಜ್‌ಗಳಿಗೆ ಇದೊಂದು ಹೊಸ ಅಸ್ತ್ರವಾಗಿದೆ.

ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಎಐ ಆಧಾರಿತ ಧ್ವನಿ ಬಳಸಿದ ವಿಡಿಯೋಗಳು ಟ್ರೋಲ್‌ ಆಗುತ್ತಿದೆ. ಈಚೆಗೆ ಭಾರತದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಂಡ ವಿವಿಧ ದೇಶಗಳ ಮಹಿಳಾ ಅಧಿಕಾರಿಗಳ ಜತೆ ಮೋದಿ ನಡೆಸಿದ ಮಾತುಕತೆಯ ವಿಡಿಯೋಗೆ ಎಐ ವಾಯ್ಸ್‌ ಬಳಸಿ ಟ್ರೋಲ್ ಮಾಡಲಾಗಿದೆ. ಇವರಲ್ಲದೆ ಇನ್ನೂ ಹಲವು ಖ್ಯಾತರ ವಿಡಿಯೋಗಳಿಗೆ ಅವರ ಧ್ವನಿಯನ್ನು ನಕಲು ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಈ ತಂತ್ರಜ್ಞಾನವನ್ನು ಹೇಗೆ ಬಳಸುವುದು?

ಗೂಗಲ್‌ನಲ್ಲಿ ಎಐ ವಾಯ್ಸ್‌ ಚೇಂಜರ್ ಅಂತಾ ಟೈಪಿಸಿದರೆ ಸಾವಿರಾರು ವಾಯ್ಸ್ ಎಐ ವೆಬ್‌ಸೈಟ್‌ಗಳು ಬರುತ್ತವೆ. ಅಲ್ಲದೇ ಆ್ಯಪ್ ಗಳು ಲಭ್ಯವಿವೆ. ಯಾರಿಗೆ ಯಾವ ಮೂಲ ಧ್ವನಿಯಲ್ಲಿ ಯಾರ ಎಐ ಬೇಕಾಗಿರುತ್ತದೋ ಅದನ್ನು ಆಯ್ಕೆ ಮಾಡಿಕೊಂಡರೆ ಅದು ಸಿದ್ಧವಾಗುತ್ತದೆ. ಬಳಕೆದಾರರು ಇವುಗಳನ್ನು ಬಳಸಿಕೊಂಡು ತಮಗೆ ಬೇಕಾದವರ ಧ್ವನಿಗಳನ್ನು ನಕಲು ಮಾಡಬಹುದು.

ಉದಾಹರಣೆಗೆ ಕನ್ನಡದ ಉಸಿರೇ.. ಉಸಿರೇ ಹಾಡನ್ನು ಪ್ರಧಾನಿ ಮೋದಿ ಅವರ ಧ್ವನಿಯಲ್ಲಿ ಕೇಳಬೇಕಾದರೆ ಉಸಿರೇ ಉಸಿರೇ ಹಾಡಿನ ಕ್ಲಿಪ್ ಅಥವಾ ಲಿಂಕ್ ಅನ್ನು ಹಾಕಿ ಮೋದಿ ಧ್ವನಿಗೆ ಬದಲಿಸಬಹುದು.

ಇದನ್ನು ಮನರಂಜನಾತ್ಮಕವಾಗಿ ಮಾಡಲು ಶುರುಮಾಡಿದ್ದು, ಇದೀಗ ಮೋಸದಾಟಕ್ಕೂ ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *