ಟ್ರೋಲ್‌ಗಳಿಗೆ ಬೇಸತ್ತು ಲೈವ್‌ನಲ್ಲಿ ಕಣ್ಣೀರಿಟ್ಟ ಬಿಗ್‌ಬಾಸ್‌ ಸೋನುಗೌಡ – ನೆಗೆಟಿವ್ ಕಮೆಂಟ್‌ಗಳ ಬಗ್ಗೆ ವೈರಲ್‌ ಹುಡುಗಿ ಹೇಳಿದ್ದೇನು?

ಟ್ರೋಲ್‌ಗಳಿಗೆ ಬೇಸತ್ತು ಲೈವ್‌ನಲ್ಲಿ ಕಣ್ಣೀರಿಟ್ಟ ಬಿಗ್‌ಬಾಸ್‌ ಸೋನುಗೌಡ – ನೆಗೆಟಿವ್ ಕಮೆಂಟ್‌ಗಳ ಬಗ್ಗೆ ವೈರಲ್‌ ಹುಡುಗಿ ಹೇಳಿದ್ದೇನು?

ನ್ಯೂಸ್‌ ಆ್ಯರೋ : ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಗ್‌ಬಾಸ್‌ ಸ್ಪರ್ಧಿ ಸೋನುಗೌಡ ಅವರು, ಟ್ರೋಲ್‌ ಮತ್ತು ನೆಗೆಟಿವ್‌ ಕಮೆಂಟ್‌ಗಳಿಂದ ಕುಟುಂಬದಲ್ಲಿ ಸಮಸ್ಯೆ ಆಗುತ್ತಿದೆ. ಇದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಕ್ಯಾಮರಾ ಮುಂದೆ ಕಣ್ಣೀರಿಟ್ಟಿದ್ದಾರೆ.

ಸೋನು ಮಾಡಿದ ವಿಡಿಯೋದಲ್ಲಿ ಏನಿದೆ?

‘ನನ್ನ ಯೂಟ್ಯೂಬ್ ಇನ್‌ಸ್ಟಾಗ್ರಾಂನಲ್ಲಿ ತೀರಾ ಕೆಟ್ಟ ಕಾಮೆಂಟ್‌ಗಳು ಬರುತ್ತಿದೆ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ ನಾನು ಯಾರೊಟ್ಟಿಗೂ ಶೇರ್ ಮಾಡಿಕೊಳ್ಳುವುದಿಲ್ಲ. ಒಂದು ಲಿಮಿಟ್ ವರೆಗೂ ಓಕೆ, ಅದನ್ನೂ ಮೀರಿ ಮಾಡಿದರೆ ಕಷ್ಟವಾಗುತ್ತದೆ.

ಒಂದು ವಾರದ ಹಿಂದೆ ನನ್ನ ತಾಯಿ ಯುಟ್ಯೂಬ್ ಚಾನೆಲ್‌ ಹೆಚ್ಚಿಗೆ ನೋಡುತ್ತಾರೆ. ಆ ನನ್ನ ಬಗ್ಗೆ ಒಂದೆರಡು ಟ್ರೋಲ್ ವಿಡಿಯೋ ನೋಡುತ್ತಿದ್ದರು. ಕೆಟ್ಟ ಕಾಮೆಂಟ್‌ ಮತ್ತು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮಾತಿಗೆ ಮುಂಚೆ ಬೀಪ್‌ ಪದಗಳನ್ನು ಬಳಸಿದ್ದಾರೆ. ಆ ವಿಡಿಯೋ ನಾನು ಕೇಳಿಸಿಕೊಂಡರೆ ಬೇಸರ ಆಗುತ್ತದೆ ಅಂತ ಸೌಂಡ್ ಕಡಿಮೆ ಮಾಡಿಕೊಂಡು ನೋಡುತ್ತಾ ಅಳುತ್ತಿದ್ದರು.

ನನಗೆ ಕೇಳಿಸುತ್ತಿದ್ದರೂ ಸುಮ್ಮನಿದ್ದೆ. ನನ್ನಿಂದ ನನ್ನ ಕುಟುಂಬ ನೋವು ಪಡುತ್ತಿದೆ. ದಯವಿಟ್ಟು ಹೀಗೆ ಮಾಡಬೇಡಿ. ನಾನು ಯಾರಿಗೂ ಗೊಂದರೆ ಕೊಟ್ಟಿಲ್ಲ, ನಾನು 20 ವರ್ಷದ ಹುಡುಗಿ ಇದ್ದಾಗ ಮಾಡಿದ ತಪ್ಪಿಗೆ ಈಗಲೂ ಶಿಕ್ಷೆಯಾಗಿ ಕೊಡುತ್ತಿದ್ದೀರಾ? 4 ವರ್ಷ ಕಳೆದರೂ ನಾನು ಬೇಸರದಲ್ಲಿರುವೆ’ ಎಂದು ಸೋನು ಗೌಡ ವಿಡಿಯೋದಲ್ಲಿ ಮಾತನಾಡಿದ್ದಾರೆ.

‘ನನ್ನ ಬಗ್ಗೆ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಮಾಡುತ್ತಿರುವುದು ಹೆಣ್ಣು ಮಕ್ಕಳು. ಯಾರಿಗಾದರೂ ಗೊಂದರೆ ಕೊಟ್ಟರೆ ಕಳ್ಳತನ ಮಾಡಿದರೆ ಅಥವಾ ಹೊಡೆದರೆ ತಪ್ಪು ಈ ರೀತಿ ಮಾತನಾಡಿ ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಆದ ತಪ್ಪನ್ನು ಯಾಕೆ ನೀವು ಪಬ್ಲಿಕ್ ಮಾಡುತ್ತಿರುವುದು? ಟ್ರೋಲ್ ಮಾಡಬೇಡಿ ಎನ್ನುತ್ತಿಲ್ಲ ಆದರೆ ಫ್ಯಾಮಿಲಿವರೆಗೂ ಬೇಡ. ನನ್ನ ಟ್ರೋಲ್ ವಿಡಿಯೋ ಅವಮಾನಗಳನ್ನು ನೋಡಿ ನನ್ನ ತಾಯಿ ಆರೋಗ್ಯ ಕೆಟ್ಟಿದೆ.

ಈಗಲೂ ಟ್ರೋಲ್‌ಗಳನ್ನು ನೋಡಿ ನನ್ನ ಕುಟುಂಬಸ್ಥರು ನನ್ನನ್ನು ಮಾತನಾಡಿಸುವುದಿಲ್ಲ ಕೆಲವು ಮಾತ್ರ ನಮ್ಮ ಜೊತೆ ಚೆನ್ನಾಗಿರುವುದು. ನಾನು ತಪ್ಪು ಮಾಡಿರುವುದಕ್ಕೆ ಟ್ರೋಲ್ ಮಾಡಿ ಏನ್ ಏನೋ ಮಾಡಿ ಎಡಿಟ್ ಮಾಡಬೇಡಿ’ ಎಂದು ಸೋನು ಗೌಡ ಹೇಳಿದ್ದಾರೆ.

‘ಇಷ್ಟೊಂದು ಶೋಕಿ ಮಾಡುತ್ತೀಯಾ ಜನರಿಗೆ ಸಹಾಯ ಮಾಡುವುದಕ್ಕೆ ಆಗಲ್ವಾ ಎಂದು ಕೇಳುತ್ತಾರೆ. ಒಬ್ರು ಸಹಾಯ ಮಾಡಿ ವಿಡಿಯೋ ಮಾಡುತ್ತಾರೆ ಆದರೆ ನಾನು ಹಾಗಲ್ಲ … ನಿಜಕ್ಕೂ ತರಕಾರಿ ಹಣ್ಣು ದಿನಸಿ ಪ್ರತಿಯೊಂದನ್ನು ಏನೇ ಉಳಿದರೂ ಯಾವತ್ತೂ ವೇಸ್ಟ್‌ ಮಾಡಿಲ್ಲ, ಅನಾಥಾಶ್ರಮಕ್ಕೆ ನೀಡುತ್ತೀವಿ ಅದನ್ನು ವಿಡಿಯೋ ಮಾಡಿ ಹಾಕಲ್ಲ. ನನಗೆ ಹಿಂಸೆ ಆಗುತ್ತಿದೆ. ಏನೂ ತೋರಿಸಿಕೊಂಡು ಮಾಡುವುದಿಲ್ಲ. ಜನರ ಟ್ರೋಲ್ ನೋಡಿ ನನಗೆ ಮೆಂಟಲಿ ಶಾಕ್ ಆಗುತ್ತಿದೆ…ಯಾರ ಜೊತೆನೂ ಮಾತನಾಡಬಾರದು ಜೊತೆಗಿರಬಾರದು ಅನಿಸುತ್ತಿದೆ.

ಬಿಗ್ ಬಾಸ್‌ನಿಂದ ಬಂದ್ಮೇಲೆ ನನ್ನನ್ನು ಬೀಪ್‌ ಪದಗಳಿಂದ ಮಾತನಾಡಿಸುತ್ತಿದ್ದೀರಿ. ನನ್ನ ನೋವು ಯಾರಿಗೂ ಹೇಳಿಕೊಳ್ಳಲು ಆಗಲ್ಲ ಹೀಗಾಗಿ ಯಾರ ಜೊತೆಗೂ ವಿಡಿಯೋ ಮಾಡಲ್ಲ. ಟ್ರೋಲ್‌ಗಳು ಮಾಡುವ ಕೆಟ್ಟ ಕೆಲಸದಿಂದ ಸಾವಿರಾರು ಹೆಣ್ಣುಮಕ್ಕಳ ಜೀವನ ಹಾಳಾಗುತ್ತಿದೆ. ನಾನು ಇನ್ನೂ ಬದುಕಿದ್ದೀನಿ ಅಂದ್ರೆ ನನ್ನ ಫ್ಯಾಮಿಲಿಗೋಸ್ಕರ’ ಎಂದು ಸೋನು ಗೌಡ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *