ಅಲ್ಲೆ ಫೋಟೋ ಅಲ್ಲೇ ಪ್ರಿಂಟ್ : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅತ್ಯಾಧುನಿಕ ಕ್ಯಾಮೆರಾ – ಇದರ ಬೆಲೆ ಎಷ್ಟು ಕಡಿಮೆ ಗೊತ್ತಾ.‌.!?

ಅಲ್ಲೆ ಫೋಟೋ ಅಲ್ಲೇ ಪ್ರಿಂಟ್ : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅತ್ಯಾಧುನಿಕ ಕ್ಯಾಮೆರಾ – ಇದರ ಬೆಲೆ ಎಷ್ಟು ಕಡಿಮೆ ಗೊತ್ತಾ.‌.!?

ನ್ಯೂಸ್ ಆ್ಯರೋ : ದಿನಕಳೆದಂತೆ ಅತ್ಯಾಧುನಿಕ ತಂತ್ರಜ್ಞಾನಗಳು ಕಣ್ತೆರೆಯುತ್ತಿವೆ. ಒಂದು ಕಾಲದಲ್ಲಿ ಕ್ಯಾಮರಾದಲ್ಲಿ ಫೋಟೋ ತೆಗೆದರೆ ಪ್ರಿಂಟ್ ಸಿಗಲು ಒಂದು ವಾರ ಕಾಯಬೇಕಿತ್ತು. ಅನಂತರ ಮೊಬೈಲ್, ಹೊಸಾ ರೀತಿಯ ಕ್ಯಾಮರಾಗಳು ಬಂದವು. ಆದರೆ ಇದೀಗ ಮಾರುಕಟ್ಟೆಗೆ ಬಂದಿರುವ ಕ್ಯಾಮರಾ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಫೋಟೋ ತೆಗೆದಲ್ಲೇ ಪ್ರಿಂಟ್ ತೆಗೆಯಬಹುದಾಗಿದೆ.

ಹೌದು, ಕ್ಯಾಮೆರಾ ಮಾರುಕಟ್ಟೆಯಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿ ಭಾರಿ ಬೇಡಿಕೆ ಹೊಂದಿದೆ. ತನ್ನ ಪ್ಯಾಕೆಟ್‌ ಸೈಜ್‌ ಮಿನಿ ಕ್ಯಾಮೆರಾಗಳ ಮೂಲಕ ಟೆಕ್‌ವಲಯದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದ ಈ ಕಂಪೆನಿ ಇದೀಗ ಅದೇ ಸಾಲಿನಲ್ಲಿ ಹೊಸ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಈ ಕ್ಯಾಮೆರಾ ಮೂಲಕ ಸ್ಥಳದಲ್ಲೇ ಫೋಟೋ ಪ್ರಿಂಟ್‌ ತೆಗೆಯಬಹುದಾಗಿದ್ದು, ಇದರ ಬೆಲೆ ಎಷ್ಟು, ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ನೋಡೋಣ ಬನ್ನಿ.

ಈ ಅತ್ಯಾಧುನಿಕ ಕ್ಯಾಮರಾ ಹೇಗಿದೆ ಗೊತ್ತಾ?

ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 12 ಪ್ರವಾಸ ಪ್ರಿಯರಿಗೆ ಸೂಕ್ತವಾಗಿದೆ. ಪ್ರವಾಸ ಮಾಡುವಾಗ ಸುಂದರ ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ಬೆಸ್ಟ್‌ ಚಾಯ್ಸ್‌ ಇದಾಗಿದೆ. ಇದನ್ನು ಪ್ರಮುಖವಾಗಿ ಕ್ಲೋಸ್-ಅಪ್ ಶಾಟ್‌ಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಲು ಇಷ್ಟಪಡುವವರಿಗೆ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಕ್ಯಾಮೆರಾ ಬಲೂನ್‌ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದೆ. ಈ ಕ್ಯಾಮೆರಾ ‘ಕ್ಲೋಸ್-ಅಪ್ ಮೋಡ್’ ಅನ್ನು ಹೊಂದಿದೆ ಎನ್ನಲಾಗಿದೆ.

ಇದರಲ್ಲಿ ಕ್ಲೋಸ್-ಅಪ್ ಮೋಡ್ ಇರುವ ಕಾರಣ ನೀವು ಒಮ್ಮೆ ಲೆನ್ಸ್‌ ಅನ್ನು ತಿರುಗಿಸುವ ಮೂಲಕ ಕ್ಲೋಸ್‌ ಮೋಡ್‌ ಅನ್ನು ಆಕ್ಟಿವ್‌ ಮಾಡಬಹುದು. ಜೊತೆಗೆ ಈ ಫೀಚರ್ಸ್‌ನಿಂದಾಗಿ ನೀವು ಕ್ಲೋಸ್-ಅಪ್ ಶಾಟ್‌ಗಳು ಮತ್ತು ಸೆಲ್ಫಿಗಳಲ್ಲಿ ಅತ್ಯುತ್ತಮ ಅನುಭವವನ್ನು ಪಡೆಯಬಹುದಾಗಿದೆ. ಜೊತೆಗೆ ಫ್ಯೂಜಿಫಿಲ್ಮ್‌ನ ಈ ಕ್ಯಾಮೆರಾದಲ್ಲಿ ವ್ಯೂಫೈಂಡರ್‌ ವ್ಯೂ ಫಿಲ್ಡ್‌ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೆ ಫೋಟೋ ಶೂಟ್‌ ಮಾಡುವಾಗ ಫೋಟೋದ ಸಂಯೋಜನೆಯನ್ನು ಪರಿಶೀಲಿಸಲು ಸೆಲ್ಫಿ ಮಿರರ್‌ ಅನ್ನು ಬಳಸಿಕೊಂಡು ಉತ್ತಮ‌ ಕ್ವಾಲಿಟಿ ಫೋಟೋಗಳನ್ನು‌ ಪಡೆಯಬಹುದಾಗಿದೆ.

ಇದರೊಂದಿಗೆ ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 12 ಕ್ಯಾಮೆರಾದಲ್ಲಿ ‘ಸ್ವಯಂಚಾಲಿತ ಎಕ್ಸ್‌ಪೋಸರ್’ ಫಂಕ್ಷನ್‌ ಕೂಡ ಲಭ್ಯವಿದೆ. ಇದರಿಂದ ಶಟರ್‌ ಅನ್ನು ಒತ್ತಿದ ತಕ್ಷಣವೆ ಬೆಳಕಿನ ಪ್ರಮಾಣವನ್ನು ಆಟೋಮ್ಯಾಟಿಕ್‌ ಡಿಟೆಕ್ಟ್‌ ಆಗಲಿದೆ. ಜೊತೆಗೆ ಅದಕ್ಕೆ ಅನುಗುಣವಾಗಿ ಶಟರ್‌ ವೇಗ ಮತ್ತು ಫ್ಲ್ಯಾಷ್ ಲೆವೆಲ್‌ ಅನ್ನು ಉತ್ತಮಗೊಳಿಸಲಿದೆ. ಈ ಕ್ಯಾಮೆರಾ ಔಟ್‌ಸೈಡ್‌ ಬ್ರೈಟ್‌ನೆಸ್‌ ಮತ್ತು ಲೋ ಲೈಟ್‌ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಲಿದೆ. ಇದರಿಂದ ನೀವು ಯಾವುದೇ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿದರೂ ನಿಮ್ಮ ಬಯಕೆಗೆ ತಕ್ಕಂತಹ ಫೋಟೋಗಳು ಸಿಗುತ್ತದೆ.

ಫ್ಯೂಜಿಫಿಲ್ಮ್ ಪ್ರಕಾರ ಈ ಕ್ಯಾಮೆರಾದಲ್ಲಿ ಬಳಕೆದಾರರು ಶಟರ್ ಬಟನ್ ಒತ್ತಿದ ಐದು ಸೆಕೆಂಡುಗಳಲ್ಲಿ ಫೋಟೋಗಳನ್ನು ಪ್ರಿಂಟ್‌ ತೆಗೆಯಬಹುದು. ಅಲ್ಲದೆ ಪ್ರಿಂಟ್ ಫೋಟೋದಲ್ಲಿ ಚಿತ್ರವು ಸಂಪೂರ್ಣವಾಗಿ ಗೋಚರಿಸಲು ಸರಿಸುಮಾರು 90 ಸೆಕೆಂಡುಗಳ ಕಾಲವನ್ನು ತೆಗೆದುಕೊಳ್ಳಲಿದೆ. ಅಂದರೆ ನೀವು ಫೋಟೋ ಕ್ಲಿಕ್ಕಿಸಿದ ಕ್ಷಣಾರ್ಧದಲ್ಲಿಯೇ ನಿಮ್ಮ ಫೋಟೋವನ್ನು ಪ್ರಿಂಟ್‌ ತೆಗೆದುಕೊಳ್ಳಬಹುದಾಗಿದೆ. ಇದು ನಿಮ್ಮ ಪ್ರವಾಸದ ಅನುಭವವ ಮತ್ತು ಪ್ರವಾಸದ ದಿನಗಳನ್ನು‌ ಹೆಚ್ಚಿಸುತ್ತದೆ.

ಬೆಲೆ ಮತ್ತು ಲಭ್ಯತೆ?

ಇಷ್ಟೊಂದು ಅತ್ಯಾಧುನಿಕ ತಂತ್ರಜ್ಞಾನವಿರುವ ಕ್ಯಾಮರಾ ಬೆಲೆ ತುಂಬಾ ಜಾಸ್ತಿ ಇರ್ಬೋದಪ್ಪಾ ಎಂದು ನೀವು ಯೋಚಿಸಿದರೆ ನಿಮ್ಮ‌ ಕಲ್ಪನೆ ತಪ್ಪು. ಯಾಕೆಂದರೆ ಫ್ಯೂಜಿಫಿಲ್ಮ್‌ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾ ಕೇವಲ 9,499ರೂ. ಬೆಲೆಯನ್ನು ಹೊಂದಿದೆ. ಈ ಕ್ಯಾಮರಾವನ್ನು ಭಾರತದಲ್ಲಿ ಇದೀಗ, ಫ್ಲಿಪ್‌ಕಾರ್ಟ್, ಅಮೆಜಾನ್, ನೈಕಾ ಮತ್ತು ಇನ್‌ಸ್ಟಾಕ್ಸ್ ವೆಬ್‌ಸೈಟ್‌ನಂತಹ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದಾಗಿದೆ. ಇದು ನೇರಳೆ, ನೀಲಿ, ಗುಲಾಬಿ, ಪುದೀನ ಮತ್ತು ಬಿಳಿ ಬಣ್ಣದ ಆಯ್ಕೆಗಳೂ‌ ಕೂಡ ಕ್ಯಾಮರಾ ಪ್ರಿಯರಿಗೆ ಲಭ್ಯವಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *