
ಮೊಬೈಲ್‌ನ ಪಾಸ್‌ವರ್ಡ್ ಮರೆತು ಹೋಗ್ತಿದೆಯಾ? – ನಿಮ್ಮ ಮೊಬೈಲ್ ಅನ್ನು ಅನ್‌ಲಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ..!
- ಟೆಕ್ ನ್ಯೂಸ್
- November 16, 2023
- No Comment
- 68
ನ್ಯೂಸ್ ಆ್ಯರೋ : ಸ್ಮಾರ್ಟ್ ಫೋನ್‌ಗಳಲ್ಲಿ ಪ್ರತಿಯೊಬ್ಬರು ತಮ್ಮ ಸುರಕ್ಷತೆಗಾಗಿ ಪಾಸ್‌ವಾರ್ಡ್, ಪಿನ್ ನಂಬರ್‌ಗಳ ಮೂಲಕ ಲಾಕ್ ಮಾಡುವುದು ಸಾಮಾನ್ಯ. ಕೆಲವೊಂದು ಬಾರಿ ಪದೇ ಪದೇ ಲಾಕ್ ಅನ್ನು ಬದಲಾಯಿಸುವುದರಿಂದ ಮರೆತು ಹೋಗುವ ಸಾಧ್ಯತೆಗಳು ಜಾಸ್ತಿಯಿರುತ್ತದೆ. ಒಂದು ವೇಳೆ ನಿಮ್ಮ ಫೋನ್ ಸ್ಕ್ರೀನ್ ಲಾಕ್‌ನ ಪಾಸ್‌ವರ್ಡ್ ಮರೆತು ಹೋದರೆ ಏನು ಮಾಡಬೇಕೆಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್ ಸ್ಕ್ರೀನ್ ಲಾಕ್ ಪ್ಯಾಟರ್ನ್ ಸೆಟ್ ಮಾಡುವ ಮುನ್ನ ಕೆಲವು ಅಂಶಗಳನ್ನು ಪರಿಗಣಿಸಬೇಕು. ಮರೆತು ಹೋದ ಪಾಸ್‌ವರ್ಡ್ ಇಲ್ಲವೇ ಪ್ಯಾಟರ್ನ್ ಅನ್ನು ನೆನಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ ಇಲ್ಲದೆ ಹೋದರೆ ಪ್ಯಾಟರ್ನ್ ರೀಸೆಟ್ ಮಾಡಲು ಗೂಗಲ್ ಖಾತೆಯನ್ನು ಬಳಸಿರಿ. ಬಳಕೆದಾರರು ತಮ್ಮ ಗೂಗಲ್ ಖಾತೆಯೊಂದಿಗೆ ಸ್ಮಾರ್ಟ್‌ಫೋನ್‌ಗೆ ಲಾಗ್‌ಇನ್ ಆಗಿದ್ದರೆ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಅನ್ನು ಮರೆತ ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗುತ್ತದೆ.
ಗೂಗಲ್ ಅಕೌಂಟ್ ಮೂಲಕ ಸ್ಕ್ರೀನ್ ಲಾಕ್ ತೆರೆಯಿರಿ:
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್‌ಲಾಕ್ ತೆರೆಯುವಾಗ ನೀವು ತಪ್ಪಾದ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಬಳಸಿದರೆ Forgot Pattern/Password ಆಯ್ಕೆ ಕಾಣಿಸಲಿದೆ. ಈ ಆಯ್ಕೆಯ ಮೂಲಕ ನಿಮ್ಮ ನೋಂದಾಯಿತ ಗೂಗಲ್ ಖಾತೆಗೆ ಲಾಗಿನ್ ಮಾಡಲು ಕೇಳಲಾಗುತ್ತದೆ. ಈ ಮೂಲಕ ನೀವು ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗಬೇಕಾಗುತ್ತದೆ. ಇದರಲ್ಲಿ ನಿಮ್ಮ ಫೋನ್ ಆಟೋಮ್ಯಾಟಿಕ್ ಅನ್‌ಲಾಕ್ ಆಗಲಿದೆ.
ನಂತರ ನೀವು ಹೊಸ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಅನ್ನು ಸೆಟ್ ಮಾಡಬಹುದು. ಆದರೆ ಈ ರೀತಿಯ ಆಯ್ಕೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿಲ್ಲ ಅನ್ನೋದು ಗಮನಿಸಬೇಕಾದ ವಿಚಾರ.
ಸ್ಮಾರ್ಟ್‌ಲಾಕ್ ಆಯ್ಕೆ ಬಳಸಿರಿ
ಇದಲ್ಲದೆ ನಿಮ್ಮ ಮೊಬೈಲ್‌ನ ಸ್ಕ್ರೀನ್‌ಲಾಕ್ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಲಾಕ್ ಮರೆತು ಹೋದಾಗ ಆಂಡ್ರಾಯ್ಡ್‌ನ ಸ್ಮಾರ್ಟ್ ಲಾಕ್ ಫೀಚರ್ ಕೂಡ ಸಹಾಯಕವಾಗಲಿದೆ. ಈ ಆಯ್ಕೆಯು ಸಾಮಾನ್ಯವಾಗಿ ಮನೆಯ ವೈ-ಫೈ ಸಹಾಯದಿಂದ ನಿಮ್ಮ ಆಂಡ್ರಾಯ್ಡ್ ಫೋನ್‌ಗೆ ಲಾಗ್ ಆಗುತ್ತದೆ. ಪಿನ್ ಮರೆತ ವೇಳೆ ನಿಮ್ಮ ಫೋನ್ ಅನ್ನು ಹೋಮ್ ನೆಟ್‌ವರ್ಕ್ ಬಳಿ ತೆಗೆದುಕೊಳ್ಳುವ ಮೂಲಕ ಮೊಬೈಲ್ ಸ್ಕ್ರೀನ್ ಲಾಕ್ ಅನ್ನು ಆಟೋಮ್ಯಾಟಿಕ್ ಆಗಿ ಅನ್‌ಲಾಕ್ ಮಾಡಬಹುದು.
ಫೈಂಡ್ ಮೈ ಮೊಬೈಲ್ ಮೂಲಕ ಲಾಕ್ ತೆರೆಯಿರಿ
ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್ ಪ್ಯಾಟರ್ನ್ ಮರೆತು ಹೋದಾಗ ಫೈಂಡ್ ಮೈ ಮೊಬೈಲ್ ಆಯ್ಕೆಯು ಕೂಡ ಸಹಾಯಕ್ಕೆ ಬರಲಿದೆ. ಅದರಲ್ಲೂ ಸ್ಯಾಮ್‌ಸಂಗ್ ಫೋನ್ ಬಳಸುವವರಿಗೆ ಇದು ಭಾರಿ ಪ್ರಯೋಜನವಾಗುತ್ತದೆ.
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಗ್ರಾಹಕರು ಲ್ಯಾಪ್‌ಟಾಪ್‌ನಲ್ಲಿ ‘ಫೈಂಡ್ ಮೈ ಮೊಬೈಲ್’ ಫೀಚರ್ ಮೂಲಕ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್ ತೆರಯಬಹುದು.
ಇದಕ್ಕಾಗಿ ನೀವು ಲ್ಯಾಪ್‌ಟಾಪ್‌ನಲ್ಲಿ ಸ್ಯಾಮ್‌ಸಂಗ್ ಫೈಂಡ್ ಮೈ ಫೋನ್ ವೆಬ್‌ಸೈಟ್‌ಗೆ ಹೋಗಿ, ಸ್ಯಾಮ್‌ಸಂಗ್ ಫೋನಿನ ವಿವರಗಳನ್ನು ನಮೂದಿಸಿ ಮತ್ತು ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್ ಅನ್ನು ತೆಗೆದುಹಾಕಲು ‘ಅನ್‌ಲಾಕ್ ಮೈ ಸ್ಕ್ರೀನ್’ ಆಯ್ಕೆಯನ್ನು ಬಳಸಿ ಪ್ರಯೋಜನ ಪಡೆದುಕೊಳ್ಳಿ.