ಖ್ಯಾತ ನಟಿ‌ ನಗ್ಮಾ ಜತೆ‌ ಲವ್ ಅಫೇರ್ ಸುದ್ದಿ‌ – ಮೌನ‌ಮುರಿದು ಸ್ಪಷ್ಟನೆ ಕೊಟ್ಟ ನಟ ರವಿಕಿಶನ್‌ ಹೇಳಿದ್ದೇನು?

ಖ್ಯಾತ ನಟಿ‌ ನಗ್ಮಾ ಜತೆ‌ ಲವ್ ಅಫೇರ್ ಸುದ್ದಿ‌ – ಮೌನ‌ಮುರಿದು ಸ್ಪಷ್ಟನೆ ಕೊಟ್ಟ ನಟ ರವಿಕಿಶನ್‌ ಹೇಳಿದ್ದೇನು?

ನ್ಯೂಸ್ ಆ್ಯರೋ : ಒಂದಿಲ್ಲ ಒಂದು ವಿಚಾ‌ರದಲ್ಲಿ ಸುದ್ದಿಯಲ್ಲಿರುವ ನಟಿ ನಗ್ಮಾ ಇದೀಗ ನಟ ರವಿಕಿಶನ್ ಜತೆಗಿನ ಲವ್ ಅಫೇರ್‌ ವಿಷಯದ ಬಗ್ಗೆ ಸುದ್ದಿಯಲ್ಲಿದ್ದಾರೆ.

ನಗ್ಮಾಗೆ ಇನ್ನೂ ಮದುವೆಯಾಗಿಲ್ಲ. ಸದ್ಯ ಅವರ ಹೆಸರು ನಟ ರವಿಕಿಶನ್ ಜತೆ ಕೇಳಿಬರುತ್ತಿದೆ.

ಇದುವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡದೆ ಇಬ್ಬರೂ ಮೌನವಾಗಿದ್ದರಾದರೂ ಈಚೆಗೆ ನಡೆದ ಸಂದರ್ಶನವೊಂದರಲ್ಲಿ ರವಿಕಿಶನ್ ಮೌನ ಮುರಿದಿದ್ದಾರೆ.

‘ನಾನು ಹಾಗೂ ನಗ್ಮಾ ಕೆಲವೊಂದು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಸಿನಿಮಾಗಳಲ್ಲಿ ಇಂತಹ ಗಾಸಿಪ್‌ಗಳು ಸಾಮಾನ್ಯ. ಆದರೆ ನನಗೆ ಮದುವೆ ಆಗಿದೆ. ನನ್ನ ವೈವಾಹಿಕ ಜೀವನ ಬಹಳ ಚೆನ್ನಾಗಿದೆ. ನನ್ನ ಪತ್ನಿ ನನ್ನನ್ನು ಬಹಳ ಇಷ್ಟಪಡುತ್ತಾಳೆ. ಆಕೆ ಕಷ್ಟ ಆಗಲೀ, ಸಂತೋಷ ಆಗಲೀ ನನ್ನ ಜೊತೆ ಇರುತ್ತಾಳೆ. ನಾನು ಏನೆಂದು ಆಕೆಗೆ ಚೆನ್ನಾಗಿ ಗೊತ್ತು. ಪತ್ನಿಗೆ ನಾನು ಎಂದಿಗೂ ಮೋಸ ಮಾಡುವುದಿಲ್ಲ. ನಗ್ಮಾ ಹಾಗೂ ನಾನು ಉತ್ತಮ ಸ್ನೇಹಿತರು ಅಷ್ಟೇ” ಎಂದು ಎಲ್ಲ ರೂಮರ್ಸ್ ಗೆ ಉತ್ತರ ಕೊಟ್ಟಿದ್ದಾರೆ.

ಈ ಹಿಂದೆ ಆನ್‌ಲೈನ್‌ ವಂಚನೆಗೆ ಬಲಿಯಾದ ನಗ್ಮಾ

ಇತ್ತೀಚೆಗೆ ನಗ್ಮಾ ತಮ್ಮ ಮೊಬೈಲ್‌ಗೆ ಬಂದ ಲಿಂಕ್‌ವೊಂದನ್ನು ಕ್ಲಿಕ್‌ ಮಾಡಿ ಒಂದು ಲಕ್ಷ ರೂಪಾಯಿ ಹಣ ಕಳೆದುಕೊಂಡು ಸುದ್ದಿಯಾಗಿದ್ದರು.

ಬಹುಭಾಷಾ ನಟಿ ನಗ್ಮಾ:

ಮುಂಬೈನಲ್ಲಿ ಹುಟ್ಟಿ ಬೆಳೆದ ನಗ್ಮಾ, 1990ರಲ್ಲಿ ತೆರೆ ಕಂಡ ‘ಬಾಘಿ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದರು. ಹಿಂದಿ ಹೊರತುಪಡಿಸಿ ತೆಲುಗು, ತಮಿಳು, ಕನ್ನಡ, ಭೋಜ್‌ಪುರಿ, ಬೆಂಗಾಳಿ ಸಿನಿಮಾಗಳಲ್ಲಿ ಕೂಡಾ ನಗ್ಮಾ ಅಭಿನಯಿಸಿದ್ದಾರೆ. ಹಲವು ವರ್ಷಗಳ ಹಿಂದೆ ನಗ್ಮಾ ಅವರು ಕ್ರಿಕೆಟಿಗ ಸೌರವ್ ಗಂಗೂಲಿ ಜೊತೆಯೂ ಗಾಸಿಪ್ ಗೆ ಆಹಾರವಾಗಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *