
Chess World Cup : ಫೈನಲ್ ನಲ್ಲಿ ಸೋತರೂ ಪ್ರಜ್ಞಾನಂದ ಗೆದ್ದಿದ್ದೆಷ್ಟು ಮೊತ್ತ ಗೊತ್ತಾ? – ಗೆದ್ದ ಕಾರ್ಲ್ ಸೆನ್ ಜೇಬಿಗಿಳಿಸಿದ್ದೆಷ್ಟು ನೋಡಿ…
- ಕ್ರೀಡಾ ಸುದ್ದಿ
- August 24, 2023
- No Comment
- 152
ನ್ಯೂಸ್ ಆ್ಯರೋ : ಅಜರ್ ಬೈಜಾನ್’ನ ಬಾಕುನಲ್ಲಿ ನಡೆದ ವಿಶ್ವ ಚೆಸ್ ಪಂದ್ಯಾವಳಿಯ ಫೈನಲ್ ನ ಟೈ ಬ್ರೇಕರ್ ಸ್ಪರ್ಧೆಯಲ್ಲಿ ಭಾರತದ ಆರ್. ಪ್ರಜ್ಞಾನಂದ ಎರಡೂ ಸುತ್ತಿನಲ್ಲೂ ಸೋಲು ಅನುಭವಿಸಿ ನಿರಾಸೆ ಅನುಭವಿಸಿದ್ದು, ಮ್ಯಾಗ್ನಸ್ ಕಾರ್ಲ್ಸನ್ ವಿಶ್ವ ಕಪ್ ಗೆದ್ದಿದ್ದಾರೆ. ಇದೀಗ ಫೈನಲ್ ನಲ್ಲಿ ಸೆಣಸಾಡಿದವರು ಪಡೆದ ಪ್ರಶಸ್ತಿ ಮೊತ್ತ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
ಮಂಗಳವಾರ ನಡೆದ ಮೊದಲ ಸುತ್ತು, ಬುಧವಾರದ ದ್ವಿತೀಯ ಸುತ್ತಿನ ಫೈನಲ್ ಪಂದ್ಯ ಕೂಡ ಡ್ರಾಗೊಂಡಿತ್ತು. ಇದರೊಂದಿಗೆ ಎರಡೂ ಕ್ಲಾಸಿಕಲ್ ಗೇಮ್‌ಗಳಲ್ಲಿ ಫಲಿತಾಂಶ ದಾಖಲಾಗಿರಲಿಲ್ಲ. ಇಂದು ಮೂರನೇ ದಿನದ ಟೈ ಬ್ರೇಕರ್‌ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ‍್ಯಾಪಿಡ್ ಗೇಮ್‌ಗಳನ್ನು ಆಡಿದರು. ಎರಡರಲ್ಲೂ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಭರವಸೆಯ ಪ್ರತಿಭೆ ಪ್ರಜ್ಞಾನಂದ ನಾರ್ವೆಯ ಚೆಸ್ ಮಾಸ್ಟರ್ ಎದುರು ವಿರೋಚಿತ ಸೋಲು ಅನುಭವಿಸಿದರು.
ತಮಿಳುನಾಡಿನ 18 ವರ್ಷದ ಪ್ರಜ್ಞಾನಂದ, ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್ ನಲ್ಲಿ ಫೈನಲ್ ಹಂತಕ್ಕೆ ತಲುಪಿದ 2ನೇ ಭಾರತೀಯ ಎನ್ನುವ ಖ್ಯಾತಿ ಪಡೆದಿದ್ದಾರೆ. 2000 ಮತ್ತು 2002ರಲ್ಲಿ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿದ್ದರು. ಈಗ ಪ್ರಜ್ಞಾನಂದ ಪ್ರಬಲ ಸ್ಪರ್ಧೆ ಒಡ್ಡಿದ್ದು 5 ಬಾರಿಯ ವಿಶ್ವ ಚಾಂಪಿಯನ್ ಗೆ ಎನ್ನುವುದು ಉಲ್ಲೇಖಾರ್ಹ. ಇಂದಿನ ಪಂದ್ಯದಲ್ಲಿ ಪ್ರಜ್ಞಾನಂದ ಜಯಗಳಿಸುವ ನಿರೀಕ್ಷೆ ಹೆಚ್ಚಿತ್ತು. ಆದರೆ ಅಪರೂಪದ ಅವಕಾಶವನ್ನು ಯುವ ಆಟಗಾರ ಅನುಭವದ ಕೊರತೆಯಿಂದ ಕೈಚೆಲ್ಲಿದ್ದಾರೆ.
ಸಿಗುವ ಬಹುಮಾನದ ಮೊತ್ತ ಎಷ್ಟು?
ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕಾರ್ಲ್ ಸೆನ್ ಸುಮಾರು 90,93,551 ರೂ. ಸಿಕ್ಕಿದ್ದು, ರನ್ನರ್ ಅಪ್ ಸ್ಥಾನ ಪಡೆದ ಪ್ರಜ್ಞಾನಂದ 66,13,444 ರೂಪಾಯಿ ಜೇಬಿಗಿಳಿಸಿಕೊಂಡಿದ್ದಾರೆ.