ಚಾಟ್ ಜಿಟಿಪಿಯಿಂದ ಮೂರು ತಿಂಗಳಲ್ಲಿ 28 ಲಕ್ಷ ಗಳಿಸಿದ ಆನ್ಲೈನ್ ಶಿಕ್ಷಕ – ಈ ಸುವರ್ಣಾವಕಾಶವನ್ನ ಬುದ್ಧಿವಂತರು ಮಿಸ್ ಮಾಡಿಕೊಳ್ಳಲ್ಲ..!!

ಚಾಟ್ ಜಿಟಿಪಿಯಿಂದ ಮೂರು ತಿಂಗಳಲ್ಲಿ 28 ಲಕ್ಷ ಗಳಿಸಿದ ಆನ್ಲೈನ್ ಶಿಕ್ಷಕ – ಈ ಸುವರ್ಣಾವಕಾಶವನ್ನ ಬುದ್ಧಿವಂತರು ಮಿಸ್ ಮಾಡಿಕೊಳ್ಳಲ್ಲ..!!

ನ್ಯೂಸ್ ಆ್ಯರೋ : ಹಣ ಗಳಿಸೊದಕ್ಕೆ ಕೇವಲ ಒಳ್ಳೆಯ ಉದ್ಯೋಗ ಮಾತ್ರವಲ್ಲ, ಸ್ವಲ್ಪ ಬುದ್ಧಿವಂತಿಕೆ ಇದ್ರೂ ಕೈತುಂಬ ಹಣ ಗಳಿಸಬಹುದು. ಇಲ್ಲೊಬ್ಬ 23 ವರ್ಷದ ಲ್ಯಾನ್ ಜಿಂಕ್ ಎಂಬ ವ್ಯಕ್ತಿ ಚಾಟ್ ಜಿಟಿಪಿ ಬಳಸಿ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 28 ಲಕ್ಷ ರೂಪಾಯಿ ಗಳಿಸಿ ಬಾರಿ ಸುದ್ದಿಯಲ್ಲಿದ್ದಾರೆ. ಇದು ಹೇಗೆ ಸಾಧ್ಯ ಅಂತೀರಾ ಈ ವರದಿ ಓದಿ.

ಲಕ್ಷ ಲಕ್ಷ ಸಂಪಾದಿಸಿದ್ದು ಹೇಗೆ ಗೊತ್ತಾ?

ವರದಿಗಳ ಪ್ರಕಾರ ಲ್ಯಾನ್ ಜಿಂಕ್ ಎಂಬ ವ್ಯಕ್ತಿ, ಎಜುಕೇಶನ್ ಪ್ಲಾಟ್ ಫಾರ್ಮ್ ನಲ್ಲಿ ಆನ್ಲೈನ್ ಕೋರ್ಸ್ ಆರಂಭಿಸಿದರು. ChatGTP ಅನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಕೋರ್ಸ್ ವಿನ್ಯಾಸಗೊಳಿಸಿದರು. ಕೇವಲ ಮೂರು ತಿಂಗಳಲ್ಲಿ ಜಗತ್ತಿನಾದ್ಯಂತ ಇರುವ 15,000ಕ್ಕೂ ಹೆಚ್ಚಿನ ಆಸಕ್ತರು ಈ ಕೋರ್ಸ್‌ಗೆ ಸೇರಿಕೊಂಡರು. ‘ಚಾಟ್ ಜಿಟಿಪಿ ಮಾಸ್ಟರ್ ಕ್ಲಾಸ್:ಆರಂಭಿಕೆಗಾಗಿ ಸಂಪೂರ್ಣ ChatGTP ಗೈಡ್’ ಎಂಬ ಶೀರ್ಶಿಕೆಯ ಕೋರ್ಸ್ ಇದುವರೆಗೆ ಒಟ್ಟಾರೆ $35,000 ಲಾಭ‌ ಗಳಿಸಿದೆ‌.

ಲ್ಯಾನ್ ಜಿಂಕ್ ಹೇಳೊದೇನು?

ಈ ಬಗ್ಗೆ ಸ್ವತಃ ಲ್ಯಾನ್ ಜಿಂಕ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ‘AI ಅಪ್ಲಿಕೇಶನ್, ಅದರಲ್ಲಿರುವ ಅಸಾಧಾರಣ ಸಾಮರ್ಥ್ಯವನ್ನು‌ ಕಂಡು ನಾನು ವಿಸ್ಮಯಗೊಂಡಿದ್ದೇನೆ. ಆ ಕಾರಣದಿಂದಲೇ ಎಲ್ಲರೂ ಇದನ್ನು ಬಳಸಬೇಕು ಎನ್ನುವ ಉದ್ದೇಶದಿಂದ ಇದರ ಕಲಿಕಾ ಕೋರ್ಸ್ ಆರಂಭಿಸಿದೆ. ChatGTP ಯಲ್ಲಿ ಬಲಾಗದಂತಹಾ ಕಲಿಕಾ ನೈಪುಣ್ಯತೆಯಿದೆ. ಎಲ್ಲರೂ ಇದರ ಬಗ್ಗೆ ತಿಳಿಯಬೇಕು’ ಎಂದಿದ್ದಾರೆ. ಹಾಗೆಯೇ ChatGTP ಬಗ್ಗೆ ಜಿಂಕ್ ಅವರಿಗೆ ಯಾರೂ ಮಾರ್ಗದರ್ಶನ ನೀಡಿಲ್ಲ ಬದಲಾಗಿ ಅವರೇ ತಮ್ಮ ಸ್ವಯಂ ಕಲಿಕೆಯಿಂದ ಕಲಿತವರು.

ಸದ್ಯ, ಜಂಕ್ ಅಭಿವೃದ್ಧಿ ಪಡಿಸಿರುವ ಕೋರ್ಸ್ ಮೂಲಗಳ ಪ್ರಕಾರ, ಏಳು ಗಂಟೆಗಳಷ್ಟು ದೀರ್ಘವಾಗಿದೆಯಂತೆ ಮತ್ತು‌ ಇದರ ಬೆಲೆ 520. ಇದರಲ್ಲಿ ChatGTP ಬಗೆಗಿನ 50 ವಿಶೇಷವಾದ ಉಪನ್ಯಾಸಗಳಿವೆಯಂತೆ. ಈ ಕೋರ್ಸ್ ಆರಂಭಿಸಲು ಜಿಂಕ್ ಸುಮಾರು ಮೂರು ವಾರಗಳಷ್ಟು ಸಮಯ ತೆಗೆದುಕೊಂಡಿದ್ದು, ಇದೀಗ ಅಮೇರಿಕಾದ ಹೆಚ್ಚಿನ ವಿದ್ಯಾರ್ಥಿಗಳು ಈ‌ ಕೋರ್ಸಿಗೆ ದಾಖಲಾಗಿದ್ದಾರೆ.

ಇದರೊಂದಿಗೆ ಭಾರತ, ಜಪಾನ್ ಮತ್ತು ಕೆನಡಾದ ವಿದ್ಯಾರ್ಥಿಗಳನ್ನು ಇದು ಆಕರ್ಷಿಸುತ್ತಿದೆ. ಇದಿಷ್ಟೇ ಅಲ್ಲದೇ ChatGTP ಆರಂಭಗೊಳ್ಳದ ದೇಶದವರು ಕೂಡ ಜಿಂಕ್ ಕೋರ್ಸಿಗೆ ಸೇರಿದ್ದಾರಂತೆ. ಅಂತೂ ಇನ್ನು‌ ಕೆಲ ವರ್ಷಗಳಲ್ಲೇ ChatGatap ಜಗತ್ತಿನಾದ್ಯಂತ ಹೊಸ ಡಿಜಿಟಲ್ ಕ್ರಾಂತಿ ಮಾಡುವುದರಲ್ಲಿ ಅನುಮಾನವಿಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *