2ನೇ ಮದುವೆಯ ಬಗ್ಗೆ ತುಟಿ ಬಿಚ್ಚಿದ ಖ್ಯಾತ ಸೀರಿಯಲ್ ನಟಿ – ಸೀರಿಯಲ್ ತಾರೆ ಸ್ವಾತಿ ನೀಡಿದ ಸ್ಪಷ್ಟನೆ ಏನು ಗೊತ್ತಾ?

2ನೇ ಮದುವೆಯ ಬಗ್ಗೆ ತುಟಿ ಬಿಚ್ಚಿದ ಖ್ಯಾತ ಸೀರಿಯಲ್ ನಟಿ – ಸೀರಿಯಲ್ ತಾರೆ ಸ್ವಾತಿ ನೀಡಿದ ಸ್ಪಷ್ಟನೆ ಏನು ಗೊತ್ತಾ?

ನ್ಯೂಸ್ ಆ್ಯರೋ : ಕನ್ನಡದ ಖ್ಯಾತ ಸೀರಿಯಲ್ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಸ್ವಾತಿಯವರ ನಿಜ ಜೀವನದ ಬಗ್ಗೆ, 2ನೇ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಇದೀಗ ಸ್ವಾತಿ ಅವೆಲ್ಲವುಗಳಿಗೂ ಸ್ಪಷ್ಟನೆ ನೀಡಿ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ. ಸೀರಿಯಲ್ ನಟಿಯ ಸಂಸಾರದ ರೀಯಲ್ ಕಹಾನಿ ಇಲ್ಲಿದೆ ನೋಡಿ.

ಕನ್ನಡದ ಹೆಸರಾಂತ ಧಾರವಾಹಿಗಳಾದ ಗಟ್ಟಿಮೇಳ, ಗೀತಾ, ಬೆಟ್ಟದ ಹೂ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ಸ್ವಾತಿ ಎಚ್.ವಿ ಅವರು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಬೆನ್ನಲ್ಲೇ ಸ್ವಾತಿ ಅವರು 2ನೇ ಮದುವೆ ಆಗಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿ ಮಾತನಾಡುತ್ತಿದ್ದರು. ಇವೆಲ್ಲವುಗಳಿಗೂ ಇದೀಗ ನಟಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಕಿರುತೆರೆ‌ ನಟಿ ಸ್ವಾತಿ ಅವರು ನಾಗಾರ್ಜುನ ರವಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಬೆನ್ನಲ್ಲೇ ಸ್ವಾತಿಗೆ ಇದು ಮೊದಲ ಮದುವೆಯಲ್ಲ, ಸ್ವಾತಿಗಿದು 2ನೇ ಮದುವೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿತ್ತು. ಇದೀಗ ಈ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ತುಟಿ ಬಿಚ್ಚಿ ಮಾತನಾಡಿದ್ದಾರೆ.

ಸ್ವಾತಿ ಹೇಳಿದ್ದಿಷ್ಟು..!

ಸಾಂಸಾರಿಕ ಜೀವದಲ್ಲಿ ನಾನು ಖುಷಿಯಾಗಿದ್ದೇನೆ. ಸೇಹಿತನನ್ನೇ ವಿವಾಹವಾಗಿರುವ ಕಾರಣ ನನ್ನ ಬೆಸ್ಟ್ ಫ್ರೆಂಡ್ ಜೀವನ ಸಂಗಾತಿಯಾಗಿದ್ದಾರೆ. ನನ್ನ ಬಗ್ಗೆ ಅವರಿಗೆ ಎಲ್ಲವೂ ತಿಳಿದಿರುವ ಕಾರಣ ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ’ ಎಂದಿದ್ದಾರೆ.

ಮುಂದುವರೆಸಿ, ‘ನನ್ನ ಪತಿಯ ಕಡೆಯವರು ನನ್ನ ಬಗ್ಗೆ ತಪ್ಪು ತಿಳಿದು ಕೊಂಡಿದ್ದರು. ಹುಡುಗಿಗೆ ಇದು ಎರಡನೆಯದ್ದಾ ಅಥವಾ ಮೂರನೆಯ ಮದುವೆಯಾ ಎಂದೆಲ್ಲ ಪ್ರಶ್ನಿಸಿದ್ದರು. ಆದರೆ‌ ಅದು ಕೊನೆಗೆ ಸೀರಿಯಲ್ ನಲ್ಲಿ ನಡೆದ ಮದುವೆ ಎಂಬುದು ಅವರಿಗೂ ಅರ್ಥವಾಯಿತು. ನನ್ನ ಬಗ್ಗೆ ಮಾತನಾಡುವವರೆಲ್ಲರಿಗೂ ಇದನ್ನೇ‌ ಹೇಳುತ್ತೇನೆ ಸೀರಿಯಲ್ ನಲ್ಲಿ ಮುದುವೆ, ತಾಯಿ ಎಲ್ಲವೂ ಆಗುತ್ತದೆ ಅದೆಲ್ಲವೂ ನಾಟಕೀಯ ಆದರೆ ನಿಜ ಜೀವನದಲ್ಲಿ ನನಗೆ ಈಗಷ್ಟೇ ಅಧಿಕೃತವಾಗಿ ವಿವಾಹವಾಗಿದೆ’ ಎಂದು ಸ್ವಾತಿ ಸ್ಪಷ್ಟನೆ ನೀಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *