ಇಸ್ರೇಲ್- ‌ಪ್ಯಾಲೆಸ್ಟೀನ್ ಯುದ್ಧಭೂಮಿಗೆ ಪುತ್ರನನ್ನೇ ಕಳಿಸಿದ್ರ ಇಸ್ರೇಲ್ ಪ್ರಧಾನಿ? – ವೈರಲ್ ಫೋಟೋದ ಅಸಲಿಯತ್ತೇನು?

ಇಸ್ರೇಲ್- ‌ಪ್ಯಾಲೆಸ್ಟೀನ್ ಯುದ್ಧಭೂಮಿಗೆ ಪುತ್ರನನ್ನೇ ಕಳಿಸಿದ್ರ ಇಸ್ರೇಲ್ ಪ್ರಧಾನಿ? – ವೈರಲ್ ಫೋಟೋದ ಅಸಲಿಯತ್ತೇನು?

ನ್ಯೂಸ್ ಆ್ಯರೋ : ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧ ತೀವ್ರ ಸ್ವರೂಪಕ್ಕೆ ತಲುಪಿದೆ. ಹಮಾಜ್ ಉಗ್ರರು ಅಕ್ಟೋಬರ್‌ 7ರಂದು ಇಸ್ರೇಲ್ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದ 2400 ಮಂದಿ ಇಸ್ರೇಲ್ ನಾಗರೀಕರು ಸಾವನ್ನಪ್ಪಿದ್ದಾರೆ. ಇನ್ನೂ ಇಸ್ರೇಲ್‌ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಪ್ಯಾಲೆಸ್ಟೀನ್‌ನ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇದೀಗ ಇಸ್ರೇಲ್ ಬೆಂಬಲ ಸೂಚಿಸಿದ ಅಮೆರೀಕಾ ತಮ್ಮ ಶಸ್ತ್ರಾಸ್ತ್ರವನ್ನು ಒಳಗೊಂಡ ವಿಮಾನ ಇವತ್ತು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ.

ಈ ಸುದ್ದಿಯ ಬೆನ್ನಲ್ಲೇ ಇಸ್ರೇಲ್‌ ಪ್ರಧಾನಿ ತಮ್ಮ ಮಗನನ್ನೇ ಯುದ್ಧಭೂಮಿಗೆ ಕಳುಹಿಸಿಕೊಡುತ್ತಿದ್ದಾರೆ ಎನ್ನಲಾದ ಫೋಟೋವೊಂದು ಈಗ ವೈರಲ್ ಆಗಿದೆ.

ಇಸ್ರೇಲ್‌ ಹಮಾಸ್ ನಡುವಣ ಯುದ್ಧ 5ನೇ ದಿನಕ್ಕೆ ಕಾಲಿರಿಸಿದೆ. ತನ್ನ ಕೆಣಕಿದ ಹಮಾಸ್‌ ಉಗ್ರರನ್ನು ಹೆಡೆಮುರಿ ಕಟ್ಟಿ ಗಾಜಾ ಪಟ್ಟಿಯನ್ನೇ ಭೂಪಟದಿಂದ ಅಳಿಸಲು ಪಣ ತೊಟ್ಟಿರುವ ಇಸ್ರೇಲಿಗರು ಈಗ ಇದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಹಮಾಸ್‌ ಉಗ್ರರ ವಿರುದ್ಧದ ಈ ಹೋರಾಟಕ್ಕೆ ಶಕ್ತಿ ತುಂಬಲು ಇಸ್ರೇಲ್‌ ಸರ್ಕಾರ ಬಹುಕೋಟಿ ಡಾಲರ್ ಮೊತ್ತದ ವಿದೇಶಿ ಮೀಸಲನ್ನೇ ಮಾರಾಟ ಮಾಡಿದ್ದು, ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಈಗ ಇಸ್ರೇಲ್‌ ಪ್ರಧಾನಿ ತಮ್ಮ ಮಗನನ್ನೇ ಯುದ್ಧಭೂಮಿಗೆ ಕಳುಹಿಸಿಕೊಡುತ್ತಿದ್ದಾರೆ ಎನ್ನಲಾದ ಫೋಟೋವೊಂದು ಈಗ ವೈರಲ್ ಆಗಿದೆ. ಆದರೆ ಈ ಫೋಟೋದ ಸತ್ಯಾಸತ್ಯತೆಯನ್ನು ಖಚಿತಪಡಿಸಿದಾಗ ಇದು 2017ರ ಫೋಟೋ ಎಂಬುದು ತಿಳಿದು ಬಂದಿದೆ.

ಇಸ್ರೇಲ್‌ನಲ್ಲಿ ಪ್ರತಿಯೊಬ್ಬ ನಾಗರಿಕನು ಸೇನಾ ತರಬೇತಿಯನ್ನು ಪಡೆಯುವುದು ಕಡ್ಡಾಯ. 2017ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಮಗ ಅವ್ನೀರ್ ನೇತನ್ಯಾಹು ಈ ಸೇನಾ ತರಬೇತಿಯನ್ನು ಮುಗಿಸಿದ ವೇಳೆ ತೆಗೆದ ಫೋಟೋ ಇದು ಎಂದು ತಿಳಿದು ಬಂದಿದೆ. ಇಸ್ರೇಲ್ ಡಿಫೆನ್ಸ್ ಸರ್ವೀಸ್‌ನಲ್ಲಿ 2017ರಲ್ಲಿಯೇ ಅವ್ನೀರ್ ನೇತನ್ಯಾಹು ಸೇನಾ ತರಬೇತಿ ಪೂರ್ಣಗೊಳಿಸಿದ್ದರು. ಅವ್ನರ್ ಯುದ್ಧ ಗುಪ್ತಚರ ಕಲೆಕ್ಷನ್ ಕಾರ್ಪ್ಸ್‌ನಲ್ಲಿ ತರಬೇತಿ ಪೂರೈಸಿ ಸೇವೆ ಸಲ್ಲಿಸಿದರು.

ತಮ್ಮ ಪುತ್ರ ಈ ಸೇನಾ ತರಬೇತಿ ಪೂರ್ಣಗೊಳಿಸಿದ ಆ ಸಂದರ್ಭದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್‌, ನಾವು ನಿನ್ನ ಬಗ್ಗೆ ಹೆಮ್ಮೆ ಪಡುತ್ತೇವೆ ಹಾಗೂ ಪ್ರೀತಿಸುತ್ತೇವೆ. ಇದೇ ರೀತಿ ಮಕ್ಕಳನ್ನು ಸೇನಾ ತರಬೇತಿಗೆ ಕಳುಹಿಸಿ ಈ ಅದ್ಭುತ ಅನುಭವವನ್ನು ಅನುಭವಿಸುವ ಎಲ್ಲಾ ಇಸ್ರೇಲ್‌ನ ಪೋಷಕರ ಉತ್ಸಾಹವನ್ನು ನಾವು ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಆ ಸಂದರ್ಭದ ತೆಗೆದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ಮಧ್ಯೆ ನಡೆಯುತ್ತಿರುವ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಇದೀಗ ಬೆಂಜಮಿನ್ ತಮ್ಮ ಮಗನನ್ನು ದೇಶಸೇವೆಗೆ ಕಳುಹಿಸಿದ್ದಾರೆ ಎಂದು ಬರೆದು ಈ ಫೋಟೋವೊಂದು ವೈರಲ್ ಆಗಿದ್ದು, ಈ ಫೋಟೋ 7 ವರ್ಷಗಳ ಹಿಂದೆ ತೆಗೆದಿರುವ ಫೋಟೋವೆಂದು ತಿಳಿದುಬಂದಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *