ಅರ್ಧ ಕ್ವಿಂಟಾಲ್ ಹೊತ್ತು ಆಗಸಕ್ಕೆ ಹಾರುತ್ತೆ ಈ ಡ್ರೋನ್…!! – ಒಡಿಶಾ ಮುಖ್ಯಮಂತ್ರಿ ಚಾಲನೆ ನೀಡಿದ ಡ್ರೋನ್ ಹೇಗಿದೆ ಗೊತ್ತಾ..‌!?

ಅರ್ಧ ಕ್ವಿಂಟಾಲ್ ಹೊತ್ತು ಆಗಸಕ್ಕೆ ಹಾರುತ್ತೆ ಈ ಡ್ರೋನ್…!! – ಒಡಿಶಾ ಮುಖ್ಯಮಂತ್ರಿ ಚಾಲನೆ ನೀಡಿದ ಡ್ರೋನ್ ಹೇಗಿದೆ ಗೊತ್ತಾ..‌!?

ನ್ಯೂಸ್‌ ಆ್ಯರೋ : ಒಡಿಶಾದ ಸ್ಕಿಲ್‌ ಕಾಂಕ್ಲೆವ್‌ 2023ನಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಭಾರೀ ತೂಕ ಹೊರುವ ಡ್ರೋನ್‌ ಪರಿಚಯಿಸಿದ್ದಾರೆ. ಸುಮಾರು 10 ಕಿ.ಮೀ.ವರೆಗೆ 50 ಕೆ.ಜಿ. ತೂಕ ಹೊರುವ ಸಾಮರ್ಥ್ಯವಿರುವಂತಹ ಡ್ರೋನ್‌ ಇದಾಗಿದೆ.

ಇಷ್ಟೊಂದು ತೂಕ ಹೊರುವ ಭಾರತದ ಮೊದಲ ಲಾಜಿಸ್ಟಿಕ್‌ ಡ್ರೋನ್‌ ಎಂಬ ಹಿರಿಮೆಗೆ ಬಾನ್‌ವಿ ಏರೋ ಡ್ರೋನ್‌ ಪಾತ್ರವಾಗಲಿದೆ. ಈ ಡ್ರೋನ್‌ನ ಟ್ರಯಲ್‌ ಹಾರಾಟವನ್ನೂ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಡೆಸಿಕೊಟ್ಟರು.

ಐಐಟಿ ಮಾಂಡಿ, ಎಐಸಿ ಸಿವಿ ರಾಮನ್‌ ಗ್ಲೋಬಲ್‌ ಯೂನಿವರ್ಸಿಟಿ (ಒಡಿಶಾ) ಮತ್ತು ನೀತಿ ಆಯೋಗ ಬೆಂಬಲದ ಸಂಸ್ಥೆ ಬಿಲ್ಡಿಂಗ್‌ ಎಲೆಕ್ಟ್ರಿಕಲ್‌ ಏರಿಯಲ್‌ ವೆಹಿಕಲ್ಸ್‌ ಜಂಟಿಯಾಗಿ ಬಾನ್‌ವಿ ಏರೋ ಡ್ರೋನ್‌ ಅಭಿವೃದ್ಧಿಪಡಿಸಿವೆ.

ಅರುಣಾಚಲ ಪ್ರದೇಶದ ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ತವಾಂಗ್‌ನಲ್ಲಿ 8000ರಿಂದ 10,000 ಅಡಿ ಎತ್ತರದಲ್ಲಿ 50 ಕಿಲೋ ಗ್ರಾಂಗಳಷ್ಟು ಸರಕುಗಳನ್ನು ಸಾಗಿಸುವ ಈ RM001 ಎಲೆಕ್ಟ್ರಿಕ್ ವೈಮಾನಿಕ ವಾಹನದ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ 14,000 ರಿಂದ 16,000 ಅಡಿ ಎತ್ತರದಲ್ಲಿ ಇದರ ಪ್ರಯೋಗಾರ್ಥ ಹಾರಾಟ ನಡೆಸಲಾಗುವುದು.
ತನ್ನ ಮುಂದಿನ ಹಂತದಲ್ಲಿ, ನಮ್ಮ ಸ್ಟಾರ್ಟ್ಅಪ್ RM002 ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಅದು 200 ಕಿಲೋಗ್ರಾಂಗಳಷ್ಟು ಸರಕುಗಳನ್ನು 40 ಕಿಲೋಮೀಟರ್‌ಗಳಷ್ಟು ದೂರದವರೆಗೆ ಸಾಗಿಸಬಲ್ಲದು ಎಂದು ಬಾನ್ವಿ ಏರೋದ ಸಹ-ಸಂಸ್ಥಾಪಕ ಮತ್ತು ಸಿಇಒ ಸತ್ಯಬ್ರತ ಶತಪತಿ ತಿಳಿಸಿದ್ದಾರೆ.

ಏರ್‌ ವೆಹಿಕಲ್‌ಗಳಿಂದ ಹಲವು ಪ್ರಯೋಜನಗಳಿವೆ. ಸರಕು ಸಾಗಾಣಿಕೆ ಮಾತ್ರವಲ್ಲದೆ ವಿಪತ್ತು ನಿರ್ವಹಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. ಒಡಿಶಾವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಇಲ್ಲಿ ನೈಸರ್ಗಿಕ ವಿಪತ್ತುಗಳು ಹೆಚ್ಚಾಗಿ ಸಂಭವಿಸುತ್ತ ಇರುತ್ತವೆ. ಚಂಡಮಾರುತ, ಪ್ರವಾಹ ಇತ್ಯಾದಿ ತೊಂದರೆಗಳು ಇಲ್ಲಿ ಸಾಮಾನ್ಯ. ಇಂತಹ ಪರಿಸ್ಥಿತಿಗಳಲ್ಲಿ ತುರ್ತು ನೆರವಿಗೆ ಈ ಡ್ರೋನ್‌ ನೆರವಾಗಬಲ್ಲದು. ಜತೆಗೆ, ದೂರದ ಗುಡ್ಡಗಾಡಿನ ಪ್ರದೇಶಗಳಿಗೆ ಸರಕು ಸಾಗಾಣಿಕೆಗೂ ನೆರವಾಗಲಿದೆ ಎಂದು ಸತ್ಯಬ್ರತ ಶತಪತಿ ತಿಳಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *