
ಕೊಡವ ಶೈಲಿಯಲ್ಲಿ ಹಸೆಮಣೆಗೇರಿದ ಹರ್ಷಿಕಾ-ಭುವನ್ – ಅದ್ಧೂರಿ ಮದುವೆಯ ವೆರೈಟಿ ಮೆನುವಿನಲ್ಲಿ ಏನೇನಿತ್ತು ಗೊತ್ತಾ?
- ಮನರಂಜನೆ
- August 24, 2023
- No Comment
- 77
ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಮತ್ತೊಂದು ಮದುವೆಗೆ ಸಾಕ್ಷಿಯಾಗಿದೆ. ಇಂದು (ಆಗಸ್ಟ್ 24) ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕೊಡಗು ಸಂಪ್ರದಾಯದಂತೆ ಹಸೆಮಣೆಗೇರಿದರು. ಈ ಅದ್ದೂರಿ ಸಮಾರಂಭಕ್ಕೆ ಸ್ಯಾಂಡಲ್ ವುಡ್ ತಾರೆಯರು, ಸೆಲೆಬ್ರಿಟಿಗಳು ಆಗಮಿಸಿದ್ದರು.
ವೈವಿಧ್ಯಮಯ ಮೆನು
ಇನ್ನು ವಿವಾಹ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ವೆಜ್ ಮತ್ತು ನಾನ್ ವೆಜ್ ಶೈಲಿಯ ವಿವಿಧ ಖಾದ್ಯಗಳು ಆಹಾರದ ಮೆನುವಿನಲ್ಲಿದ್ದವು.
ವೆಜ್ ಮೆನುವಿನಲ್ಲಿ ಪಲಾವ್, ಬೆಂಡೆಕಾಯಿ ಫ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ ಇತ್ತು. ಕೊಡವ ಶೈಲಿಯ ನೂಪಟ್ಟು, ಪೋರ್ಕ್ ಫ್ರೈ, ಪೋರ್ಕ್ ಕರಿ, ಮಟನ್ ಬಿರಿಯಾನಿ, ಮಟನ್ ಫ್ರೈ, ಚಿಕನ್ ಫ್ರೈ ಸೇರಿದಂತೆ ಹಲವು ನಾನ್ ವೆಜ್ ಐಟಂಗಳಿದ್ದವು.
ಮದುವೆ ಸಮಾರಂಭಕ್ಕೆ ಕಲಾವಿದರಾದ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ಅನು ಪ್ರಭಾಕರ್, ರಘು ಮುಖರ್ಜಿ, ತಬಲಾ ನಾಣಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮುಗುಗೇಶ್ ನಿರಾಣಿ ಮತ್ತಿತರರು ಆಗಮಿಸಿದ್ದರು.
ಇನ್ನು ಕೊಡವ ಸಂಪ್ರದಾಯ ಶೈಲಿಯ ಉಡುಗೆಗಳಲ್ಲಿ ಹರ್ಷಿಕಾ ಮತ್ತು ಭುವನ್ ಕಾಣಿಸಿಕೊಂಡರು. ಹರ್ಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರೆ ಭುವನ್ ಬಿಳಿ ಬಣ್ಣದ ಬಟ್ಟೆ ಜೊತೆಗೆ ಪೇಟ ತೊಟ್ಟು ಗಮನ ಸೆಳೆದರು.