
Viral News : ಸೂಪರ್ ಸ್ಟಾರ್ ರಜನಿಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ – 25KG ತೂಕದ ರಜನಿ ವಿಗ್ರಹ ಸ್ಥಾಪನೆ
- ಮನರಂಜನೆ
- November 9, 2023
- No Comment
- 69
ನ್ಯೂಸ್ ಆ್ಯರೋ : ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ವಯಸ್ಸು 70 ದಾಟಿದ್ದರೂ ಕೂಡ ರಜನಿ ಕ್ರೇಜ್ ಒಂದಿಂಚೂ ಕಡಿಮೆಯಾಗಿಲ್ಲ. ಜೈಲರ್ ಸಿನಿಮಾದ ಯಶಸ್ಸಿನ ನಂತರವಂತೂ ರಜನಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ರಜನಿಯನ್ನು ಆರಾಧಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ರಜನಿಯ ಅಪ್ಪಟ ಅಭಿಮಾನಿ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನ ಕಟ್ಟಿಸಿ, 250 ಕೆಜಿ ತೂಕದ ವಿಗ್ರಹ ಸ್ಥಾಪಿಸಿ ತನ್ನ ಅಭಿಮಾನವನ್ನು ಜಗತ್ತಿಗೆ ಸಾರಿದ್ದಾನೆ. ಸದ್ಯ, ಈ ವಿಚಾರ ಸಖತ್ ಟ್ರೆಂಡಿಂಗ್ ನಲ್ಲಿದೆ.
ಎಲ್ಲಿದೆ ಸೂಪರ್ ಸ್ಟಾರ್ ದೇವಸ್ಥಾನ?
ರಜನಿಕಾಂತ್ ಅವರ ಕೋಟ್ಯಾಂತರ ಅಭಿಮಾನಿಗಳಲ್ಲಿ ತಮಿಳುನಾಡು ಜಿಲ್ಲೆಯ ಕಾರ್ತಿಕ್ ಕೂಡ ಒಬ್ಬರು. ಸದ್ಯ, ಕಾರ್ತಿಕ್ ತಮಿಳುನಾಡಿನ ಮದುರೈನಲ್ಲಿರುವ ತಮ್ಮ ಮನೆಯ ಎದುರು ರಜನಿಕಾಂತ್ ಅವರ ಸುಂದರವಾದ ದೇವಸ್ಥಾನವೊಂದನ್ನು ಕಟ್ಟಿಸಿದ್ದಾರೆ. ಇದಿಷ್ಟೇ ಅಲ್ಲದೆ 250KG ತೂಕದ ರಜನಿಕಾಂತ್ ಅವರ ವಿಗ್ರವನ್ನು ದೇವಸ್ಥಾನದಲ್ಲಿ ಸ್ಥಾಪಿಸಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಜನಿಯೇ ನಮಗೆ ದೇವರು!
ರಜನಿಕಾಂತ್ ಅವರಿಗೆ ಕಾರ್ತಿಕ್ ಯಾವಾಗ ದೇಗುಲ ಕಟ್ಟಿಸಿದರೋ, ಈ ವಿಚಾರ ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತೋ ಆವಾಗ ಮಾಧ್ಯಮಗಳೆಲ್ಲ ಕಾರ್ತಿಕ್ ಮನೆಯ ಮುಂದೆ ಸಾಲುಗಟ್ಟಿ ನಿಂತಿವೆ. ಈ ಬಗ್ಗೆ ಮಾತನಾಡಿರುವ ಕಾರ್ತಿಕ್, ‘ನಾನು ರಜನಿಕಾಂತ್ ಬಿಟ್ಟು ಬೇರೆ ಯಾವುದೇ ನಟರ ಸಿನಿಮಾ ನೋಡುವುದಿಲ್ಲ. ನಮಗೆ ಅವರೇ ದೇವರು. ಗೌರವದ ಸಂಕೇತಕ್ಕಾಗಿ ದೇವಾಲಯ ಕಟ್ಟಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಸೂಪರ್ ಸ್ಟಾರ್
ಸದ್ಯ, ಜೈಲರ್ ಸಿನಿಮಾದ ಅಮೋಘ ಗೆಲುವಿನ ನಂತರ ರಜನಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಖ್ಯಾತ ನಿರ್ದೇಶಕ ಜ್ಞಾನವೇಲ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾಗೆ ‘ತಲೈವರ್ 170’ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ರಜನಿ ಅವರೊಂದಿಗೆ ಬಿಗ್ ಬಿ ಕೂಡ ನಟಿಸುತ್ತಿದ್ದಾರೆ. ಇದರೊಂದಿಗೆ ರಜನಿ ತಮ್ಮ ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾದಲ್ಲಿ ರಜನಿಕಾಂತ್ ನಟಿಸಲಿದ್ದಾರೆ ಎನ್ನಲಾಗಿದೆ.