ಮದುವೆ ಮಂಟಪದಲ್ಲಿ ವರನ ಎದುರೇ ವಧುವನ್ನು ಚುಂಬಿಸಿದ ಯುವಕ; ಏನಿದು ಕಿಸ್ಸಿಂಗ್ ಸ್ಟೋರಿ..!

ನ್ಯೂಸ್ ಆ್ಯರೋ : ಮದುವೆ ಮನೆಯಲ್ಲಿ ವೇದಿಕೆಗೆ ಬಂದು ವಧು ವರರನ್ನು ಹಾರೈಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ವೇದಿಕೆಗೆ ಬಂದವನೇ ವರನ ಎದುರೇ ವಧುವನ್ನು ತಬ್ಬಿಕೊಂಡು ಚುಂಬಿಸಿದ ವಿಡಿಯೋ ವೈರಲ್ ಆಗಿದೆ.
ಮದುವೆ ಎಂಬುದು ಎಲ್ಲರ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ದಿನವಾಗಿದೆ. ಈಗಿನ ಜನರಂತು ಮದುವೆಗೆ ಹೆಚ್ಚು ಪ್ರಾಶಸ್ತ್ಯ ನೀಡಿ, ಈ ದಿನವನ್ನು ಅದ್ಧೂರಿಯಾಗಿಸಲು ಅನೇಕ ಪ್ಲಾನ್ ಮಾಡಿಕೊಂಡಿರುತ್ತಾರೆ.
ತನ್ನ ಬಾಳಸಂಗಾತಿ ಕೈಹಿಡಿಯುವ ಶುಭ ದಿನದಂದು ಹಲವು ಅನನ್ಯ ವಾತಾವರಣವನ್ನು ಸೃಷ್ಟಿಸುತ್ತಾರೆ. ಆದರೆ, ಕೆಲವೊಮ್ಮೆ ಮದುವೆಗಳಲ್ಲಿ ನಡೆಯುವ ಆಕಸ್ಮಿಕ ಘಟನೆಗಳು ನವ ಜೋಡಿಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಅಂತಹ ಘಟನೆಗೆ ಉದಾಹರಣೆ ಎನ್ನುವಂತೆ ವಿಡಿಯೋವೊಂದು ವೈರಲ್ ಆಗಿದೆ.
ಈ ವೀಡಿಯೋದಲ್ಲಿ ಅಲಂಕರಿಸಿದ ವೇದಿಕೆಯ ಮೇಲೆ ವಧು ಮತ್ತು ವರರು ಕುಳಿತಿರುತ್ತಾರೆ. ವೇದಿಕೆಗೆ ಪ್ರವೇಶಿಸಿದ ಯುವಕ ವಧುವನ್ನು ತಬ್ಬಿಕೊಂಡು ಬಿಟ್ಟು ಬಿಡದೇ ಚುಂಬಿಸಿದ್ದಾನೆ. ಪಕ್ಕದಲ್ಲೇ ಕುಳಿತಿದ್ದ ವರ ಈ ದೃಶ್ಯ ಕಂಡು ಶಾಕ್ ಆಗಿದ್ದಾನೆ ವರನ ಅಭಿವ್ಯಕ್ತಿ ಥಟ್ಟನೆ ಬದಲಾಗುತ್ತದೆ.
ಈ ಯುವಕನನ್ನು ತಡೆಯಲು ಮತ್ತೊಬ್ಬ ಯುವಕ ವೇದಿಕೆಯನ್ನು ಪ್ರವೇಶಿಸಿರುವುದು ವೈರಲ್ ಆದ ವಿಡಿಯೋದಲ್ಲಿ ಕಾಣಿಸಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಚುಂಬಿಸಿದ ವ್ಯಕ್ತಿ ಯಾರು?” ಮತ್ತು “ಈಗಾಗಲೇ ಮದುವೆ ನಡೆದಿದೆಯೇ?” ಎಂದೆಲ್ಲಾ ಕಾಮೆಂಟ್ ಹಾಕಿದ್ದಾರೆ.
Leave a Comment