ಮಹಾ ಕುಂಭಮೇಳದಲ್ಲಿ ಆ್ಯಪಲ್ ಓನರ್ ಪತ್ನಿ ಭಾಗಿ; ಹೆಸರು ಬದಲಾಯಿಸಿ ಕೊಂಡ ಸ್ಟೀವ್ ಜಾಬ್ಸ್ ಮಡದಿ

ನ್ಯೂಸ್ ಆ್ಯರೋ: ಗಂಗಾ, ಯಮುನಾ, ಸರಸ್ವತಿ 3 ಪುಣ್ಯನದಿಗಳು ಸಮಾಗಮ ಆಗುವ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಐತಿಹಾಸಿಕ ಕುಂಭಮೇಳ ಇಂದಿನಿಂದ ಶುರುವಾಗಿದೆ. ಚಾರಿತ್ರಿಕ ಉತ್ಸವಕ್ಕೆ ಪ್ರಯಾಗ್ ನಗರ ಸಕಲ ರೀತಿಯಲ್ಲೂ ಸಿದ್ದಗೊಂಡಿದೆ. ಇಂದಿನಿಂದ ಆರಂಭವಾಗಲಿರುವ ಮಹಾಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರ ಸಮಾಗಮವಾಗಲಿದ್ದು ಬಹಳಾ ಬಿಜೃಂಬಣೆಯಿಂದ ನಡೆಯಲಿದೆ.
ಆ್ಯಪಲ್ ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಮಡದಿ ಲಾರೆನ್ ಪೊವೆಲ್ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಶನಿವಾರ ಭಾರತಕ್ಕೆ ಆಗಮಿಸಿದ ಅವರು ವಾರಾಣಸಿಗೆ ತೆರಳಿ ಕಾಶಿ ವಿಶ್ವನಾಥನ ದರ್ಶನ ಪಡೆದರು. ಈ ವೇಳೆ ಭಾರತೀಯ ಪೋಷಾಕು ಧರಿಸಿದ ಲಾರೆನ್, ನಿರಂಜನಿ ಅಖಾಡದ ಕೈಲಾಸನಂದ್ ಗಿರಿ ಸ್ವಾಮಿಗಳೊಂದಿಗೆ ದೇಗುಲದ ಗರ್ಭಗುಡಿಯ ಹೊರಗಿನಿಂದಲೇ ವಿಶ್ವನಾಥನ ದರ್ಶನ ಪಡೆದರು.
ದರ್ಶನದ ಬಳಿಕ ಮಾತನಾಡಿದ ಸ್ವಾಮಿಗಳು, ‘ಸಂಪ್ರದಾಯದ ಪ್ರಕಾರ ಹಿಂದೂ ಯೇತರರಿಗೆ ಶಿವಲಿಂಗ ಸ್ಪರ್ಶಿಸುವ ಅವಕಾಶವಿಲ್ಲ. ಆದ್ದರಿಂದಲೇ ಆಕೆ ಹೊರ ಗಿಂದ ದರ್ಶನ ಪಡೆದು ನಿಯಮವನ್ನು ಪಾಲಿಸಿದರು ಎಂದರು. ಕುಂಭ ಮೇಳ ದಲ್ಲಿ ಭಾಗವಹಿಸಲು ಆಗಮಿಸಿರುವ ಲಾರೆನ್, ಈ ವೇಳೆ ಕಲ್ಬವಾಸ್ ವ್ರತವನ್ನೂ ಕೈಗೊಳ್ಳಲಿದ್ದಾರೆ.
ವ್ರತಾಚರಣೆಗೆ ಆಗಮಿಸಿರುವ ಲಾರೆನ್ ಸ್ವಾಮಿ ಕೈಲಾಸನಂದ ಸ್ವಾಮಿಗಳು ಕಮಲಾ ಎಂದು ನಾಮಕರಣ ಮಾಡಿದ್ದಾರೆ. ಲಾರೆನ್ ತಮ್ಮ ಮಗಳಿ ದ್ದಂತೆ. ವ್ರತಾಚರಣೆಗೆ ಬಂದಿರುವ ಆಕೆಗೆ ‘ಕಮಲಾ’ ಎಂದು ಮರುನಾಮಕರಣ ಮಾಡಿದ್ದೇವೆ. ಆಕೆಯನ್ನು ತಮ್ಮ ಅಖಾಡಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
45 ದಿನ ನಡೆಯುವ ಮಹಾಕುಂಭ ಪ್ರಯಾಗರಾಜ್ ನಲ್ಲಿ 45 ದಿನಗಳ ಕಾಲ ನಡೆವ ಮಹಾಕುಂಭ ಮೇಳದಿಂದ 4 ಲಕ್ಷ ಕೋಟಿ ರುಪಾಯಿ ವ್ಯವಹಾರ ನಡೆಯುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ. ಸರ್ಕಾರದ ನಿರೀಕ್ಷೆ ಪ್ರಕಾರ ಕುಂಭ ಮೇಳಕ್ಕೆ 40 ಕೋಟಿ ಜನರು ಬರುವ ಸಾಧ್ಯತೆ ಇದೆ.
ಒಬ್ಬೊಬ್ಬರು ಸರಾಸರಿ 5000 ರುಪಾಯಿ ವೆಚ್ಚ ಮಾಡಿದರೂ 2 ಲಕ್ಷ ಕೋಟಿ ರುಪಅಯಿ ಹರಿದುಬರಲಿದೆ. ಇನ್ನು 10,000 ರುಪಾಯಿ ಖರ್ಚು ಮಾಡಿದರೆ 4 ಲಕ್ಷ ಕೋಟಿ ರುಪಾಯಿ ಬರಲಿದೆ ಎಂದು ಅಂದಾಜಿಸಿದೆ. ಅಲ್ಲದೇ ಉದ್ಯಮದ ಅಂದಾಜಿನ ಪ್ರಕಾರ, ಮಹಾ ಕುಂಭವು ನಾಮಮಾತ್ರ ಮತ್ತು ನೈಜ ಜಿಡಿಪಿ ಎರಡನ್ನೂ ಶೇಕಡಾ 1 ಕ್ಕಿಂತ ಹೆಚ್ಚಿಸುವ ನಿರೀಕ್ಷೆಯಿದೆ.
Leave a Comment