
SIIMA Awards 2023: ಕಾಂತಾರ ಸಿನಿಮಾಕ್ಕೆ ಪ್ರಶಸ್ತಿಯ ಸಿಂಹಪಾಲು – ಠಕ್ಕರ್ ನೀಡಿದ 777 ಚಾರ್ಲಿ, ಕೆಜಿಎಫ್ 2
- ಮನರಂಜನೆ
- September 16, 2023
- No Comment
- 56
ನ್ಯೂಸ್ ಆ್ಯರೋ : ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಸೈಮಾ ಅವಾರ್ಡ್ (SIIMA Awards 2023 ) ಘೋಷಣೆಯಾಗಿದೆ. ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೆಜಿಎಫ್ ನಟ ಯಶ್ (KGF Yash), ಕಾಂತಾರ ರಿಷಬ್ ಶೆಟ್ಟಿ(Kantara Rishab Shetty), ಚಾರ್ಲಿ 777 ರಕ್ಷಿತ್ ಶೆಟ್ಟಿ (Rakshith Shetty Charli 777) ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಕನ್ನಡದಲ್ಲಿ ಕಾಂತಾರ, 777 ಚಾರ್ಲಿ, ಕೆಜಿಎಫ್ 2, ವಿಕ್ರಾಂತ್ ರೋಣ ಸಿನಿಮಾಗಳ ನಡುವೆ ತೀವ್ರ ಪೈಪೋಟಿಯಿತ್ತು. ಈ ಪೈಕಿ ಕಾಂತಾರ, ಚಾರ್ಲಿ 777 ಮೇಲುಗೈ ಸಾಧಿಸಿದೆ. ಅದರಲ್ಲೂ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಕಾಂತಾರ ಸಿನಿಮಾಗಾಗಿ ರಿಷಬ್ ಶೆಟ್ಟಿ ಪಾಲಾಗಿದೆ.
ಕಾಂತಾರ ಸಿನಿಮಾದ ಸಿಂಗಾರ ಸಿರಿಯೆ ಹಾಡಿಗಾಗಿ ವಿಜಯ್ ಪ್ರಕಾಶ್ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಲೀಲಾ ಪಾತ್ರ ಮಾಡಿದ್ದ ಸಪ್ತಮಿ ಗೌಡ ಅತ್ಯುತ್ತಮ ನಟಿ, ಅತ್ಯುತ್ತಮ ಸಾಹಿತ್ಯ ಸಿಂಗಾರ ಸಿರಿಯೆ ಹಾಡು ಬರೆದಿದ್ದ ಪ್ರಮೋದ್ ಮರವಂತೆ, ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಅತ್ಯುತ್ತಮ ಸಂಗೀತ ನಿರ್ದೇಶಕ, ಇದೇ ಸಿನಿಮಾದ ಕಾಮಿಡಿ ರೋಲ್ ಗಾಗಿ ಪ್ರಕಾಶ್ ತುಮಿನಾಡ್, ವಿಲನ್ ಪಾತ್ರಕ್ಕಾಗಿ ಅಚ್ಯುತ್ ಕುಮಾರ್ ಪ್ರಶಸ್ತಿ ಪಡೆದಿದ್ದಾರೆ.
ಅತ್ಯುತ್ತಮ ಸಿನಿಮಾವಾಗಿ ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿದ್ದ 777 ಚಾರ್ಲಿ ಸಿನಿಮಾ ಪ್ರಶಸ್ತಿ ಪಡೆದಿದೆ. ಗಾಳಿ ಪಟ 2 ಚಿತ್ರದಲ್ಲಿ ನಟನೆಗಾಗಿ ದಿಗಂತ್ ಅತ್ಯುತ್ತಮ ಪೋಷಕ ನಟ, ಹೋಂ ಮಿನಿಸ್ಟರ್ ಸಿನಿಮಾಗೆ ಅತ್ಯುತ್ತಮ ಪೋಷಕ ನಟಿ ಶುಭ ರಕ್ಷ, ವಿಕ್ರಾಂತ್ ರೋಣ ಸಿನಿಮಾದ ನೀತಾ ಅಶೋಕ್ ಉದಯೋನ್ಮುಖ ನಟಿ, ಕೆಜಿಎಫ್ 2 ಸಿನಿಮಾ ನಟನೆಗಾಗಿ ಶ್ರೀನಿಧಿ ಶೆಟ್ಟಿ ವಿಮರ್ಶಕರ ಅತ್ಯುತ್ತಮ ನಟಿ, ಪದವಿ ಪೂರ್ವ ಸಿನಿಮಾ ನಟನೆಗಾಗಿ ಪೃಥ್ವಿ ಶಾಮನೂರು ಉದಯೋನ್ಮುಖ ನಟ, ಕೆಜಿಎಫ್ 2 ಕ್ಯಾಮರಾ ಕೈ ಚಳಕಕ್ಕೆ ಭುವನ್ ಗೌಡ, ಚೊಚ್ಚಲ ಸಿನಿಮಾ ನಿರ್ದೇಶನಕ್ಕಾಗಿ ಡೊಳ್ಳು ಸಿನಿಮಾದ ನಿರ್ದೇಶಕ ಸಾಗರ್ ಪುರಾಣಿಕ್, ಇದೇ ಸಿನಿಮಾ ನಿರ್ಮಾಣಕ್ಕಾಗಿ ಪವನ್ ಒಡೆಯರ್ ದಂಪತಿ ಪ್ರಶಸ್ತಿ ಪಡೆದಿದ್ದಾರೆ.
ಸೈಮಾ ಅವಾರ್ಡ್ಸ್ (SIIMA 2023 )ಗೆ ಆಗಸ್ಟ್ 1ರಂದು ನಾಮ ನಿರ್ದೇಶಿತರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಸೆಪ್ಟೆಂಬರ್ 15 ರಂದು SIIMA 2023 ಪ್ರಶಸ್ತಿಯನ್ನು ವಿತರಿಸಲಾಗಿದೆ. ಇಂದು ಕೂಡ ಪ್ರಶಸ್ತಿ ಪ್ರಧಾನ ಸಮಾರಂಭ ಮುಂದುವರಿಯಲಿದೆ. 11 ನೇ ಆವೃತ್ತಿಯ ಸೈಮಾ ಅವಾರ್ಡ್ಸ್ ವಿತರಣೆ ಮಾಡಲಾಗುತ್ತಿದೆ. ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (SIIMA) ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನ ಚಿತ್ರೋದ್ಯಮಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.