ಹಮಾಸ್ ಉಗ್ರರ ದಾಳಿ ಹಿಂದಿದೆಯಾ ಇರಾನ್ ಕೈವಾಡ? – ಅಮೆರಿಕದ ಮೇಲಿನ ಸೇಡಿಗೆ ಇಸ್ರೇಲ್ ಟಾರ್ಗೆಟ್ ಆಯಿತೇ? ಮೂಲಗಳು ಹೇಳೋದೇನು?

ಹಮಾಸ್ ಉಗ್ರರ ದಾಳಿ ಹಿಂದಿದೆಯಾ ಇರಾನ್ ಕೈವಾಡ? – ಅಮೆರಿಕದ ಮೇಲಿನ ಸೇಡಿಗೆ ಇಸ್ರೇಲ್ ಟಾರ್ಗೆಟ್ ಆಯಿತೇ? ಮೂಲಗಳು ಹೇಳೋದೇನು?

ನ್ಯೂಸ್ ಆ್ಯರೋ : ಹಮಾಸ್ ಉಗ್ರರು ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ಏಕಾಏಕಿ ವೈಮಾನಿಕ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ಕಂಡು ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಇಸ್ರೇಲ್ ಇದೀಗ ಪ್ರತೀಕಾರದ ದಾಳಿ ಆರಂಭಿಸಿದ್ದು, ಇದರಲ್ಲಿ ಗಾಜಾದ ಸಾವಿರಾರು ನಾಗರೀಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಇಸ್ರೇಲ್ ಹಾಗೂ ಹಮಾಸ್ ಉಗ್ರರ ಮಧ್ಯೆ ದಾಳಿ ಮುಂದುವರೆದಿದೆ.

ಇನ್ನು ಹಮಾಸ್ ದಾಳಿಗೆ ಇಸ್ರೇಲ್‌ನ 1,200ಕ್ಕೂ ಅಧಿಕ ಮಂದಿ ನಾಗರೀಕರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. 1948 ರ ಅರಬ್-ಇಸ್ರೇಲಿ ಯುದ್ಧದ ನಂತರ ಇಸ್ರೇಲ್ ಗಡಿಯೊಳಗೆ ನಡೆಯುತ್ತಿರುವ ಘೋರ ಸಂಘರ್ಷ ಇದಾಗಿದೆ. ಇತಿಹಾಸದಲ್ಲೇ ಕಂಡುಕೇಳರಿಯದಂತಹ ದಾಳಿ ಇದಾಗಿದೆ ಎಂದು ಇಸ್ರೇಲ್‌ ಸರ್ಕಾರ ಹೇಳಿಕೊಂಡಿದೆ.

ದೇಶದ ಭದ್ರತೆ ವಿಷಯದಲ್ಲಿ ಹೆಸರುವಾಸಿಯಾಗಿರುವ ಇಸ್ರೇಲ್ ಇಷ್ಟು ದೊಡ್ಡ ಮಟ್ಟದ ದಾಳಿಗೆ ತುತ್ತಾಗಿರುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ.

ಸಾಂಪ್ರದಾಯಿಕ ಯುದ್ಧಗಳಿಗಿಂತ ಭಿನ್ನವಾಗಿ ಇಸ್ರೇಲ್‌ ಆಂತರಿಕ ಗುಂಪುಗಳ ಸಂಘರ್ಷವನ್ನು ಎದುರಿಸುತ್ತಿದೆ. ಹಮಾಸ್‌ನ ಮಿಲಿಟರಿಗೆ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಬೆಂಬಲವಿದೆ. ಈ ಬ್ರಿಗೇಡ್‌ಗಳು ಸಿರಿಯನ್ ಮತ್ತು ಇರಾನ್-ಬೆಂಬಲಿತ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಗುಂಪುಗಳಾಗಿವೆ.

ಇದಲ್ಲದೇ, ಹಮಾಸ್‌ಗೆ ಹಲವಾರು ಸಂಘಟನೆಗಳ ಬೆಂಬಲವಿದೆ. ಉದಾಹರಣೆಗೆ, ಅಲ್-ಅಕ್ಸಾ ಹುತಾತ್ಮರ ಬ್ರಿಗೇಡ್ಸ್, ಪಾಪ್ಯುಲರ್ ಫ್ರಂಟ್ ಪ್ಯಾಲೆಸ್ಟೈನ್ ಲಿಬರೇಶನ್ ಮತ್ತು ಡೆಮಾಕ್ರಟಿಕ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ ಗುಂಪುಗಳು ಹಮಾಸ್‌ಗೆ ಗೌಪ್ಯ ಬೆಂಬಲವನ್ನು ನೀಡುತ್ತಿವೆ.

ಈ ಸಂಘಟನೆಗಳು ಹಮಾಸ್‌ಗಿಂತ ಕಡಿಮೆ ಪ್ರಸಿದ್ಧಿಯನ್ನು ಹೊಂದಿವೆ. ಆದರೂ, ಇಸ್ರೇಲ್‌ನೊಳಗೆ ಮಾಹಿತಿದಾರರ ಜಾಲಗಳನ್ನು ನಿರ್ವಹಿಸುತ್ತಿವೆ. ಅತ್ಯಾಧುನಿಕ ಸ್ಫೋಟಕಗಳನ್ನು ತಯಾರಿಸುವುದು, ಮಾನವರಹಿತ ಯುದ್ಧ ಡ್ರೋನ್‌ಗಳನ್ನು ಬಳಸುವುದು ಹಾಗೂ ವಿಶೇಷ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಸೇರಿದಂತೆ ಹಲವಾರು ಯುದ್ಧ ಪ್ರಕ್ರಿಯೆಗಳಲ್ಲಿ ಈ ಗುಂಪುಗಳು ಪರಿಣತಿಯನ್ನು ಪಡೆದುಕೊಂಡಿದೆ.

ಈ ಗುಂಪುಗಳ ಬೆಂಬಲದಿಂದಲೇ ಹಮಾಸ್‌ ಆಪರೇಷನ್ ಅಲ್-ಅಕ್ಸಾಕ್ಕೆ ಕೈಹಾಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಸ್ರೇಲ್‌ನ ಮೇಲೆ ಸಂಯೋಜಿತ ಶಸ್ತ್ರಾಸ್ತ್ರ ದಾಳಿಯನ್ನು ಪ್ರಾರಂಭಿಸಲು ಈ ಗುಂಪುಗಳು ಹಮಾಸ್‌ಗೆ ಸಹಾಯ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಅಮೆರಿಕದ ಮೇಲೆ ಸೇಡಿಗಾಗಿ ಹಮಾಸ್‌ಗೆ ಬೆಂಬಲ ಸೂಚಿಸಿದ ಇರಾನ್‌

ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳಲು ಇರಾನ್‌ ಹಮಾಸ್‌ ಬೆಂಬಲವಾಗಿ ನಿಂತಿರುವ ಮಾತುಗಳು ಕೇಳಿಬರುತ್ತಿವೆ. ಹಮಾಸ್‌ ಉಗ್ರರಿಗೆ ಯುದ್ಧತಂತ್ರದ ತರಬೇತಿಯನ್ನು ಇರಾನ್‌ನಲ್ಲಿ ನೀಡಿರಬಹುದು ಎಂದು ಹೇಳಲಾಗುತ್ತಿದೆ. ಇರಾನ್‌ ದೇಶವು ಹೈಬ್ರಿಡ್‌ ಯುದ್ಧದಲ್ಲಿ ಚೆನ್ನಾಗಿ ಪಾರಂಗತರಾಗಿರುವುದನ್ನು ತಳ್ಳಿಹಾಕುವಂತಿಲ್ಲ.

ದಾಳಿಯ ಹಿಂದಿದೆ ನಾನಾ ಕಾರಣಗಳು:

ಹಮಾಸ್‌ ಉಗ್ರರಿಂದ ಇಸ್ರೇಲ್‌ ಮೇಲೆ ದಾಳಿ ಮಾಡಿಸಿ, ನಂತರ ಅಮೆರಿಕದ ಸೈನಿಕರನ್ನು ಅಲ್ಲಿಗೆ ಬರುವಂತೆ ಮಾಡುವುದು, ಆ ನಂತರ ಯುದ್ಧಭೂಮಿಗೆ ಇರಾನ್‌ ಸೈನಿಕರನ್ನು ಕಳಿಸುವ ಲೆಕ್ಕಾಚಾರಗಳು ಈ ದಾಳಿಯ ಹಿಂದಿರಬಹುದು ಎಂದು ಹೇಳಲಾಗುತ್ತಿದೆ.

ಇರಾನ್‌ನ ಯುದ್ಧ ತಜ್ಞರು ಇಸ್ರೇಲಿ ರಕ್ಷಣಾ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಹಮಾಸ್ ಉಗ್ರರಿಂದ ದಾಳಿ ಮಾಡಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಲೆಬನಾನಿನ ರೆಸಿಸ್ಟೆನ್ಸ್ ಬ್ರಿಗೇಡ್‌ಗಳು ವಂಚನೆಯ ಕಾರ್ಯಾಚರಣೆಗಳಲ್ಲಿ ಹೆಚ್ಚು ಅನುಭವವನ್ನು ಹೊಂದಿರುವುದಾಗಿ ತಿಳಿದುಬಂದಿಎ.

ಒಟ್ಟಾರೆ ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯನ್ನು ಇರಾನ್ ಸಂಭ್ರಮಿಸಿದೆ. ಹಮಾಸ್‌ ಉಗ್ರರನ್ನು ಸ್ವಾತಂತ್ರ್ಯ ಯೋಧರೆಂದು ಇರಾನ್‌ ಕರೆದಿದೆ. ಇದೆಲ್ಲವನ್ನು ಗಮನಿಸಿದರೆ ಈ ದಾಳಿಯ ಹಿಂದೆ ಇರಾನ್ ದೇಶದ ಕೈವಾಡವಿರುವುದು ತಿಳಿಯುತ್ತದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *