
ಚೈತ್ರಾ ಕುಂದಾಪುರ ವಂಚನೆ ಪ್ರಕರಣ – ವಂಚನೆ ಹಣದಲ್ಲಿ ಜಮೀನು, ಚಿನ್ನ ಖರೀದಿಸಿದ್ದ ಚೈತ್ರಾ, ಸಿಸಿಬಿ ಪೋಲಿಸರಿಂದ ರಿಕವರಿ ಮಹಜರು
- ಕರ್ನಾಟಕ
- September 16, 2023
- No Comment
- 64
ನ್ಯೂಸ್ ಆ್ಯರೋ : ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಚೈತ್ರ ಕುಂದಾಪುರ ಮತ್ತು ಗ್ಯಾಂಗ್ ಮಾಡುರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಮಹಜರು ರಿಕವರಿ ಆರಂಭವಾಗಿದೆ
ಬೆಂಗಳೂರಿನ ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಉಡುಪಿ ಜಿಲ್ಲೆಯ ಹಲವೆಡೆ ಸಿಸಿಬಿ ತಪಾಸಣೆ ನಡೆಸಿದೆ.
ಹಣ, ಆಸ್ತಿ ಪತ್ರ, ಜಮೀನು ಖರೀದಿಸಿರುವ ಶಂಕೆ ವ್ಯಕ್ತವಾಗಿದ್ದು, ಬೈಂದೂರು, ಕುಂದಾಪುರ, ಉಡುಪಿ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಉಪ್ಪೂರು ಶ್ರೀರಾಮ ಸೊಸೈಟಿಯಲ್ಲಿ ಹಣ ಚಿನ್ನ ಆಸ್ತಿ ಪತ್ರ ಇಡಲಾಗಿದೆ ಎನ್ನಲಾಗಿದ್ದು, ಆರೋಪಿ ಶ್ರೀಕಾಂತ್ ನಾಯಕ್ ನನ್ನು ಸಿಸಿಬಿ ಪೋಲಿಸರು ಸೊಸೈಟಿಗೆ ಕರೆ ತಂದು ತನಿಖೆ ನಡೆಸಿದ್ದಾರೆ. ಇನ್ನುಳಿದಂತೆ ಜಾಗ ಖರೀದಿ, ವಂಚನೆ ಹಣವನ್ನು ಡೆಪಾಸಿಟ್ ಇಟ್ಟ ಬ್ಯಾಂಕ್ ಗಳನ್ನು ಕೂಡ ಸಿಸಿಬಿ ಪೋಲಿಸರು ತಡಕಾಡಲು ಆರಂಭಿಸಿದ್ದಾರೆ.