
‘Kill DK Brothers’ ಎಂದು ಪೋಸ್ಟ್ ಹಾಕಿದ್ದವ ಇದೀಗ ಪೊಲೀಸ್ ಅತಿಥಿ – ಆರೋಪಿಯ ಮತ್ತಷ್ಟು ಸ್ಫೋಟಕ ಅಂಶ ಬಯಲಿಗೆ…..!
- ಕರ್ನಾಟಕ
- November 16, 2023
- No Comment
- 98
ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣ ಬಳಸುವ ಪ್ರತಿಯೊಬ್ಬನೂ ಇವತ್ತು ಓರ್ವ ಪತ್ರಕರ್ತನೇ. ಆದರೆ ಕೆಲವರು ಎಲ್ಲೆ ಮೀರಿ ಇದೇ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುವುದೂ ಉಂಟು. ಯಾವುದೇ ಕಾನೂನಿನ ಅರಿವಿಲ್ಲದವರಂತೆ ಮನಸ್ಸೋ ಇಚ್ಛೆ ಸಾಮಾಜಿಕ ಜಾಲತಾಣದಲ್ಲಿ ಯಾರ ಬಗ್ಗೆಯಾದರೂ ಪೋಸ್ಟ್ ಹಾಕುತ್ತಾ ಧರ್ಮದ ನಡುವೆ ಜಗಳ ಅಥವಾ ಪ್ರಚೋದನೆ ಸೃಷ್ಟಿಸುತ್ತಾರೆ. ಇದರಿಂದಲೇ ಹಿಂಸಾತ್ಮಕ ಚಟುವಟಿಕೆಗಳು ನಡೆಯುವುದು ಕೂಡಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಆರೋಪಿಯನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದ್ದು ತನಿಖೆಯ ಸಂದರ್ಭ ಸ್ಫೋಟಕ ಸತ್ಯಗಳು ಕೂಡಾ ಬಯಲಾಗಿದೆ. ಆರೋಪಿಯಾಗಿರುವ ರಂಜಿತ್ ಇದೇ ರೀತಿ ಸಿಎಂ ಸಿದ್ಧರಾಮಯ್ಯ ಮತ್ತು ಪಕ್ಷ ಕಾಂಗ್ರೆಸ್ ಸೇರಿದಂತೆ ಹೊರ ರಾಜ್ಯದ ರಾಜಕಾರಣಿಯ ಬಗ್ಗೆಯೂ ಲಘುವಾಗಿ ಬರೆಯುತ್ತಿದ್ದ.
ಜಯನಗರ ಠಾಣೆ ಪೊಲೀಸರು ಬಂಧಿಸಿದ್ದ ಈ ಆರೋಪಿ ವಿಚಾರಣೆಯ ವೇಳೆ ಅನೇಕ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಏನೆಂದು ಪೋಸ್ಟ್ ಹಾಕಿದ್ದ…?
ಖಾಸಗಿ ಕಂಪೆನಿ ನೌಕರ ರಂಜಿತ್ ‘ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ‘ಕಿಲ್ ಡಿಕೆ ಬ್ರದರ್ಸ್’ ಎಂದು ಪೋಸ್ಟ್ ಹಾಕಿದ್ದ. ಪ್ರಚೋದನಕಾರಿ ಪೋಸ್ಟ್ ಹಾಕುತ್ತಿದ್ದ ಎಂದು ಆರೋಪಿಸಿ ಜಯನಗರ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶರತ್ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಈ ವೇಳೆ ಈತ ‘ ತಾನೂ ಸೈಬರ್ ಅಪರಾಧದ ಡಿಟೆಕ್ಟಿವ್’ ಎಂದು ಹೇಳಿಕೊಂಡು ಓಡಾಟ ನಡೆಸುತ್ತಿದ್ದ. ತಾನು ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ’ ಎಂದು ಹೇಳಿಕೊಂಡಿದ್ದ ಎಂಬ ಸಂಗತಿ ಬಯಲಾಗಿದೆ.
ಅಷ್ಟೇ ಅಲ್ಲದೆ ಈತ ರಾಜಕಾರಣಿಗಳ ನಿಂದನೆಯ ಜೊತೆಗೆ ಮುಸ್ಲಿಂ ಸಮುದಾಯದವರನ್ನೂ ಅವಮಾನಿಸಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.
ಆರೋಪಿ ರಂಜಿತ್ ‘ ಕಿಕ್ ಔಟ್ ಕಾಂಗ್ರೆಸ್’ ಎಂದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ರಂಜಿತ್ ವಿರುದ್ಧ ಧರ್ಮಗಳ ಮಧ್ಯೆ ದ್ವೇಷಕ್ಕೆ ಕಾರಣವಾಗುವ ಮಾನಹಾನಿಕರವಾಗಿ ವರ್ತಿಸುವ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.