ಇನ್ಮುಂದೆ ಗೂಗಲ್‌ ಸೈನ್‌ ಇನ್‌ಗೆ ಪಾಸ್‌ವರ್ಡ್‌ ಬದಲಾಗಿ ಪಾಸ್‌ ಕೀ – ಹೊಸ ವಿಧಾನಕ್ಕೆ ಸರ್ವೆಯಲ್ಲಿ ಉತ್ತಮ ಪ್ರತಿಕ್ರಿಯೆ : ಏನಿದು ಪಾಸ್ ಕೀ?

ಇನ್ಮುಂದೆ ಗೂಗಲ್‌ ಸೈನ್‌ ಇನ್‌ಗೆ ಪಾಸ್‌ವರ್ಡ್‌ ಬದಲಾಗಿ ಪಾಸ್‌ ಕೀ – ಹೊಸ ವಿಧಾನಕ್ಕೆ ಸರ್ವೆಯಲ್ಲಿ ಉತ್ತಮ ಪ್ರತಿಕ್ರಿಯೆ : ಏನಿದು ಪಾಸ್ ಕೀ?

ನ್ಯೂಸ್ ಆ್ಯರೋ : ಮುಂಬರುವ ದಿನಗಳಲ್ಲಿ ಗೂಗಲ್ ಸೇವೆಗಳಿಗೆ ಸೈನ್ ಇನ್ ಆಗಲು ಪಾಸ್‌ವರ್ಡ್ ಬದಲಾಗಿ ಪಾಸ್‌ ಕೀ ಬಳಕೆಯನ್ನು ಗೂಗಲ್ ಪರಿಚಯಿಸಿದೆ. ಈ ಸಂಬಂಧ ಗೂಗಲ್‌ ಹೇಳಿಕೊಂಡಿದೆ.

ಪಾಸ್ ಕೀ ಬಳಸಿ ಬಳಕೆದಾರರು ಬಯೋಮೆಟ್ರಿಕ್ ಸೆನ್ಸರ್ (ಫಿಂಗರ್ ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ), ಪಿನ್ ಅಥವಾ ಪ್ಯಾಟರ್ನ್​ಗಳ ಮೂಲಕ ಅಪ್ಲಿಕೇಶನ್ ಗಳು ಮತ್ತು ವೆಬ್ ಸೈಟ್ ಗಳಿಗೆ ಸೈನ್ ಇನ್ ಮಾಡಬಹುದು. ಅಂದರೆ ಇದು ಪಾಸ್ ವರ್ಡ್ ಗಳನ್ನು ನೆನಪಿಟ್ಟುಕೊಳ್ಳುವ ಕಿರಿಕಿರಿಯನ್ನು ತಪ್ಪಿಸಲಿದೆ.

ಇದರರ್ಥ ಮುಂದಿನ ಬಾರಿ ನೀವು ನಿಮ್ಮ ಖಾತೆಗೆ ಸೈನ್ ಇನ್ ಮಾಡುವಾಗ ಪಾಸ್ ಕೀಗಳನ್ನು ಸೃಷ್ಟಿಸುವಂತೆ ಮತ್ತು ಬಳಸುವಂತೆ ನಿಮಗೆ ನೋಟಿಫಿಕೇಶನ್​ಗಳು ಕಾಣಿಸಲಿವೆ. ಇದು ಮುಂದಿನ ದಿನಗಳಲ್ಲಿ ನಿಮ್ಮ ಸೈನ್ ಇನ್ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ. ನಿಮ್ಮ ಗೂಗಲ್ ಖಾತೆ ಸೆಟ್ಟಿಂಗ್​ಗಳಲ್ಲಿ ‘ಸಾಧ್ಯವಾದಾಗ ಪಾಸ್ವರ್ಡ್ ಸ್ಕಿಪ್ ಮಾಡಿ’ ಎಂಬ ಆಪ್ಷನ್ ಕಾಣಿಸಲಿದೆ” ಎಂದು ಗೂಗಲ್ ತಿಳಿಸಿದೆ.

ಹೊಸ ತಂತ್ರಜ್ಞಾನ ಪರಿಚಯಿಸಲು ಬೇಕಿದೆ ಇನ್ನೂ ಸಮಯ:

“ಆದರೆ ಪಾಸ್​ಕೀ ವಿಧಾನವನ್ನು ಜಾರಿಗೊಳಿಸುವುದು ದೊಡ್ಡ ಪ್ರಕ್ರಿಯೆಯಾಗಿದೆ ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ಪಾಸ್​ವರ್ಡ್​ಗಳು ಇನ್ನೂ ಕೆಲ ಸಮಯದವರೆಗೆ ಜಾರಿಯಲ್ಲಿರುತ್ತವೆ” ಎಂದು ಅದು ಹೇಳಿದೆ.

ಪಾಸ್‌ ಕೀಗೆ ಸರ್ವೇಯಲ್ಲಿ ಉತ್ತಮ ಪ್ರತಿಕ್ರಿಯೆ:

ಪರಿಚಯಿಸಿದ ಶೇಕಡಾ 64 ರಷ್ಟು ಬಳಕೆದಾರರು ಪಾಸ್ ವರ್ಡ್ ಗಳು ಮತ್ತು ಎರಡು – ಹಂತದ ಪರಿಶೀಲನೆಯಂತಹ ಸಾಂಪ್ರದಾಯಿಕ ವಿಧಾನಗಳಿಗಿಂತ ಪಾಸ್ ಕೀಗಳು ಬಳಸಲು ಸರಳವಾಗಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *