
ಅನ್ನಭಾಗ್ಯ ಯೋಜನೆಯ ಅಕ್ಟೋಬರ್ ತಿಂಗಳ ಹಣ ನಿಮ್ಮ ಖಾತೆಗೆ ಜಮೆ ಆಗಿದೆಯಾ? – ಸಿಂಪಲ್ ಆಗಿ ಹೀಗೆ ಚೆಕ್ ಮಾಡಿ…
- ಕರ್ನಾಟಕ
- October 19, 2023
- No Comment
- 73
ನ್ಯೂಸ್ ಆ್ಯರೋ : ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ನಿರ್ಧಾರ ಮಾಡಿತ್ತು. ಆದರೆ ಅಕ್ಕಿ ಕೊರತೆಯಿಂದಾಗಿ 5ಕೆಜಿ ಅಕ್ಕಿ ವಿತರಿಸಿ, ಉಳಿದ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ ರೂ.34 ದರದಲ್ಲಿ ನಗದನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ.
ಇದರ ಪ್ರಯೋಜನವನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರು ಪಡೆಯಬಹುದು. ಬಿಪಿಎಲ್ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಾಡಿದವರ ಬ್ಯಾಂಕ್ ಖಾತೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ನಿಮ್ಮ ಖಾತೆಯಲ್ಲಿ ಹಣ ಬಂದಿದೆಯಾ ಎಂಬುದನ್ನು ನೋಡಲು ಇಲ್ಲಿದೆ ಮಾಹಿತಿ.
1: ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ
2: ಇ- ಸರ್ವಿಸ್ ಪೋರ್ಟಲ್‌ನಲ್ಲಿ ಡಿಬಿಟಿ ಎಂದು ಕಾಣಲಿದೆ, ಅದರ ಮೇಲೆ ಕ್ಲಿಕ್ ಮಾಡಿ
3: ಸ್ಟೇಟಸ್ ಆಫ್ ಡಿಬಿಟಿ ಅನ್ನು ಆಯ್ಕೆ ಮಾಡಿ
4: ನಂತರದ ಪುಟದಲ್ಲಿ ರೇಷನ್ ಕಾರ್ಡ್ ಸಂಖ್ಯೆ (ಆರ್‌ಸಿ ನಂಬರ್) ಭರ್ತಿ ಮಾಡಿ.
5: ಮುಂದುವರೆಯಿರಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
6: ಮುಂದಿನ ಪುಟದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆಯೇ, ಕ್ರೆಡಿಟ್ ಆಗಿಲ್ಲವೇ ಎಂಬ ಮಾಹಿತಿ ಲಭ್ಯವಾಗಲಿದೆ.
ಅನ್ನ ಭಾಗ್ಯ ಯೋಜನೆ ಜಾರಿಯಾದ ಮೊದಲ ಎರಡು ತಿಂಗಳಲ್ಲಿ ಫಲಾನುಭವಿಗಳಿಗೆ ಸುಮಾರು ₹ 294 ಕೋಟಿ ರೂಪಾಯಿ ನಗದು ವರ್ಗಾವಣೆಯಾಗಿಲ್ಲ ಎಂದು ಡಿಎಚ್ ವರದಿ ಮಾಡಿದೆ. ಈಗ ದಾಖಲೆ ಪರಿಶೀಲನೆ ಮತ್ತು ನಿಷ್ಕ್ರಿಯ ಬ್ಯಾಂಕ್ ಖಾತೆಗಳಂತಹ ಸಮಸ್ಯೆಗಳನ್ನು ಉಲ್ಲೇಖಿಸಿ ಸರ್ಕಾರವು ಜುಲೈನಲ್ಲಿ ಸುಮಾರು 30.90 ಲಕ್ಷ ಕಾರ್ಡ್‌ಗಳ (1.08 ಕೋಟಿ ಫಲಾನುಭವಿಗಳು) ಮತ್ತು ಆಗಸ್ಟ್‌ನಲ್ಲಿ 24.44 ಲಕ್ಷ ಕಾರ್ಡ್‌ಗಳ (73 ಲಕ್ಷ ಫಲಾನುಭವಿಗಳು) ಖಾತೆಗಳಿಗೆ ಜಮಾ ಮಾಡಿಲ್ಲ.
ಹಣ ಪಡೆಯಲು ಅಂಚೆ ಕಚೇರಿಯಲ್ಲೂ ಖಾತೆ ತೆರೆಯಬಹುದು. ‘ಅನ್ನಭಾಗ್ಯ’ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶವಿದೆ. ಅಂಚೆ ವಿತರಕನಿಗೆ ಅಗತ್ಯ ದಾಖಲೆ ಒದಗಿಸಿ ಮನೆ ಬಾಗಿಲಿನಲ್ಲೇ ಸೇವೆ ಪಡೆಯಬಹುದಾಗಿದೆ. ಅದಲ್ಲದೆ ಈ ಸೇವೆಯನ್ನು ಪಡೆದುಕೊಳ್ಳಲು ಅಂಚೆ ಇಲಾಖೆ ‘ಡಿ ಕ್ಯೂಬ್ ‘ ಆ್ಯಪ್ ಪರಿಚಯಿಸಿದೆ