Cheethah : ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು – ಚೀತಾ ಮರುಪರಿಚಯ ಯೋಜನೆಗೆ ಮತ್ತೆ ಹಿನ್ನಡೆ

Cheethah : ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು – ಚೀತಾ ಮರುಪರಿಚಯ ಯೋಜನೆಗೆ ಮತ್ತೆ ಹಿನ್ನಡೆ

ನ್ಯೂಸ್ ಆ್ಯರೋ : ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ಬಿಡಲಾಗಿದ್ದ ಉದಯ್‌ ಎಂಬ 6 ವರ್ಷದ ಗಂಡು ಚೀತಾವೊಂದು ಭಾನುವಾರ ಸಾವನ್ನಪ್ಪಿದೆ. ಕಳೆದೊಂದು ತಿಂಗಳಲ್ಲಿ ಅರಣ್ಯದಲ್ಲಿ ಚೀತಾ ಸಾವಿನ ಎರಡನೇ ಪ್ರಕರಣ ಇದಾಗಿದೆ. ಹೀಗಾಗಿ ಭಾರತದ ವಾತಾವರಣಕ್ಕೆ ಆಫ್ರಿಕಾ ಚೀತಾಗಳು ಹೊಂದಿಕೊಳ್ಳುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾಗಳನ್ನು ಮತ್ತೆ ಬೆಳೆಸುವ ಮಹತ್ವಾಕಾಂಕ್ಷಿ ಚೀತಾ ಮರು ಪರಿಚಯ ಯೋಜನೆಗೆ ಮತ್ತೊಂದು ಹಿನ್ನಡೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಈ ವರ್ಷವಷ್ಟೇ ಭಾರತಕ್ಕೆ ತರಲಾಗಿದ್ದ ಉದಯ್ ಎಂಬ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ಭಾನುವಾರ ಸಂಜೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟಿದೆ. ಆರು ವರ್ಷದ ಚೀತಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅದಕ್ಕೆ ಉಂಟಾಗಿದ್ದ ಅನಾರೋಗ್ಯ ಸಮಸ್ಯೆ ಏನು ಎಂದು ತಿಳಿಯಲು ಮರಣೋತ್ತರ ಪರೀಕ್ಷೆ ವರದಿಗಾಗಿ ಅರಣ್ಯ ಅಧಿಕಾರಿಗಳು ಕಾಯುತ್ತಿದ್ದಾರೆ.

ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೃಹತ್ ಆವರಣದಲ್ಲಿ ದೈನಂದಿನ ತಪಾಸಣೆ ನಡೆಸುವಾಗ ಎರಡನೇ ಸಂಖ್ಯೆಯ ಆವರಣದಲ್ಲಿ ಚೀತಾ ಉದಯ್ ತಲೆಯನ್ನು ಕೆಳಕ್ಕೆ ಬಗ್ಗಿಸಿಕೊಂಡು ಕುಳಿತಿತ್ತು. ಅದು ನಡೆಯುವಾಗಲೂ ಪರದಾಡುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದರು. ಒಂದು ದಿನದ ಹಿಂದಷ್ಟೇ ಮಾಮೂಲಿ ಆರೋಗ್ಯ ತಪಾಸಣೆ ವೇಳೆ ಉದಯ್ ಆರೋಗ್ಯಯುತವಾಗಿ ಇರುವುದು ಕಂಡುಬಂದಿತ್ತು. ಆದರೆ 24 ಗಂಟೆಗಳ ಅವಧಿಯಲ್ಲಿ ಚೀತಾ ಆರೋಗ್ಯ ಹದಗೆಟ್ಟಿದ್ದು ಹೇಗೆ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಚೀತಾದ ಅಸ್ವಸ್ಥತೆ ಬಗ್ಗೆ ಪಶು ವೈದ್ಯಕೀಯ ತಂಡಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಚೀತಾ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ವೈದ್ಯರು ದೃಢಪಡಿಸಿದ್ದರು. ಅದಕ್ಕೆ ಚಿಕಿತ್ಸೆ ನೀಡಲು ಕೂಡಲೇ ಅದನ್ನು ಶಾಂತಗೊಳಿಸುವ ಅಗತ್ಯ ಇದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದರು. ಅದಕ್ಕೆ ಅರವಳಿಕೆ ಮದ್ದು ನೀಡಲು ಅನುಮತಿ ಕೊಡುವಂತೆ ವನ್ಯಜೀವಿ ಪಿಸಿಸಿಎಪ್ಗೆ ಕೋರಲಾಗಿತ್ತು.

ಬೆಳಿಗ್ಗೆ 11 ಗಂಟೆಗೆ ಉದಯ್ಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಅದರ ಆರೋಗ್ಯ ಸ್ಥಿತಿಯನ್ನು ಗಮನಿಸಿ, ಪ್ರತ್ಯೇಕ ವಾರ್ಡ್ ಗೆ ವರ್ಗಾಯಿಸಲಾಗಿತ್ತು. ನಿರಂತರ ನಿಗಾದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಸಂಜೆ 4ರ ಸುಮಾರಿಗೆ ಅದು ಮೃತಪಟ್ಟಿದೆ ಎನ್ನಲಾಗಿದೆ. ಕಳೆದ ಮಾರ್ಚ್‌ 27ರಂದು ಸಾಶಾ ಎಂಬ ಚೀತಾ ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿತ್ತು. ಇದನ್ನು ನಮೀಬಿಯಾದಿಂದ ಕರೆತರಲಾಗಿತ್ತು.

ದೇಶದಲ್ಲಿ ದೊಡ್ಡ ಬೆಕ್ಕುಗಳ ಜಾತಿಯ ಚೀತಾಗಳನ್ನು ಮರುಪರಿಚಯಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯಲ್ಲಿ ಭಾರತಕ್ಕೆ ತರಲಾದ 20 ಚಿರತೆಗಳಲ್ಲಿ 18 ಚೀತಾಗಳು ಈಗ ಉಳಿದಿವೆ. ಇದುವರೆಗೆ ಎರಡು ಹಂತದಲ್ಲಿ ಒಟ್ಟು 20 ಚೀತಾಗಳನ್ನು ಭಾರತಕ್ಕೆ ತಂದು ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ ಬಿಡಲಾಗಿದೆ. ಈ ಪೈಕಿ ಎರಡು ಇದೀಗ ಮೃತಪಟ್ಟಿದೆ. ಈ ಪೈಕಿ ಒಂದು 4 ಮರಿಗಳನ್ನು ಹೆತ್ತಿತ್ತು. ಇದೀಗ ಎರಡು ಸಾವಿನ ಬಳಿಕ ಚೀತಾಗಳ ಸಂಖ್ಯೆ 22ಕ್ಕೆ ಇಳಿಕೆಯಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *