ತಂತ್ರಜ್ಞಾನ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಚೀನಾ – ವಿಶ್ವದ ಅತ್ಯಂತ ವೇಗದ ಇಂಟರ್‌ನೆಟ್‌ ಸೇವೆ ಆರಂಭ

ತಂತ್ರಜ್ಞಾನ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಚೀನಾ – ವಿಶ್ವದ ಅತ್ಯಂತ ವೇಗದ ಇಂಟರ್‌ನೆಟ್‌ ಸೇವೆ ಆರಂಭ

ನ್ಯೂಸ್ ಆ್ಯರೋ : ತಂತ್ರಜ್ಞಾನ ಲೋಕದಲ್ಲಿ ತುಂಬಾನೇ ಮುಂದುವರೆದಿರುವ ಚೀನಾ ದೇಶ ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್‌ನೆಟ್ ಅನ್ನು ಅನಾವರಣ ಮಾಡಿದೆ.

ಹೊಸ ತಲೆಮಾರಿನ ವೇಗದ ಇಂಟರ್‌ನೆಟ್‌ ಎಂದೇ ಬಣ್ಣಿಸಲಾಗಿರುವ ಇದರಲ್ಲಿ 1 ಸೆಕೆಂಡ್‌ಗೆ 1.2 ಟೆರಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸಬಹುದಾಗಿದೆ. ಅಂದರೆ ಒಂದು ಸೆಕೆಂಡ್‌ಗೆ ಎಚ್‌ಡಿ ಗುಣಮಟ್ಟದ 156 ಚಲನಚಿತ್ರಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸಬಲ್ಲದು ಎಂದು ಹೇಳಲಾಗಿದೆ.

ಹಾಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ಇಂಟರ್‌ನೆಟ್‌ ಸೆಕೆಂಡ್‌ಗೆ 100 ಗಿಗಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸುತ್ತಿದೆ. ಇನ್ನು ಅಮೆರಿಕ ಈಚೆಗೆ ತನ್ನ 5ನೇ ತಲೆಮಾರಿನ ಅಂದರೆ ಸೆಕೆಂಡ್‌ಗೆ 400 ಗಿಗಾಬೈಟ್‌ ವೇಗದ ಇಂಟರ್‌ನೆಟ್‌ ಅನಾವರಣಗೊಳಿಸಿತ್ತು. ಆದರೆ ಚೀನಾ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ವೇಗಕ್ಕಿಂತ 12 ಪಟ್ಟು ವೇಗದ ಇಂಟರ್ನೆಟ್‌ ವೇಗ (1200 ಗಿಗಾಬೈಟ್‌) ಸಾಧಿಸುವ ಮೂಲಕ ಜಾಗತಿಕ ಕಂಪನಿಗಳಿಗೆ ಸವಾಲು ಎಸೆದಿದೆ.

ಚೀನಾದ ಹುವಾಯ್‌ ಟೆಕ್ನಾಲಜೀಸ್‌, ಸಿಂಗ್‌ಹ್ವಾ ವಿಶ್ವವಿದ್ಯಾಲಯ ಹಾಗೂ ಸೆರ್‌ನೆಟ್‌ ಎಂಬ ಶಿಕ್ಷಣ ಸಂಸ್ಥೆ ಜಂಟಿಯಾಗಿ ಬೀಜಿಂಗ್‌, ವುಹಾನ್‌ ಹಾಗೂ ಗ್ವಾಂಗ್‌ಝೂ ನಗರಗಳ 3000 ಕಿಲೋಮೀಟರ್‌ ನಡುವೆ ಆಪ್ಟಿಕಲ್‌ ಫೈಬರ್‌ ಜಾಲ ರೂಪಿಸಿವೆ. ಅದರಲ್ಲಿ ಈ ವೇಗದ ಇಂಟರ್‌ನೆಟ್‌ ದಾಖಲಾಗಿದೆ.

ಈ ಬಗ್ಗೆ ಮಾತನಾಡಿದ ಯೋಜನೆ ಪ್ರಾಜೆಕ್ಟ್‌ ಮುಖ್ಯಸ್ಥ ವು ಜಿಯಾನ್‌ಪಿಂಗ್, ಈ ಯೋಜನೆಯ ಯಶಸ್ಸು ಇದಕ್ಕಿಂತ ಹೆಚ್ಚಿನ ವೇಗದ ಸೇವೆ ಒದಗಿಸುವುದಕ್ಕೆ ಅಡಿಪಾಯವಾಗಲಿದೆ. ಹೊಸ ವೇಗದ ಇಂಟರ್‌ನೆಟ್‌ನಲ್ಲಿ ರವಾನಿಸಬಹುದಾದ ಮಾಹಿತಿಯನ್ನು ಸಾಮಾನ್ಯ ವೇಗದ ಜಾಲದಲ್ಲಿ ರವಾನಿಸಲು 10 ಟ್ರ್ಯಾಕ್‌ಗಳು ಬೇಕಾಗಿತ್ತು. ಹೀಗಾಗಿ ಆ ನಿಟ್ಟಿನಲ್ಲಿ ನೋಡುವುದಾದರೆ ಹೊಸ ಇಂಟರ್ನೆಟ್‌ ಅತ್ಯಂತ ಮಿತವ್ಯಯಕಾರಿ ಎಂದು ಹೇಳಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *