ಕೆಎಸ್​ಆರ್​ಟಿಸಿಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ – 148 ಬಸ್ ಸಾರ್ವಜನಿಕ ಸೇವೆಗೆ, ಈ ಹೊಸ ಬಸ್ ಹೇಗಿದೆ ಗೊತ್ತಾ?

ಕೆಎಸ್​ಆರ್​ಟಿಸಿಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ – 148 ಬಸ್ ಸಾರ್ವಜನಿಕ ಸೇವೆಗೆ, ಈ ಹೊಸ ಬಸ್ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಕೆಎಸ್​ಆರ್​ಟಿಸಿಯ ಪಲ್ಲಕ್ಕಿ ಉತ್ಸವಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದ ಗ್ರ್ಯಾಂಡ್‌ ಸ್ಟೆಪ್ ಮುಂಭಾಗದಲ್ಲಿ ಶನಿವಾರ ಬೆಳಗ್ಗೆ ಚಾಲನೆ ನೀಡಿದ್ದಾರೆ.

ಕೆಎಸ್ ಆರ್ ಟಿಸಿ ಯು ಒಟ್ಟು 148 ಬಸ್ ಗಳನ್ನು ಶನಿವಾರ ರಸ್ತೆಗೆ ಇಳಿಸಿದೆ. ಇದರಲ್ಲಿ 100 ಸಾಮಾನ್ಯ ಕೆಂಪು ಬಸ್ಸುಗಳು, “ಪಲ್ಲಕ್ಕಿ” ಎಂದು ಹೆಸರಿನಲ್ಲಿ ಕರೆಯಲ್ಪಡುವ 40 ಎಸಿ ರಹಿತ ಮತ್ತು 8 ಎಸಿ ಸ್ಲೀಪರ್ ಬಸ್ಸುಗಳನ್ನು ಸೇರಿದೆ. 148 ಬಸ್‌ಗಳಲ್ಲಿ 100 ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಿದೆ.

ದೂರ ಪ್ರಯಾಣ ಸುಖಕರವಾಗಿರಲು ಅನುಗುಣವಾದ ಬಸ್​ಗಳಿಗೆ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಹೊಸದಾಗಿ ಈ ಬಸ್​ಗಳಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಉಂಟಾಗಿರುವ ಒತ್ತಡ ತಪ್ಪಿಸಲು 100 ಸಾಮಾನ್ಯ ಬಸ್​ಗಳ ಸಂಚಾರಕ್ಕೂ ಗ್ರೀನ್‌ ಸಿಗ್ನಲ್ ನೀಡಲಾಗಿದೆ.

ರಾಜ್ಯದ 4 ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಿಂದ ಭಾರೀ ನಷ್ಟ ಉಂಟಾಗುತ್ತಿರುವುದರಿಂದ ಆದಾಯ ಹೆಚ್ಚಿಸಿಕೊಳ್ಳಲು ಸಾರಿಗೆ ಇಲಾಖೆ ಈ ಯೋಜನೆ ರೂಪಿಸಿದೆ.

ಅಶೋಕ್‌ ಲೈಲ್ಯಾಂಡ್‌ ಕಂಪನಿಯಿಂದ ನಿರ್ಮಿಸಿರುವ ಈ ಪ್ರತೀ ಬಸ್ ಗಳ ಬೆಲೆ 45 ಲಕ್ಷ ರೂಪಾಯಿ. ಅತ್ಯಾಕರ್ಷಕ ಹೊರಾಂಗಣ ಹೊರಾಂಗಣ, ಒಳಾಂಗಣ ವಿನ್ಯಾಸದೊಂದಿಗೆ ನಾನ್ ಎಸಿ ಸ್ಲೀಪರ್‌ ಬಸ್ 28 ಸೀಟ್ ಸಾಮರ್ಥ್ಯವನ್ನು ಹೊಂದಿದೆ. 40ರಲ್ಲಿ 30 ಬಸ್‌ ಗಳು ರಾಜ್ಯದೊಳಗೆ ಸಂಚಾರ ನಡೆಸಲಿದೆ. ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರ ರಾಜ್ಯಗಳಿಗೆ ತೆರಳಲಿವೆ. ಶನಿವಾರದಿಂದಲೇ ಕಾರ್ಯ ಆರಂಭಿಸುವ ಈ ಬಸ್ ಗಳಿಗೆ ಯಾವುದೇ ಹೆಸರು ಇಟ್ಟಿಲ್ಲ. ಸದ್ಯ ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿರುವ ಪಲ್ಲಕ್ಕಿ ಉತ್ಸವ ಎಂಬ ಹೆಸರಿನಿಂದಲೇ ಇದನ್ನು ಕರೆಯಲಾಗುತ್ತದೆ.

ಇನ್ನು ಈ ಬಸ್ ನ ಉದ್ದ11.3 ಮೀಟರ್, ಎಚ್.ಪಿ.ಯಿಂದ ಬಿಎಸ್-6 ತಂತ್ರಜ್ಞಾನ ಎಂಜಿನ್ ಅನ್ನು ಒಳಗೊಂಡಿದೆ. ಪ್ರತಿ ಆಸನಕ್ಕೂ ಮೊಬೈಲ್ ಸ್ಟ್ಯಾಂಡ್‌ಗಳೊಂದಿಗೆ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯಗಳು, ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಎಲ್ಇಡಿ ಸೀಟ್ ಸಂಖ್ಯೆ, ಎಲ್ಇಡಿ ಬೆಳಕು, ಪ್ರಯಾಣಿಕರ ಮಾಹಿತಿಗಾಗಿ ಆಡಿಯೋ ರಿಸೀವರ್‌ಗಳು, ಡಿಜಿಟಲ್ ಗಡಿಯಾರ ಮತ್ತು ಎಲ್ಇಡಿ ನೆಲಹಾಸು, ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಅನುಕೂಲಕರ ಸ್ಥಳ, ಹೆಚ್ಚುವರಿ ಸೌಕರ್ಯಕ್ಕಾಗಿ ದಿಂಬಿನ ವ್ಯವಸ್ಥೆ, ಚಾಲಕನಿಗೆ ಸಹಾಯ ಮಾಡಲು ಬಸ್‌ನ ಹಿಂಭಾಗದಲ್ಲಿ ಹೈಟೆಕ್ ಕ್ಯಾಮೆರಾಗಳನ್ನೂ ಇದು ಒಳಗೊಂಡಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *