2024ರಲ್ಲಿ ಜಗತ್ತಿಗೆ ಕಾದಿದೆ ಭಾರೀ ಕಂಟಕ – ನಾಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿ ಹೆಚ್ಚಿಸಿದೆ ಆತಂಕ

2024ರಲ್ಲಿ ಜಗತ್ತಿಗೆ ಕಾದಿದೆ ಭಾರೀ ಕಂಟಕ – ನಾಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿ ಹೆಚ್ಚಿಸಿದೆ ಆತಂಕ

ನ್ಯೂಸ್ ಆ್ಯರೋ : 2024ರ ಬಗ್ಗೆ ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ಅವರ ನುಡಿದ ಭವಿಷ್ಯವಾಣಿ ಚರ್ಚೆ ಬೆನ್ನಲ್ಲೇ ನಾಸ್ಟ್ರಾಡಾಮಸ್ ಎಂಬ ಫ್ರೆಂಚ್ ತತ್ವಜ್ಞಾನಿ ನುಡಿದ ಹಲವು ಭವಿಷ್ಯವಾಣಿಗಳು ಇದೀಗ ವೈರಲ್ ಆಗುತ್ತಿದೆ.

ಇವರು ಈ ಹಿಂದೆ ನುಡಿದ ಭವಿಷ್ಯವಾಣಿಗಳು ನಿಜವಾಗಿರುವುದರಿಂದ ಇದೀಗ ಕುತೂಹಲ ಮೂಡಿಸುತ್ತಿದೆ.

ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ಸತ್ಯವೆಂದು ನಂಬುವ ಅನೇಕ ಜನರಿದ್ದಾರೆ. 1566 ರ ಇಸವಿಯ ಮುಂಚೆಯೇ, ನಾಸ್ಟ್ರಾಡಾಮಸ್ 6 ಸಾವಿರಕ್ಕೂ ಹೆಚ್ಚು ಭವಿಷ್ಯವಾಣಿಗಳನ್ನು ನುಡಿದಿದ್ದರು. ಅಲ್ಲದೆ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಅದರ ಕಾರಣ ಏನಾಗಿರಬಹುದು ಎಂಬುದರ ಬಗ್ಗೆಯೂ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಎರಡನೇ ಮಹಾಯುದ್ದ, ಹಿಟ್ಲರ್‌ನ ಉದಯ, ಇಂದಿರಾ ಗಾಂಧಿ ಹತ್ಯೆ ಮತ್ತು ಅಮೇರಿಕಾದಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಭಯೋತ್ಪಾದಕ ದಾಳಿ ಹೀಗೆ ಇವೆಲ್ಲದರ ಬಗ್ಗೆ 1566 ರ ಮುಂಚೆಯೇ ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ನುಡಿದಿದ್ದರು.

ಈ ಭವಿಷ್ಯವಾಣಿಗಳನ್ನು ನಾಸ್ಟ್ರಾಡಾಮಸ್ ಅವರ ಪುಸ್ತಕ ʼಲೆಸ್ ಪ್ರೊಫೆಟೀಸ್ʼನಲ್ಲಿ ಬರೆದಿದ್ದಾರೆ. ಅವರು 2024ರಲ್ಲಿ ನಡೆಯಬಹುದಾದ ಘಟನೆಯಗಳ ಬಗ್ಗೆಯೂ ತಮ್ಮ ಪುಸ್ತಕದಲ್ಲಿ ಬರೆದಿದ್ದು, ಆ ಘಟನೆಗಳು ಯಾವುದೆಂಬುದನ್ನು ಇಲ್ಲಿ ವಿವರಿಸಲಾಗಿದೆ.

2024 ರಲ್ಲಿ ಸಂಭವಿಸಬಹುದಾದ ಕೆಲವು ಘಟನೆಗಳ ಕುರಿತ ನಾಸ್ಟ್ರಾಡಾಮಸ್ ಭವಿಷ್ಯವಾಣಿ:

ಅಮೇರಿಕಾದಲ್ಲಿ ಅಂತರ್‌ಯುದ್ಧ:

ನಾಸ್ಟ್ರಾಡಾಮಸ್ ತಮ್ಮ ಪುಸ್ತಕ ʼಲೆಸ್ ಪ್ರೊಫೆಟೀಸ್ʼನಲ್ಲಿ 2024 ರಲ್ಲಿ ಅಮೇರಿಕಾದಲ್ಲಿ ಅಂತರ್ ಯುದ್ಧ ಸಂಭವಿಸಬಹುದು ಎಂಬ ಭವಿಷ್ಯವಾಣಿಯನ್ನು ಬರೆದಿದ್ದಾರೆ. ಅದಲ್ಲದೆ 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೇರಿಕಾದಲ್ಲಿ ಅಸ್ಥಿರತೆ ಉಂಟಾಗುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಲಾಗಿದೆ. ಈ ದೇಶದಲ್ಲಿ ಅಂತರ್ ಯುದ್ಧದ ಪರಿಸ್ಥಿತಿಗಳು ಉದ್ಭವಿಸುವ ಸಾಧ್ಯತೆಯಿದೆ.

ಚೀನಾದ ನೌಕಾ ಯುದ್ಧ

2024 ರ ವೇಳೆಯಲ್ಲಿ ಚೀನಾ ತನ್ನ ನೌಕಾ ಶಕ್ತಿಯನ್ನು ಬಳಸಿಕೊಂಡು ಯುದ್ಧವನ್ನು ಮಾಡುತ್ತದೆ. ಚೀನಾ ಪ್ರಾಬಲ್ಯವನ್ನು ಸಾಧಿಸಲು ತನ್ನ ನೆರೆಹೊರೆಯ ದೇಶಗಳೊಂದಿಗೆ ಸಂಘರ್ಷಕ್ಕೆ ಇಳಿಯಬಹುದು ಹಾಗೂ ಚೀನಾ ತನ್ನ ನೌಕಾ ಶಕ್ತಿಯನ್ನು ಬಳಸಿಕೊಂಡು ಅಮೇರಿಕಾವನ್ನು ಬೆದರಿಸಲು ಪ್ರಯತ್ನಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ತೀವ್ರ ಹವಾಮಾನ ಬದಲಾವಣೆ

ಭೂಮಿಯು ಒಣಗಬಹುದು ಅಲ್ಲದೆ ಜಗತ್ತಿನಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು. ಜತೆಗೆ 2024 ರಲ್ಲಿ ಭೂಮಿಯು ತಾಪಮಾನ ಹೆಚ್ಚಾಗಿ ಭೂಮಿ ಬಿಸಿಯಾಗಲಿದೆ ಎಂದು ʼಲೆಸ್ ಪ್ರೊಫೆಟೀಸ್ʼ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಪರಮಾಣು ಸ್ಪೋಟ

ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ 2024 ರಲ್ಲಿ ಪರಮಾಣು ಸ್ಫೋಟ ಸಂಭವಿಸಲಿದೆ ಎಂದು ಭವಿಷ್ಯ ಬರೆದಿದ್ದಾರೆ, ಈ ಘಟನೆ ಕೂಡ ಹವಾಮಾನದ ಮೇಲೆ ಆಳವಾದ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ಗೆ ಹೊಸ ಪಾದ್ರಿ

ಫ್ರಾನ್ಸ್ ದೇಶಕ್ಕೆ ಯುವ ಪೋಪ್ (ಪಾದ್ರಿ) ಆಗಮನವಾಗಲಿದೆ. ಫ್ರಾನ್ಸಿನ ಈಗಿನ ಪೋಪ್‌ಗೆ ಪ್ರಸ್ತುತ 86 ವರ್ಷ ವಯಸ್ಸು. ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ. ಹಾಗಾಗಿ 2024 ರ ವೇಳೆಯಲ್ಲಿ ಹೊಸ ಪೋಪ್ ನ ಆಗಮನವಾಗಬಹುದು ಎಂದು ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *