‘ಮತ್ತೆ ಮದುವೆ’ ಚಿತ್ರಕ್ಕಾಗಿ ಸ್ಟಾರ್ ನಟಿಯರಿಗಿಂತ ಅಧಿಕ ಸಂಭಾವನೆ ಪಡೆದ ಪವಿತ್ರಾ ಲೋಕೇಶ್? – ಪಡೆದದ್ದೆಷ್ಟು ಕೋಟಿ ಗೊತ್ತಾ?

‘ಮತ್ತೆ ಮದುವೆ’ ಚಿತ್ರಕ್ಕಾಗಿ ಸ್ಟಾರ್ ನಟಿಯರಿಗಿಂತ ಅಧಿಕ ಸಂಭಾವನೆ ಪಡೆದ ಪವಿತ್ರಾ ಲೋಕೇಶ್? – ಪಡೆದದ್ದೆಷ್ಟು ಕೋಟಿ ಗೊತ್ತಾ?

ನ್ಯೂಸ್ ಆ್ಯರೋ‌ : ಪವಿತ್ರಾ ಲೋಕೇಶ್ ಕನ್ನಡದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ನಾಯಕಿ ಜೊತೆಗೆ ಪೋಷಕ ಪಾತ್ರ-ಯಾವುದೇ ಇರಲಿ ಅದಕ್ಕೆ ಅವರು ಜೀವ ತುಂಬುತ್ತಾರೆ. ಎತಹ ಪಾತ್ರವನ್ನೂ ಲೀಲಾಜಾಲವಾಗಿ ಮಾಡುವ ಕೆಲವೇ ಕೆಲವು ಕಲಾವಿದರಲ್ಲಿ ಇವರೂ ಒಬ್ಬರು. ಹೀಗಾಗಿ ಇವರು ತೆಲುಗು ಚಿತ್ರರಂಗದಲ್ಲೂ ಜನಪ್ರಿಯ. ಇತ್ತೀಚೆಗೆ ತೆರೆಕಂಡ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಭಿನಯದ ‘ಮಳ್ಳಿ ಪೆಳ್ಳಿ’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಪವಿತ್ರಾ ಲೋಕೇಶ್ ಪಡೆದ ಸಂಭಾವನೆಯ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಬಾಲಿವುಡ್ ಸ್ಟಾರ್ ನಾಯಕಿಯರು ಪಡೆದುಕೊಳ್ಳುವ ಸಂಭಾವನೆಯಷ್ಟು ಪಡೆದುಕೊಂಡಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ.

10 ಕೋಟಿ ರೂ. ಸಂಭಾವನೆ?!

ನರೇಶ್ ಮತ್ತು ಪವಿತ್ರಾ ಲೋಕೇಶ್ ಡೇಟಿಂಗ್ ನಡೆಸುತ್ತಿರುವ ವಿಷಯ ಇತ್ತೀಚೆಗೆ ಭಾರೀ ಚರ್ಚೆ ಹುಟ್ಟು ಹಾಕಿತ್ತು, ನರೇಶ್ ಅವರ ಪತ್ನಿ ಈ ಬಗ್ಗೆ ಆಕ್ಷೇಪ ಎತ್ತಿದ್ದು ಸುದ್ದಿಯಾಗಿತ್ತು. ಈ ಎಲ್ಲ ಘಟನೆಗಳನ್ನು ಆಧರಿಸಿ ಇವರಿಬ್ಬರ ನಿಜ ಜೀವನದ ಕಥೆ ‘ಮಳ್ಳಿ ಪೆಳ್ಳಿ’ ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ಪವಿತ್ರಾ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಈ ಚಿತ್ರವನ್ನು ಸ್ವತಃ ನರೇಶ್ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಪವಿತ್ರಾಗೆ ದುಬಾರಿ ಸಂಭಾವನೆ ನೀಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಸಾಮಾನ್ಯವಾಗಿ ಪವಿತ್ರಾ ಒಂದು ದಿನಕ್ಕೆ 50ರಿಂದ 60 ಸಾವಿರ ರೂ. ಸಂಭಾವನೆ ಪಡೆಯುತ್ತಾರೆ.

‘ಮಳ್ಳಿ ಪೆಳ್ಳಿ’ ಚಿತ್ರ ‘ಮತ್ತೆ ಮದುವೆ’ ಹೆಸರಿನಲ್ಲಿ ಕನ್ನಡದಲ್ಲೂ ತೆರೆ ಕಂಡಿದೆ. ಈ ಚಿತ್ರದ ಪ್ರಮೋಷನ್ ವೇಳೆಯಲ್ಲಿ ನರೇಶ್ ಮತ್ತು ಪವಿತ್ರಾ ಇಬ್ಬರು ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಇಬ್ಬರು ಸಹ ಜೀವನ ನಡೆಸುತ್ತಿರುವ ಬಗ್ಗೆ ನರೇಶ್ ಹೇಳಿಕೊಂಡಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *