
ಹಮಾಸ್ ನ ಏಕೈಕ ಮಹಿಳಾ ನಾಯಕಿಯನ್ನು ಕೊಂದ ಇಸ್ರೇಲ್ – ಐದು ಸಾವಿರದತ್ತ ಏರಿಕೆ ಕಂಡ ಸಾವಿನ ಸಂಖ್ಯೆ..!!
- ಅಂತಾರಾಷ್ಟ್ರೀಯ ಸುದ್ದಿ
- October 19, 2023
- No Comment
- 95
ನ್ಯೂಸ್ ಆ್ಯರೋ : ಯುದ್ಧೋನ್ಮಾದದಲ್ಲಿರುವ ಇಸ್ರೇಲಿ ಸೇನೆಯು ನಿರಂತರವಾಗಿ ಹಮಾಸ್ ಭಯೋತ್ಪಾದಕರನ್ನು ಹತ್ಯೆ ಮಾಡುತ್ತಿದೆ. ಇದೀಗ ಹಮಾಸ್‌ನ ಏಕೈಕ ಮಹಿಳಾ ನಾಯಕಿ ಜಮೀಲಾ ಅಲ್ ಶಾಂತಿಯನ್ನು ಇಸ್ರೇಲಿ ಸೇನೆಯು ನಾಶಪಡಿಸಿದೆ ಎಂದು ಗುರುವಾರ ‘ದಿ ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.
ಈಕೆ ಭಯೋತ್ಪಾದಕ ಗುಂಪು ಹಮಾಸ್‌ನ ರಾಜಕೀಯ ಬ್ಯೂರೋದ ಕೆಲಸವನ್ನು ನಿರ್ವಹಿಸುತ್ತಿದ್ದರು. ಆದರೆ, ಜಮೀಲಾ ಅಲ್ ಶಾಂತಿಯನ್ನು ಇಸ್ರೇಲ್ ಸೇನೆ ಎಲ್ಲಿ ಕೊಂದಿದೆ ಎಂಬ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಜಮೀಲಾ ಅಲ್ ಶಾಂತಿ 2021 ರಲ್ಲಿ ರಾಜಕೀಯ ಬ್ಯೂರೋಗೆ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದಾಳೆ.
ಕಳೆದ ಅಕ್ಟೋಬರ್ 7 ರಂದು ಆರಂಭವಾದ ಈ ಯುದ್ಧದಲ್ಲಿ ಇಲ್ಲಿಯವರೆಗೆ ಒಟ್ಟು 4900 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ 1400 ಕ್ಕೂ ಹೆಚ್ಚು ಇಸ್ರೇಲಿ ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಗಾಜಾ ಪಟ್ಟಿಯಲ್ಲಿ 3478 ಜನರು ಸಾವನ್ನಪ್ಪಿದ್ದಾರೆ.
ಕೆಲವು ದಿನಗಳ ಹಿಂದೆ ಕೇಂದ್ರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಮಾಸ್ ಉನ್ನತ ಕಮಾಂಡರ್ ಅಯ್ಮನ್ ನೊಫಲ್ ಅಲಿಯಾಸ್ ಅಬು ಮೊಹಮ್ಮದ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲಿ ಸೇನೆಯು ತಿಳಿಸಿತ್ತು. ಆತ ಮುಖ್ಯ ಭಯೋತ್ಪಾದಕನಾಗಿದ್ದ.
ಅದೇ ಸಮಯದಲ್ಲಿ, ನುಖ್ಬಾ ಘಟಕದ ಸೌತ್ ಖಾನ್ ಯೂನಿಸ್ ಬೆಟಾಲಿಯನ್‌ನ ಕಮಾಂಡರ್ ಬಿಲಾಲ್ ಅಲ್-ಕೆದ್ರಾನನ್ನು ಸೇನೆಯು ಕೊಂದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ. ಅನೇಕ ಇಸ್ರೇಲಿಗಳ ಕೊಲೆಗೆ ಕೆದ್ರಾ ಕಾರಣವೆಂದು ಪರಿಗಣಿಸಲಾಗಿದೆ.