IPL FINAL 2023 : ವರುಣಾರ್ಭಟದಲ್ಲೇ ಕೊಚ್ಚಿ ಹೋಗುತ್ತಾ ಇಂದಿನ ಪಂದ್ಯ? – ಇಂದೂ ಕೂಡ ಮಳೆ ಬಂದ್ರೆ ಕಪ್ ಯಾರಿಗೆ?

IPL FINAL 2023 : ವರುಣಾರ್ಭಟದಲ್ಲೇ ಕೊಚ್ಚಿ ಹೋಗುತ್ತಾ ಇಂದಿನ ಪಂದ್ಯ? – ಇಂದೂ ಕೂಡ ಮಳೆ ಬಂದ್ರೆ ಕಪ್ ಯಾರಿಗೆ?

ನ್ಯೂಸ್ ಆ್ಯರೋ‌ : ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಐಪಿಎಲ್​ ಸೀಸನ್​ 16ರ ಚಾಂಪಿಯನ್​ ಯಾರು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ನಿನ್ನೆಯೇ ಉತ್ತರ ಸಿಗುತ್ತಿತ್ತು, ಲಕ್ಷಾಂತರ ಅಭಿಮಾನಿಗಳ ಕಾತುರಕ್ಕೆ ತೆರೆ ಬೀಳುತ್ತಿತ್ತು. ಆದರೆ ಮಳೆರಾಯ ರವಿವಾರದ ಫೈನಲ್ ಪಂದ್ಯಕ್ಕೆ ತಡೆಯೊಡ್ಡಿ ಕುತೂಹಲವನ್ನು ಇಂದಿಗೆ ಮುಂದೂಡಿದ್ದಾನೆ.

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಿನ್ನೆ (ಮೇ 28) ನಡೆಯಬೇಕಿದ್ದ ಗುಜರಾತ್​ ಸೂಪರ್​​ ಜೈಂಟ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​​ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಟಾಸ್​​ ಕೂಡ ಮಾಡಲಾಗದ ರೀತಿಯಲ್ಲಿ ಎಡೆಬಿಡದೇ ಸುರಿದ ಮಳೆ ಪಂದ್ಯವನ್ನೇ ಸ್ಥಗತಗೊಳಿಸಿತ್ತು. ಅಂಪೈರ್ಸ್​​​ ಕೊನೆಗೆ ಇಂದಿಗೆ ಪಂದ್ಯವನ್ನ ಮುಂದೂಡಿದರು.

ಸೂಪರ್ ಸಂಡೆ ಬದಲಿಗೆ ಸೂಪರ್ ಮಂಡೆ

ರಿಸರ್ವ್​ ಡೇ ಇದ್ದಿದ್ದಕ್ಕೆ ಇಂದಿಗೆ ಪಂದ್ಯ ಮುಂದೂಡಿಕೆಯಾಗಿದೆ. ಆದರೆ ಇವತ್ತು ಪಂದ್ಯ ನಡೆದೇ ಬಿಡುತ್ತೆ ಎಂದು ಖಚಿತವಾಗಿ ಹೇಳುವ ಹಾಗಿಲ್ಲ. ಯಾಕೆಂದರೆ ಇಂದೂ ಕೂಡ ನಿನ್ನೆಯ ಹಾಗೆ ಅನಿರೀಕ್ಷಿತವಾಗಿ ಮಳೆ ಬರುವ ಸಾಧ್ಯತೆ ಇದೆ.

ಏನಾಗಬಹುದು?

ಅಹಮದಾಬಾದ್​ನಲ್ಲಿ 38 ಡಿಗ್ರಿ ಸೆಲ್ಸಿಯಸ್​ನಿಂದ 26 ಡಿಗ್ರಿ ಸೆಲ್ಸಿಯಸ್​ ಉಷ್ಣತೆ ​ ಇರುವ ಸಾಧ್ಯತೆಯಿದ್ದು, ಶೇ. 53ರಷ್ಟು ಹ್ಯುಮಿಡಿಟಿ ಇರಲಿದೆ. ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಶೇ. 12ರಷ್ಟಿದೆ. ಹವಾಮಾನ ಇಲಾಖೆಯ ವರದಿ ​ ಪ್ರಕಾರ ಇಂದು ಮಳೆ ಬರುವ ಸಾಧ್ಯತೆ ಕಡಿಮೆ. ಹಾಗಂತ ಬರೋದೆ ಇಲ್ಲ ಹೇಳುವಂತಿಲ್ಲ. ಯಾಕೆಂದರೆ ರವಿವಾರ ಬೆಳಗ್ಗೆ ಕೂಡ ಅಹಮದಾಬಾದ್​​ನಲ್ಲಿ ಮಳೆ ಬರುವ ಸುಳಿವೇ ಇರಲಿಲ್ಲ. ಆದರೆ ಸಂಜೆ ಇದಕ್ಕಿದ್ದಂತೆ ಸುರಿದ ಮಳೆ ಇಂದಿಗೆ ಪಂದ್ಯವನ್ನೇ ಅಪೋಶನ ತೆಗೆದುಬಿಟ್ಟಿತು.

ಇಂದಿನ ದಿನದಾಟಕ್ಕೂ ಮಳೆ ಅಡ್ಡಿಪಡಿಸಿದರೆ ರಾತ್ರಿ 9.30ರವರೆಗೆ ಕಾದು ನೋಡುವ ತಂತ್ರವನ್ನು ಅಂಪೈರ್​​ಗಳು ಅನುಸರಿಸಲಿದ್ದಾರೆ. 9.30ರ ಒಳಗೆ ಪಂದ್ಯ ಆರಂಭವಾದರೆ ಯಾವುದೇ ಓವರ್​​ ಕಡಿತವಾಗಲ್ಲ. ಒಂದು ವೇಳೆ ರಾತ್ರಿ 9.30ರ ಬಳಿಕ ಪಂದ್ಯ ಆರಂಭವಾದರೆ ಓವರ್​ಗಳಲ್ಲಿ ಕಡಿತ ಮಾಡಲಾಗುತ್ತೆ. ಇನ್ನು ರಾತ್ರಿ 12 ಗಂಟೆಯ ಬಳಿಕ ಪಂದ್ಯಕ್ಕೆ ಮಳೆ ಅವಕಾಶ ಮಾಡಿಕೊಟ್ರೆ ತಲಾ 5 ಓವರ್​​ಗಳ ಆಟವನ್ನು ಆಡಿಸಲಾಗುತ್ತದೆ.

ಪಂದ್ಯ ರದ್ದಾದರೆ ಚಾಂಪಿಯನ್​ ಯಾರು?

ನಿನ್ನೆ ಸುರಿದಂತೆ ಇಂದೂ ಎಡೆ ಬಿಡದೇ ಮಳೆ ಸುರಿದರೆ ಲೀಗ್​ ಹಂತದಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಕ್ಕೆ ಟ್ರೋಫಿ ಒಲಿಯಲಿದೆ. ಚೆನ್ನೈಗಿಂತ ಲೀಗ್​ ಹಂತದಲ್ಲಿ ಗುಜರಾತ್​​ ತಂಡ 2 ಪಂದ್ಯ ಹೆಚ್ಚು ಗೆದ್ದಿದ್ದು, ಚಾಂಪಿಯನ್​ ಆಗಿ ಹೊರ ಹೊಮ್ಮಲಿದ್ದು, ತವರಿನ ಅಂಗಳದಲ್ಲಿ 2ನೇ ಟ್ರೋಫಿಗೆ ಮುತ್ತಿಕ್ಕಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *