
ಹೇಗಿದ್ದ ‘ತುಂಟಾಟ’ದ ಚೆಲುವೆ ಹೇಗಾದ್ರು ಗೊತ್ತಾ? – ಗುರುತೇ ಸಿಗದಷ್ಟು ಬದಲಾಗಿದ್ದಾರೆ ‘ಹುಡುಗಾಟ’ದ ರೇಖಾ..!
- ಮನರಂಜನೆ
- September 16, 2023
- No Comment
- 115
ನ್ಯೂಸ್ ಆ್ಯರೋ : ಹುಡುಗಾಟ, ಚೆಲ್ಲಾಟ, ತುಂಟಾಟ, ಬಾಸ್ ಹೀಗೆ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ರೇಖಾ ವೇದಾವ್ಯಾಸ್ ಅವರು ರೂಪದಲ್ಲಿ ಗುರುತೇ ಸಿಗಲಾರದಷ್ಟು ಬದಲಾಗಿದ್ದಾರೆ.
ನ್ಯಾಚುರಲ್ ಬ್ಯೂಟಿ, ನೈಜ ನಟನೆ, ಮನಮೋಹಕ ಮೈಮಾಟದ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದವರು ನಟಿ ರೇಖಾ. ಇವರು ಹುಚ್ಚ ಸಿನಿಮಾದಲ್ಲಿ ನಟ ಸುದೀಪ್‌ಗೆ ಜೋಡಿಯಾಗಿದ್ದರು. ಇದರಲ್ಲಿ ಇವರ ಹೋಮ್ಲಿ ಗರ್ಲ್, ಮುಗ್ಧ ಹುಡುಗಿ ಅಭಿಷ್ಠಾ ಪಾತ್ರ ಇಂದಿಗೂ ಮರೆಯಲು ಅಸಾಧ್ಯ. ಅದಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲೂ ಇವರು ನಟಿಸಿದ್ದರು. ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವಾಗಲೇ 2014ರಿಂದ ನಟನೆಯಿಂದ ದೂರ ಉಳಿದಿದ್ದರು.
ಇದೀಗ ಈಚೆಗೆ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರೇಖಾ ಅವರು ದೈಹಿಕವಾಗಿ ತುಂಬಾನೇ ಬದಲಾಗಿದ್ದಾರೆ. ತುಂಬಾನೇ ಸಪೂರವಾಗಿದ್ದು, ಚರ್ಮದಲ್ಲಿ ಕಾಂತಿ ಕಡಿಮೆಯಾಗಿದೆ. ಮುಖದ ಚಹರೆಯಲ್ಲಿ ಬದಲಾಗಿದ್ದು, ದೈಹಿಕವಾಗಿ ಬಹಳಷ್ಟು ದುರ್ಬಲರಾಗಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದಾರೆ. ಇವರೇನಾ ರೇಖಾ ಅನ್ನುವ ಮಟ್ಟಿಗೆ ಬದಲಾಗಿದ್ದಾರೆ. ಯಾಕೆ ಹೀಗಾಗಿದ್ದರೆ, ಆರೋಗ್ಯಕ್ಕೆ ಏನಾಗಿದೆ, ಯಾಕಿಷ್ಟು ವೀಕ್ ಆಗಿದ್ದಾರೆ ಎಂಬುದಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅಂದ್ಹಾಗೆ, ನಟಿ ರೇಖಾ ಅವರ ಈ ಬದಲಾವಣೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ರೇಖಾ ಅವರೂ ಸಹ ಈ ಬಗ್ಗೆ ಹೇಳಿಕೊಂಡಿಲ್ಲ.