2022ರ ಐಸಿಸಿ ಟಿ20 ವಿಶ್ವಕಪ್‌ಗಿಂತಲೂ ಐಪಿಎಲ್ ಅಧಿಕ ವೀಕ್ಷಣೆ – ಬಂಪರ್ ಹೊಡೆದ ಜಿಯೋ ಸಿನಿಮಾ ಫ್ರೀ ಪ್ಲ್ಯಾನ್…!!

2022ರ ಐಸಿಸಿ ಟಿ20 ವಿಶ್ವಕಪ್‌ಗಿಂತಲೂ ಐಪಿಎಲ್ ಅಧಿಕ ವೀಕ್ಷಣೆ – ಬಂಪರ್ ಹೊಡೆದ ಜಿಯೋ ಸಿನಿಮಾ ಫ್ರೀ ಪ್ಲ್ಯಾನ್…!!

ನ್ಯೂಸ್ ಆ್ಯರೋ : ಪ್ರಪಂಚದ ಜನಪ್ರಿಯ ಕ್ರಿಕೆಟ್‌ ಲೀಗ್‌ ಐಪಿಎಲ್ ಪ್ರಾರಂಭದಲ್ಲೇ ಅಪಾರ ಸಂಖ್ಯೆಯಲ್ಲಿ ವೀಕ್ಷಣೆ‌ ಮಾಡುವ ಮೂಲಕ ಜಿಯೋ ಸಿನಿಮಾಗೆ ಯಶಸ್ಸು ಲಭಿಸಿದೆ.

ಐಪಿಎಲ್ ಕ್ರಿಕೆಟ್ ಲೀಗ್ ನ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಖರೀದಿಸಿರುವ ವಯಾಕಾಮ್18 ಮಾಲೀಕತ್ವದ ಜಿಯೋ ಸಿನಿಮಾ ಈ ಮೂಲಕ ಬಂಪರ್‌ ಹೊಡೆದಿದೆ.

ಐಪಿಎಲ್‌ ಪಂದ್ಯಗಳು ಆರಂಭವಾಗಿ ಭಾನುವಾರಕ್ಕೆ ಮೂರು ದಿನಗಳು ಪೂರ್ಣಗೊಂಡಿದ್ದು, ಐದು ಪಂದ್ಯಗಳು ಈಗಾಗಲೇ ನಡೆದಿದೆ. ಅದಾಗಲೇ ಬರೋಬ್ಬರಿ 147 ಕೋಟಿ ವಿಡಿಯೋ ವೀಕ್ಷಣೆಗಳನ್ನು ಜಿಯೋ ಸಿನಿಮಾ ಪಡೆದಿದೆ. ಇದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಕಳೆದ ವರ್ಷ ಸ್ಟ್ರೀಮ್ ಮಾಡಲಾದ ಐಪಿಎಲ್ 2022ರ ಸಂಪೂರ್ಣ ಆವೃತ್ತಿಯ ಡಿಜಿಟಲ್ ವೀಕ್ಷಕರಿಗಿಂತ ಹೆಚ್ಚಿನದಾಗಿದೆ ಎಂದು ಪ್ಲಾಟ್‌ಫಾರ್ಮ್ ಸ್ಪಷ್ಟನೆ ಕೊಟ್ಟಿದೆ.

ಜಿಯೋ ಸಿನಿಮಾ ಈ ಸಂಬಂಧ ಹೇಳಿಕೆ ನೀಡಿ, ಮೊದಲ ವಾರಾಂತ್ಯದಲ್ಲಿ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ ದಾಖಲೆಯ ಪ್ರಮಾಣದಲ್ಲಿ ವೀಕ್ಷಣೆ ಮಾಡಲಾಗಿದೆ. ಇದು 2022ರ ಐಸಿಸಿ ಟಿ20 ವಿಶ್ವಕಪ್‌ಗಿಂತಲೂ ಅಧಿಕವಾಗಿದೆ ಎಂದಿದೆ.

ಇದೇ ವಿಚಾರವಾಗಿ ಮಾತನಾಡಿದ ವಯಾಕಾಮ್ 18 ಸ್ಪೋರ್ಟ್ಸ್‌ನ ಸಿಇಒ ಅನಿಲ್ ಜಯರಾಜ್, “ಈ ಸಂಖ್ಯೆಗಳು ಅಸಾಧಾರಣವಾಗಿದೆ. ದೇಶದಾದ್ಯಂತ ಡಿಜಿಟಲ್ ಕ್ರಾಂತಿಗೆ ಇದೇ ಸಾಕ್ಷಿ” ಎಂದರು.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಡುವಿನ ಉದ್ಘಾಟನಾ ಪಂದ್ಯವನ್ನು ಏಕಕಾಲದಲ್ಲಿ 1.6 ಕೋಟಿ ಜನ ಗರಿಷ್ಠ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ. 2.5 ಕೋಟಿಗೂ ಹೆಚ್ಚು ಜನ ಆಪ್ಲಿಕೇಶನ್ ಡೌನ್‌ಲೋಡ್‌ ಮಾಡಿ ಪಂದ್ಯಾಟ ವೀಕ್ಷಿಸಿದ್ದಾರೆ.

ಮೊದಲ ವಾರಾಂತ್ಯದಲ್ಲಿ ಒಟ್ಟಾರೆ ಲಭ್ಯವಾದ ಹೊಸ ವೀಕ್ಷಕರ ಸಂಖ್ಯೆ 10 ಕೋಟಿಯಾಗಿದ್ದು,ಹೊಸ ಆ್ಯಪ್ ಡೌನ್ ಲೋಡ್ ಮಾಡಿ ಮೂರು ದಿನಗಳಲ್ಲಿ 5 ಕೋಟಿ ಜನ ಪಂದ್ಯ ವೀಕ್ಷಿಸಿದ್ದಾರೆ.

ಈ ಬಾರಿ ಐಪಿಎಲ್‌ ಪಂದ್ಯಗಳು ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೆ ಹಲವು ಸ್ಥಳೀಯ ಭಾಷೆಗಳಲ್ಲಿ ಪಂದ್ಯ ಪ್ರಸಾರಗೊಂಡಿತ್ತು.‌ ಕನ್ನಡ, ಬೆಂಗಾಲಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಜೊತೆಗೆ ಇದೇ ಮೊದಲ ಬಾರಿಗೆ ಭೋಜ್‌ಪುರಿ, ಪಂಜಾಬಿ, ಒಡಿಯಾ ಮತ್ತು ಗುಜರಾತಿ ಭಾಷೆಗಳಲ್ಲಿಯೂ ಕಾಮೆಂಟರಿ ಲಭ್ಯವಾಗಿದೆ.

ಚೆನ್ನೈ ಮತ್ತು ಗುಜರಾತ್‌ ನಡುವಿನ ಪಂದ್ಯವು ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಆರಂಭದಲ್ಲಿ 50 ಲಕ್ಷ ಲಕ್ಷ ಇದ್ದ ವೀಕ್ಷಕರ ಸಂಖ್ಯೆ, ಧೋನಿ ಬ್ಯಾಟಿಂಗ್ ಬರುತ್ತಿದ್ದಂತೆ, ಅದರ ಸಂಖ್ಯೆ 1.6 ಕೋಟಿಗೆ ಏರಿಕೆಯಾಗಿದ್ದು, ಹೊಸ ದಾಖಲೆ ಬರೆದಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *