ಬಳಕೆದಾರರಿಗೆ ಮತ್ತೇ ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್ – ಇನ್ಮುಂದೆ ಒಂದೇ ವಾಟ್ಸಾಪ್‌ನಲ್ಲಿ 4-5 ಅಕೌಂಟ್ ತೆರೆಯಬಹುದು : ಹೇಗೆ ಗೊತ್ತಾ?

ಬಳಕೆದಾರರಿಗೆ ಮತ್ತೇ ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್ – ಇನ್ಮುಂದೆ ಒಂದೇ ವಾಟ್ಸಾಪ್‌ನಲ್ಲಿ 4-5 ಅಕೌಂಟ್ ತೆರೆಯಬಹುದು : ಹೇಗೆ ಗೊತ್ತಾ?

ನ್ಯೂಸ್‌ ಆ್ಯರೋ : ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಈಗಾಗಲೇ ನೂತನ ಅಪ್ಡೇಟ್‌ ಗಳನ್ನು ಮಾಡಿದೆ.

ಇದರ ನಡುವೆ ವಾಟ್ಸ್​ಆ್ಯಪ್ ಮತ್ತೊಂದು ಉಪಯುಕ್ತ ಫೀಚರ್ ನೀಡಲು ಮುಂದಾಗಿದೆ. ಇನ್ಮುಂದೆ ನಿಮಗೆ ಈ ಹೊಸ ವೈಶಿಷ್ಟ್ಯದ ಮೂಲಕ ಒಂದೇ ವಾಟ್ಸ್​ಆ್ಯಪ್​ನಲ್ಲಿ ವಿಭಿನ್ನ ಖಾತೆಗಳನ್ನು ಬಳಸಬಹುದಾಗಿದೆ. ಶೀಘ್ರದಲ್ಲೇ ವಾಟ್ಸ್​ಆ್ಯಪ್​ ತನ್ನ ಬಳಕೆದಾರರ ಈ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ.

ಸುಲಭವಾಗಿ ಹೇಳಬೇಕೆಂದರೆ, ಈ ಹೊಸ ವೈಶಿಷ್ಟ್ಯದ ಮೂಲಕ ಒಂದು ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್ಆ್ಯಪ್​ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಬಹುದು. ಈಗಾಗಲೇ ಈ ಆಯ್ಕೆ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್​ನಲ್ಲಿ ಇದೆ.

ಪ್ರಸ್ತುತ, ವಾಟ್ಸ್‌ಆ್ಯಪ್​ ಬಳಕೆದಾರರಿಗೆ ಒಂದು ಮೊಬೈಲ್​ನಲ್ಲಿ ಒಂದು ಖಾತೆಯೊಂದಿಗೆ ಲಾಗ್ ಇನ್ ಮಾಡಲು ಮಾತ್ರ ಅನುಮತಿಸುತ್ತದೆ. ಆದ್ದರಿಂದ, ವಿಭಿನ್ನ ಫೋನ್ ಸಂಖ್ಯೆಗಳೊಂದಿಗೆ ಎರಡು ವಾಟ್ಸ್​ಆ್ಯಪ್​ ಖಾತೆಗಳನ್ನು ಬಳಸುವ ಬಳಕೆದಾರರು ಎರಡು ಮೊಬೈಲ್​ಗಳನ್ನು ಬಳಸಬೇಕಾಗುತ್ತದೆ.

ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಇದರ ಪ್ರಯೋಜನ ಸಿಗಲಿದೆ.

ಆಂಡ್ರಾಯ್ಡ್ ಆವೃತ್ತಿ 2.23.17.8 ಗಾಗಿ ವಾಟ್ಸ್​ಆ್ಯಪ್​ ಬೀಟಾವನ್ನು ಅಪ್‌ಡೇಟ್ ಮಾಡಿದರೆ ಈ ಆಯ್ಕೆ ಸಿಗಲಿದೆ. ಆದಾಗ್ಯೂ ಕೆಲವು ಬಳಕೆದಾರರಿಗೆ ಹಿಂದಿನ 2.23.17.7 ಆವೃತ್ತಿಯಲ್ಲಿ ಈ ವೈಶಿಷ್ಟ್ಯವನ್ನು ಉಪಯೋಗಿಸಲು ಸಾಧ್ಯವಾಗುತ್ತಿದೆ.

ಕ್ಯೂಆರ್‌ ಕೋಡ್ ಬಟನ್ ಬಳಸಿ ಈ ಪ್ರಯೋಜನ ಪಡೆದುಕೊಳ್ಳಿ:

ಈ ವೈಶಿಷ್ಟ್ಯ ಬಳಸಲು, ಬಳಕೆದಾರರು ಕ್ಯೂಆರ್‌ ಕೋಡ್ ಬಟನ್ ಬಳಿ ಇರುವ ಬಾಣದ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಹೊಸ ವಾಟ್ಸ್​ಆ್ಯಪ್​ ಖಾತೆಯನ್ನು ಸೇರಿಸಲು ಸಾಧ್ಯವಾಗುತ್ತದೆ. ಅದೇ ಮೆನುವಿನಲ್ಲಿ ಬೇರೆ ಖಾತೆಗೆ ಬದಲಾಯಿಸುವ ಆಯ್ಕೆ ಇದೆ. ಹೊಸದಾಗಿ ಸೇರಿಸಲಾದ ಖಾತೆಯನ್ನು ಲಾಗ್ ಔಟ್ ಮಾಡಲು ಆಯ್ಕೆ ಕೂಡ ನೀಡಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *