
ಬಿಜೆಪಿಯಲ್ಲಿ ಹಣವೇ ಪ್ರಧಾನವಲ್ಲ, ಬಡ ಕಾರ್ಯಕರ್ತರೂ ಶಾಸಕರಾಗಿದ್ದಾರೆ – ಟಿಕೆಟ್‌ಗಾಗಿ ಗೋವಿಂದ ಪೂಜಾರಿ ಪಕ್ಷದ ನಾಯಕರನ್ನು ನೇರ ಸಂಪರ್ಕಿಸಬಹುದಿತ್ತು : ಸಿಟಿ ರವಿ ಹೇಳಿಕೆ
- ರಾಜಕೀಯ
- September 16, 2023
- No Comment
- 32
ನ್ಯೂಸ್ ಆ್ಯರೋ : ಬಿಜೆಪಿಯಲ್ಲಿ ಹಣವೇ ಪ್ರಧಾನವಲ್ಲ, ಅದು ಮುಖ್ಯವಾಗಿರುತ್ತಿದ್ದರೆ ಇಂದು ಅದೆಷ್ಟೋ ಬಡ, ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿ ಜೈಲು ಸೇರಿರುವ ಚೈತ್ರಾ ಕುಂದಾಪುರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ಅವರು ಮಾತನಾಡಿದರು.
ಬಿಜೆಪಿಯಲ್ಲಿ ಹಣವೇ ಪ್ರಧಾನವಾಗಿದ್ದರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿ ಮುರುಳ್ಯ ಅವರಿಗೆ ಸಿಗುತ್ತಿರಲಿಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರು ನಾಯಕರಾಗುತ್ತಿರಲಿಲ್ಲ ಎಂದರು.
ಗೋವಿಂದ ಬಾಬು ಪೂಜಾರಿ ಅವರು ಟಿಕೆಟ್‌ಗಾಗಿ ನೇರವಾಗಿ ಬಿಜೆಪಿ ನಾಯಕರನ್ನೇ ಸಂಪರ್ಕಿಸಬಹುದಿತ್ತು. ಯಾಕೆಂದರೆ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರು ಕರಾವಳಿಯವರು. ಏನೇ ಆಗಲಿ ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದರು.