
ಭಾರತಕ್ಕೆ ಬರಲಿದ್ದಾರೆ ಡಬ್ಲ್ಯುಡಬ್ಲ್ಯುಇ ದಂತಕಥೆ ಜಾನ್ ಸೀನಾ – ಯಾವಾಗ? ಎಲ್ಲಿಗೆ?ಸಂಪೂರ್ಣ ಮಾಹಿತಿ ಇಲ್ಲಿದೆ..
- ಕ್ರೀಡಾ ಸುದ್ದಿ
- August 24, 2023
- No Comment
- 61
ನ್ಯೂಸ್ ಆ್ಯರೋ : ಡಬ್ಲ್ಯುಡಬ್ಲ್ಯುಇ ನೋಡುಗರಿಗೆ ಜಾನ್ ಸೀನಾ ಬಗ್ಗೆ ಗೊತ್ತಿರುತ್ತದೆ. ಕುಸ್ತಿ ಅಖಾಡದ ಅಮೆರಿಕದ ಈ ಸ್ಟಾರ್ ನ ಹೋರಾಟದ ಶೈಲಿಗೆ ಬೆರಗಾಗದವರಿಲ್ಲ. ಇದೀಗ ಜಾನ್ ಸೀನಾ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದಿದೆ. ಹೌದು, ಅವರು ಭಾರತಕ್ಕೆ ಬರಲಿದ್ದಾರೆ.
ಯಾವಾಗ?
ಸೆಪ್ಟಂಬರ್ 8ರಂದು ತೆಲಂಗಾಣದ ಹೈದರಾಬಾದ್ ಜಿ.ಎಂ.ಸಿ. ಬಾಲಯೋಗಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಸೂಪರ್ ಸ್ಟಾರ್ ಸ್ಪೆಕ್ಟಾಕಲ್ ಈವೆಂಟ್ ನಲ್ಲಿ ಜಾನ್ ಸೀನಾ ಭಾಗವಹಿಸಲಿದ್ದಾರೆ. ಜೊತೆಗೆ ಅಖಾಡಕ್ಕೂ ಇಳಿಯಲಿದ್ದಾರೆ.
ವಿಶೇಷ ಎಂದರೆ ಬರೋಬ್ಬರಿ 16 ಬಾರಿಯ ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಜಾನ್ ಸೀನಾ ಅವರ ಭಾರತದ ಮೊದಲ ಪಂದ್ಯ ಇದಾಗಲಿದೆ. ಆದರೆ ಅವರ ಎದುರಾಳಿ ಯಾರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಭಾರತಕ್ಕೆ ಬರುತ್ತಿರುವ ಬಗ್ಗೆ ಜಾನ್ ಸೀನಾ ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತದಲ್ಲಿ ಡಬ್ಲ್ಯುಡಬ್ಲ್ಯುಇ ಪಂದ್ಯದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಎಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅವರ ಭಾರತೀಯ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.