
ಸತತ ಗರ್ಭಪಾತ ಹಿನ್ನೆಲೆ, ಆರು ತಿಂಗಳು ಆಸ್ಪತ್ರೆಯಲ್ಲೇ ವಾಸ – ಕೊನೆಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ “ಮಹಾತಾಯಿ
- ಕರ್ನಾಟಕ
- September 16, 2023
- No Comment
- 62
ನ್ಯೂಸ್ ಆ್ಯರೋ : ಸೂಕ್ತ ಚಿಕಿತ್ಸೆ ನೀಡದೆ ಆಸ್ಪತ್ರೆ ಆವರಣದಲ್ಲೇ ಗರ್ಭಿಣಿ ಮತ್ತು ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದ ಘಟನೆಗಳು ಇತ್ತೀಚೆಗೆ ವರದಿಯಾಗಿದ್ದವು. ಈ ನಡುವೆ ಇದೀಗ ಆಸ್ಪತ್ರೆಯೊಂದು ಕಳೆದ ಆರು ತಿಂಗಳ ಕಾಲ ಗರ್ಭಿಣಿ ಮಹಿಳೆಯನ್ನು ವೈದ್ಯರ ನಿಗಾದಲ್ಲಿ ಇರಿಸಿ ಸುಸೂತ್ರವಾಗಿ ಮಹಿಳೆಗೆ ಹೆರಿಗೆಯಾಗುವಂತೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಗರ್ಭಪಾತದ ಭಯದಿಂದ ಸುಮಾರು ಆರು ತಿಂಗಳ ಕಾಲ ಮಿಮ್ಸ್ ಆಸ್ಪತ್ರೆಯಲ್ಲಿ ವಾಸ ಮಾಡಿದ ಮಹಿಳೆ ಸೆ. 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಗ್ಗಹಳ್ಳಿಯ ಮಾದೇಶ್ ಮತ್ತು ಅವರ ಪತ್ನಿ ಜಯಲಕ್ಷ್ಮಿ ಅವರ ವಿವಾಹ ಏಳು ವರ್ಷಗಳ ಹಿಂದೆ ನಡೆದಿತ್ತು. ನಾಲ್ಕು ಬಾರಿ ಗರ್ಭಿಣಿಯಾಗಿದ್ದ ಜಯಲಕ್ಷ್ಮಿ ಅವರಿಗೆ ಅರೋಗ್ಯ ಸಮಸ್ಯೆಗಳ ಕಾರಣದಿಂದ 3 ತಿಂಗಳ ವೇಳೆಗೆ ಗರ್ಭಪಾತವಾಗುತ್ತಿತ್ತು. ಹೀಗಾಗಿ ಇವರ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿದ ಮಿಮ್ಸ್ ಆಸ್ಪತ್ರೆ ವೈದ್ಯರು ಜಯಲಕ್ಷಿ ಅವರನ್ನು ಆರು ತಿಂಗಳವರೆಗೆ ವೈದ್ಯಕೀಯ ನಿಗಾದಲ್ಲಿ ಇರಿಸಲು ತೀರ್ಮಾನಿಸಿದ್ದರು.
ಮಾರ್ಚ್ 10ರಂದು ಆಸ್ಪತ್ರೆಗೆ ದಾಖಲಾದ ಜಯಲಕ್ಷ್ಮಿ ಅವರನ್ನು ಸ್ತ್ರೀರೋಗ ತಜ್ಞರಾದ ಡಾ. ಮನೋಹರ್ ಅವರ ನೇತೃತ್ವದ ವೈದ್ಯರ ತಂಡ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಿತು. ಇದಕ್ಕೆ ವಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಬಿ.ಜೆ. ಮಹೇಂದ್ರ, ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್ ಅವರೂ ಸಹಕರಿಸಿದ್ದರು.