Shocking News: ಲೈಂಗಿಕ ದೌರ್ಜನ್ಯದ ವಿಡಿಯೋ ಮಾರಾಟ ದಂಧೆ! ಸ್ಪೋಟಕ ಮಾಹಿತಿ ಬಯಲು

20240902 125811
Spread the love

ನ್ಯೂಸ್ ಆ್ಯರೋ : ಕೇವಲ 99 ರೂ.ಗೆ 820 ಕ್ಕೂ ಹೆಚ್ಚು ವೀಡಿಯೊಗಳು ನಿಮ್ಮ ಮೊಬೈಲ್ ಗಳಿಗೆ ಎಂಬ ಈ ಸಂದೇಶದ ಜಾಹೀರಾತು ಹರಿದಾಡುತ್ತಿದ್ದು, ಇದು ಅತ್ಯಾಚಾರ ವೀಡಿಯೊಗಳನ್ನು ಮಾರಾಟ ಮಾಡುವ ದಂಧೆ ಎಂದು ತಿಳಿದು ಬಂದಿದೆ. ಈ ಕರಾಳ ಸತ್ಯವೊಂದು ಇಡೀ ದೇಶವನ್ನೇ ನಿಬ್ಬೆರಗಾಗಿಸಿದೆ.

ಅತ್ಯಾಚಾರದ ವೀಡಿಯೊ ಮಾರಾಟವು ಇದು ನಿನ್ನೆಯ ಕಥೆಯಲ್ಲ, ಇಂಟರ್ನೆಟ್ ನ ಸಹಾಯದಿಂದ ಕ್ಷಣಮಾತ್ರದಲ್ಲಿ ಜನರ ಕೈ ಸೇರುತ್ತಿದೆ. ಈ ಮೊದಲು ಇಂತಹ ವೀಡಿಯೊಗಳನ್ನು ಸಿಡಿ ಮತ್ತು ಪೆನ್ ಡ್ರೈವ್ ಮೂಲಕ ಹಂಚಿಕೊಳ್ಳಲಾಗುತ್ತಿತ್ತು. ಆದರೆ ಈಗ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳಲು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಈ ವೀಡಿಯೊಗಳು ಟೆಲಿಗ್ರಾಮ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಶರವೇಗದಲ್ಲಿ ಲಭ್ಯವಾಗುತ್ತಿದ್ದು, ಕ್ರೆಡಿಟ್ ಕಾರ್ಡ್, ಪೇಪಾಲ್ ಮತ್ತು ಯುಪಿಐನಂತಹ ಆ್ಯಪ್ ಗಳ ಸಹಾಯದಿಂದ ಆನ್‌ಲೈನ್ ಮೂಲಕವೇ ಹಣ ಪಾವತಿ ಮಾಡಲಾಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್ ಟ್ರೆಂಡ್ಸ್ ಡೇಟಾವನ್ನು ಭಾರತ ಪರಿಶೀಲಿಸಿದ್ದು, ಅತ್ಯಾಚಾರದ ಪ್ರಕರಣವು ಸುದ್ಧಿಯಾದಾಗಲೆಲ್ಲ ‘ಅತ್ಯಾಚಾರ ವಿಡಿಯೋ’ ಹುಡುಕಾಟವೂ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಇದು ಕೋಲ್ಕತ್ತಾದ ಆರ್.ಜಿ. ಕಾರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಅತ್ಯಾಚಾರದ ಪ್ರಕರಣ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಮತ್ತು ಮಣಿಪುರ ಪ್ರಕರಣದ ಸಂದರ್ಭದಲ್ಲಿ ಇಂತಹ ವೀಡಿಯೊ ಹುಡುಕಾಟ ಗಣನೀಯವಾಗಿ ಹೆಚ್ಚಾಗಿದೆ.

ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ವಿಷಯದ ಕುರಿತು “ಅತ್ಯಾಚಾರ ವೀಡಿಯೊಗಳ ಮಾರಾಟದ ದೊಡ್ಡ ಮಾರುಕಟ್ಟೆ ಇದೆ” ಎಂಬ ಸ್ಪೋಟಕ ಮಾಹಿತಿಯನ್ನು ಹೇಳಿದ್ದಾರೆ. ಈ ಹಿಂಸಾತ್ಮಕ ಲೈಂಗಿಕ ವೀಡಿಯೊಗಳ ಬೇಡಿಕೆಯಿದ್ದು, ಕಾಣದ ಕೈಗಳಿಂದ ಇವುಗಳಿಗೆ ಬೆಂಬಲ ದೊರೆಯುತ್ತಿದೆ. ಹಿಂಸಾಚಾರದ ವಿಡಿಯೋಗಳು ಸುಲಭವಾಗಿ ಜನರನ್ನು ಸೇರುತ್ತಿದ್ದು, ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.

ಸಮಾಜವು ಈ ಕಪ್ಪು ಜಗತ್ತನ್ನು ಎದುರಿಸಬೇಕಾಗಿದೆ. ಇಂತಹ ದಂಧೆಯ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ ಅಶ್ಲೀಲ ವಿಡಿಯೋ ಮಾರಾಟವನ್ನು ತಡೆ ಹಿಡಿಯಬೇಕು. ‘ಪ್ರಜ್ವಲ್ ರೇವಣ್ಣ ವಿಡಿಯೋ’ ಮತ್ತು ‘ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ’ ನಿಂದ ಹಿಡಿದು ‘ಮಣಿಪುರ ಮಹಿಳಾ ವಿಡಿಯೋ’, ‘ಕೋಲ್ಕತ್ತಾ ರೇಪ್’ ಕೀವರ್ಡ್‌ಗಳ ಹುಡುಕಾಟವು ವೇಗವಾಗಿ ಹೆಚ್ಚಾಗಿದೆ ಎಂದು ಗೂಗಲ್ ಟ್ರೆಂಡ್‌ಗಳ ದತ್ತಾಂಶವು ತೋರಿಸಿದೆ. ಈ ಘಟನೆಗಳ ನಂತರ, 3,000 ಕ್ಕೂ ಹೆಚ್ಚು ವೀಡಿಯೊ ಮತ್ತು ಫೋಟೋಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ.

ಈ ರೀತಿಯ ಆವಿಷ್ಕಾರಗಳು ಮತ್ತು ಲೈಂಗಿಕ ದೌರ್ಜನ್ಯದ ವಿಡಿಯೋ ಮಾರಾಟವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದನ್ನು ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಮುಂತಾದ ದೇಶಗಳ ಬಳಕೆದಾರರು ಕಂಡುಹಿಡಿದಿದ್ದಾರೆ. ಅಪರಾಧದ ನಿಜ ವೀಡಿಯೊಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಆನ್‌ಲೈನ್ ಅತ್ಯಾಚಾರ ವೀಡಿಯೊಗಳನ್ನು ಮಾರಾಟ ಮಾಡುವ ಮಾರಾಟಗಾರರು ಸಂಬಂಧವಿಲ್ಲದ ಲೈಂಗಿಕ ಕಿರುಕುಳ ವೀಡಿಯೊ ಮತ್ತು ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡಲು ಇಂತಹ ಕೀವರ್ಡ್ ಗಳನ್ನು ಬಳಸುತ್ತಾರೆ ಎಂದು ತಿಳಿದುಬಂದಿದೆ.

Leave a Comment

Leave a Reply

Your email address will not be published. Required fields are marked *