ಗ್ಯಾಸ್‌ ಸಿಲಿಂಡರ್‌ ಮೇಲಿರುವ ಅಕ್ಷರಗಳು ಏನನ್ನು ಸೂಚಿಸುತ್ತದೆ? – ಸಿಲಿಂಡರ್ ಖರೀದಿಸುವಾಗ ಇದನ್ನು ತಪ್ಪದೇ ಪರಿಶೀಲಿಸಿ..

ಗ್ಯಾಸ್‌ ಸಿಲಿಂಡರ್‌ ಮೇಲಿರುವ ಅಕ್ಷರಗಳು ಏನನ್ನು ಸೂಚಿಸುತ್ತದೆ? – ಸಿಲಿಂಡರ್ ಖರೀದಿಸುವಾಗ ಇದನ್ನು ತಪ್ಪದೇ ಪರಿಶೀಲಿಸಿ..

ನ್ಯೂಸ್ ಆ್ಯರೋ : ಗ್ಯಾಸ್ ಸಿಲಿಂಡರ್ ನಮ್ಮ ಅಡುಗೆ ಮನೆಯ ಕೆಲಸಗಳಲ್ಲಿ ಬೇಕೆ ಬೇಕಾದ ಪ್ರಮುಖ ವಸ್ತು. ಒಂದು ವಯಸ್ಸಿನ ನಂತರ ಪ್ರತಿಯೊಬ್ಬರು ಗ್ಯಾಸ್ ಬಳಕೆ ಮಾಡಿಯೇ ಇರುತ್ತಾರೆ. ಆದರೆ, ಗ್ಯಾಸ್ ಸಿಲಿಂಡರ್‌ ಸರಿಯಾಗಿ ಗಮನಿಸಿದರೆ ನಿಮೆಗೆ ಅಚ್ಚರಿಯ ವಿಷಯ ತಿಳಿಯುತ್ತದೆ. ಅದರ ಬಗ್ಗೆ ಈ ಸುದ್ದಿಯಲ್ಲಿ ಹೆಚ್ಚಿನ ಮಾಹಿತಿಯಿದೆ.

ಗ್ಯಾಸ್ ಸಿಲಿಂಡರ್ ಉಪಯುಕ್ತವಾಗಿದ್ದರೂ ಸಹ, ಇದಕ್ಕೆ ಸಂಬಂಧಿಸಿದ ಅಪಾಯಗಳು ತಪ್ಪಿದ್ದಲ್ಲ. ಇನ್ನು ನೀವು ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ನೋಡಿದರೆ ಗ್ಯಾಸ್ ಸಿಲಿಂಡರ್‌ ಗಳ ಮೇಲೆ ಸಂಖ್ಯೆಗಳು ಇರುತ್ತದೆ. ನೀವು ಎಂದಾದರೂ ನೋಡಿದ್ದೀರಾ? ಅದರ ಮೇಲ್ಭಾಗದಲ್ಲಿ ನೀವು ಕೆಲವು ಕೋಡ್ ಅನ್ನು ನೋಡಿರುತ್ತೀರಿ. ಇದು ಏನನ್ನು ಸೂಚಿಸುತ್ತದೆ ನಿಮಗೆ ಗೊತ್ತೇ?

ಎ,ಬಿ,ಸಿ,ಡಿ ಅಕ್ಷರಗಳು ಏನನ್ನು ಹೇಳುತ್ತದೆ ಗೊತ್ತಾ?

ಈ ಸಂಕೇತಗಳ ಆರಂಭದಲ್ಲಿ ಬರೆಯಲಾದ ಎ,ಬಿ,ಸಿ,ಡಿ ಅಕ್ಷರಗಳು ವರ್ಷದ 12 ತಿಂಗಳುಗಳಿಗೆ ಸಂಬಂಧಿಸಿದ 4 ಗುಂಪುಗಳಲ್ಲಿವೆ. ಇಲ್ಲಿ ಎ ಅಕ್ಷರವನ್ನು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಬಳಸಿದರೆ, ಬಿ ಅಕ್ಷರಗಳನ್ನು ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಬಳಸಲಾಗುತ್ತದೆ. ಅದೇ ರೀತಿ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಸಿ ಅಕ್ಷರವನ್ನು ಬಳಸಲಾಗುತ್ತದೆ, ಆದ್ದರಿಂದ ಡಿ ಅನ್ನು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಳಸಲಾಗುತ್ತದೆ.

ಅಕ್ಷರಗಳ ನಂತರ ವರ್ಷವನ್ನು ಪ್ರತಿನಿಧಿಸುವ ಸಂಖ್ಯೆಗಳು. A20 ಅನ್ನು ಸಿಲಿಂಡರ್ ನಲ್ಲಿ ಬರೆದರೆ, ಇದರರ್ಥ 2020ರ ಜನವರಿ, ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳು. ಉದಾಹರಣೆಗೆ, ಸಿಲಿಂಡರ್‌ನಲ್ಲಿನ ಕೋಡ್ B.21 ಇದ್ದರೆ 2021 ರ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಸಿಲಿಂಡರ್ ಅವಧಿ ಮುಗಿಯಲಿದೆ ಎಂಬ ಅರ್ಥವನ್ನು ಕೋಡ್ ನಂಬರ್ ಮೂಲಕ ತಿಳಿಸುತ್ತದೆ.

ಆದ್ದರಿಂದ ಗ್ಯಾಸ್‌ ಬಲಸುವಾಗ ನೀವು ಪರೀಕ್ಷೆಯ ದಿನಾಂಕವನ್ನು ಮೀರಿ ಅವಧಿ ಮೀರಿದ ಸಿಲಿಂಡರ್ ಅನ್ನು ತೆಗೆದುಕೊಂಡರೆ, ಆ ಸಿಲಿಂಡರ್ ನಿಮಗೆ ಹಾನಿಯಾಗಬಹುದು ಎಂಬ ಮಾಹಿತಿಯನ್ನು ನೀಡುತ್ತದೆ. ಮುನ್ನೆಚ್ಚರಿಕೆಯೊಂದಿಗೆ ಗ್ಯಾಸ್ ಖರೀದಿಸುವಾಗ ಕೋಡ್‌ಗಳನ್ನು ಪರಿಶೀಲಿಸುವುದು ತುಂಬಾನೇ ಉತ್ತಮ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *