ನಾನು ಮದುವೆ ಆಗೋದಿಲ್ಲ ಆದರೆ ‘ಇದು’ ಓಕೆ..!! – ಶಾಕಿಂಗ್ ಹೇಳಿಕೆ ಕೊಟ್ಟ ಮಿಲ್ಕಿ ಬ್ಯೂಟಿ ಹನಿ ರೋಸ್..!!

ನಾನು ಮದುವೆ ಆಗೋದಿಲ್ಲ ಆದರೆ ‘ಇದು’ ಓಕೆ..!! – ಶಾಕಿಂಗ್ ಹೇಳಿಕೆ ಕೊಟ್ಟ ಮಿಲ್ಕಿ ಬ್ಯೂಟಿ ಹನಿ ರೋಸ್..!!

ನ್ಯೂಸ್ ಆ್ಯರೋ : ಮಲೆಯಾಳಂ ಚಿತ್ರರಂಗದ ಮಿಲ್ಕಿ ಬ್ಯೂಟಿ, ಬಹುಭಾಷಾ ನಟಿ ಹನಿ ರೋಸ್ ಸಿನಿಮಾಗಳಿಗಿಂತ ಹೆಚ್ಚು ಸೋಶಿಯಲ್ ಮಿಡಿಯಾದಲ್ಲೇ ಖ್ಯಾತಿ ಗಳಿಸಿದ್ದಾರೆ. ಇವರ ಬೋಲ್ಡ್ ಮೈಮಾಟಕ್ಕೆ ಪಡ್ಡೆ ಹುಡುಗರು ನಿದ್ದೆಗೆಟ್ಟಿದ್ದಾರೆ. ಲಕ್ಷಾಂತರ ಜನ ಇವರ ಸೌಂದರ್ಯಕ್ಕೆ ಮರುಳಗಿ ಇವರನ್ನ ಫಾಲೋ ಮಾಡುತ್ತಿದ್ದಾರೆ. ಸದ್ಯ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿ , ಇತ್ತೀಚೆಗಷ್ಟೇ ತೆಲುಗಿನಲ್ಲಿ ಬಿಡುಗಡೆಯಾಗಿ 100 ಕೋಟಿ ಕ್ಲಬ್ ಸೇರಿದ ಬಾಲಯ್ಯ ನಟನೆಯ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ಹನಿ ರೋಸ್ ತಮ್ಮ ಬೋಲ್ಡ್ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದರು.

ಮಲಯಾಳಂ ನಟಿ ಹನಿ ರೋಸ್ ಅವರು 2005 ರಲ್ಲಿ 14 ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅನಂತರ ಸೌಂಡ್ ಆಫ್ ಬೂಟ್ , ಸಿಂಗಂ ಪುಲಿ, ಉಪ್ಲುಕಂದಮ್ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್, ಅಜಂತಾ,ಹೋಟೆಲ್ ಕ್ಯಾಲಿಫೋರ್ನಿಯಾ, ರಿಂಗ್ ಮಾಸ್ಟರ್, ಕುಂಬಾಶರಂ, ಚಾಲಕಿಕಾರನ್ ಸಂಗಾತಿ, ಇಟ್ಟಿಮನಿ: ಮೇಡ್ ಇನ್ ಚೀನಾ, ಬಿಗ್ ಬ್ರದರ್ ಹಾಗೂ ತೆಲುಗಿನ ವೀರಸಿಂಹ ರೆಡ್ಡಿ ಸೇರಿದಂತೆ ಹಲವಾರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇತ್ತೀಚೆಗೆ, ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಜೊತೆ ವೀರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಿದಷ್ಟು ರೋಸ್ ಅವರಿಗೆ ಇಷ್ಟೊಂದು ಖ್ಯಾತಿ ಬೇರೆ ಯಾವ ಚಿತ್ರದಲ್ಲೂ ಸಿಗಲಿಲ್ಲ. ಇದೀಗ ಎಲ್ಲರ ಫೇವರಿಟ್​ ಆಗಿರುವ ಹನಿ ರೋಸ್​, ತಮ್ಮ ಮದುವೆ ಮತ್ತು ಕೌಟುಂಬಿಕ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದು, ಈ ಹೇಳಿಕೆ ಭಾರೀ ಚರ್ಚೆಗೊಳಗಾಗಿದೆ.

ಮದುವೆ ಎಂದರೆ ಇಷ್ಟವಿಲ್ಲ!

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹನಿ ರೋಸ್​, ‘ನನಗೆ ಮದುವೆಯಾಗಲು ಇಷ್ಟವಿಲ್ಲ. ಆದರೆ, ತನ್ನ ಜೀವನದಲ್ಲಿ ಸಂಗಾತಿ ಒಬ್ಬರು ಬೇಕು. ಬೇರೆಯವರ ಮದುವೆಗೆ ಹೋಗುವುದು ಕೂಡ ನಾನು ಇಷ್ಟ ಪಡುವುದಿಲ್ಲ. ಮದುವೆಯಾಗುವುದೇ ನನಗೆ ಸಮಸ್ಯೆ. ಬೇರೆಯವರ ಮದುವೆಗೆ ಹೋದರೆ ಎಲ್ಲರ ಕಣ್ಣು ನನ್ನ ಮೇಲೆ ಬೀಳುತ್ತದೆ. ಹಾಗಾಗಿ ಯಾರ ಮದುವೆಗೂ ನಾನು ಹೋಗುವುದಿಲ್ಲ. ಜೊತೆಗೆ ಬಾಲ್ಯದಿಂದಲೂ ನನಗೆ ಮದುವೆ ಬಗ್ಗೆ ಆಸಕ್ತಿಯಿಲ್ಲ’ ಎಂದಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *