
CWC2023 : ಆರು ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕಿಂಗ್ ಕೊಹ್ಲಿ – ಗಾಯಗೊಂಡು ಮೈದಾನದಿಂದ ಹೊರಬಿದ್ದ ಪಾಂಡ್ಯ
- ಕ್ರೀಡಾ ಸುದ್ದಿ
- October 19, 2023
- No Comment
- 58
ನ್ಯೂಸ್ ಆ್ಯರೋ : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat kohli) ಅವರು 6 ವರ್ಷಗಳ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಬೌಲಿಂಗ್ ನಡೆಸಿ ಗಮನಸೆಳೆದಿದ್ದಾರೆ.
ಬಾಂಗ್ಲಾ(India vs Bangladesh) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಗಾಯಗೊಂಡ ಕಾರಣ ಅವರ ಓವರ್ ಅನ್ನು ಪೂರ್ತಿಗೊಳಿಸುವ ಮೂಲಕ ಈ ಸಾಧನೆ ಮಾಡಿದರು.
ವಿರಾಟ್ ಕೊಹ್ಲಿ ಅವರು ಏಕದಿನ ವಿಶ್ವಕಪ್ನಲ್ಲಿ ಮೊದಲ ಬಾರಿ ಬೌಲಿಂಗ್ ನಡೆಸಿದ್ದು 2011ರ ವಿಶ್ವಕಪ್ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಒಂದು ಓವರ್ ಎಸೆದು 6 ರನ್ ನೀಡಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿಯೂ ಒಂದು ಓವರ್ ಎಸೆದಿದ್ದರು. ಇಲ್ಲಿಯೂ 6 ರನ್ ಬಿಟ್ಟುಕೊಟ್ಟಿದ್ದರು.
ಕೊನೆಯ ಬಾರಿ ವಿಶ್ವಕಪ್ನಲ್ಲಿ ಕೊಹ್ಲಿ ಬೌಲಿಂಗ್ ನಡೆಸಿದ್ದು 2017ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ಒಂದು ಓವರ್ ಬೌಲಿಂಗ್ ನಡೆಸಿ 7 ರನ್ ಬಿಟ್ಟುಕೊಟ್ಟಿದ್ದರು. ಇದೀಗ 6 ವರ್ಷಗಳ ಬಳಿಕ ಮತ್ತೆ ವಿಶ್ವಕಪ್ನಲ್ಲಿ ಬೌಲಿಂಗ್ ನಡೆಸಿದ್ದಾರೆ. ಆದರೆ ಇಲ್ಲಿ ಮೂರು ಬೌಲ್ ಮಾತ್ರ ಎಸೆದರು.