
ಶಬರಿಮಲೆಯ ಮುಖ್ಯ ಅರ್ಚಕರಾಗಿ ಪಿ.ಎನ್.ಮಹೇಶ್ ನೇಮಕ – ಪಂದಳಂ ರಾಜಮನೆತನದ ಮುಂದೆಯೇ ನಡೆಯಿತು ಆಯ್ಕೆ
- ಧಾರ್ಮಿಕ
- October 19, 2023
- No Comment
- 46
ನ್ಯೂಸ್ ಆ್ಯರೋ : ಶಬರಿಮಲೆಯ ಮುಖ್ಯ ಅರ್ಚಕರನ್ನಾಗಿ ಮೂವಾಟ್ಟುಪ್ಪುಳ ಎನನಲ್ಲೂರ್‌ನ ಪುಟಿಲ್ಲತ್ ಮಾನಾದ ಪಿ.ಎನ್.ಮಹೇಶ್ ಅವರನ್ನು ಒಂದು ವರ್ಷದ ಅವಧಿಗೆ ನೇಮಕಗೊಳಿಸಲಾಗಿದೆ.
ಇವರು ಪ್ರಕೃತ ತ್ರಿಶೂರ್‌ನ ಪರಮೇಕ್ಕಾವು ಭಗವತಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಗುರುವಾಯೂರ್ ಬಳಿಯ ಪೂಂಗತ್ ಮಾನಾದ ಪಿ.ಜಿ.ಮುರಳಿ ನಂಬೂದಿರಿ ಅವರನ್ನು ಶಬರಿಮಲೆಗೆ ಹೊಂದಿಕೊಂಡಿರುವ ಶ್ರೀಮಾಳಿಕಪ್ಪುರಂ ದೇವಿ ದೇವಸ್ಥಾನದ ಮೇಲ್ಶಾಂತಿಯಾಗಿ ನೇಮಕಗೊಳಿಸಲಾಗಿದೆ.
ಇವರು ಕಳೆದ ೨೫ವರ್ಷಗಳಿಂದ ಹೈದರಾಬಾದ್‌ನ ಸೋಮಾಜಿಗುಡದಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ನೇಮಕಾತಿಯನ್ನು ಶ್ರೀಕೋವಿಲ್ (ದೇವಸ್ಥಾನ)ನ ಮುಂದೆ ಚೀಟಿ ಎತ್ತುವ ಮೂಲಕ ಘೋಷಿಸಲಾಯಿತು. ತಿರುವಾಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ಸಂದರ್ಶನ ನಡೆಸಿದ ಬಳಿಕ ಅರ್ಚಕರ ಸಮಿತಿಯೊಂದು ಇವರ ಹೆಸರನ್ನು ಒಳಗೊಂಡ ಪಟ್ಟಿಯೊಂದನ್ನು ನೀಡಿತ್ತು. ಪಂದಳಂ ರಾಜಮನೆತನದ ವೈದೇಹಿ ವರ್ಮ(ಶಬರಿಮಲೆ) ಮತ್ತು ನಿರುಪಮ ಜಿ.ವರ್ಮ (ಮಾಳಿಗಪ್ಪುರಂ) ಅವರು ಟಿಡಿಬಿ ಅಕಾರಿಗಳ ಉಪಸ್ಥಿತಿಯಲ್ಲಿ ಚೀಟಿ ಎತ್ತಿದರು.
ಶಬರಿಮಲೆ ದೇವಳವು ತುಲಾ ಮಾಸದ ಪೂಜೆಗಾಗಿ ಮಂಗಳವಾರ ತೆರೆದುಕೊಂಡಿತು. ಮುಖ್ಯ ಅರ್ಚಕ ಕೆ.ಜಯರಾಮನ್ ನಂಬೂದಿರಿ ಅವರು ತಂತ್ರಿವರ್ಯ ಕಂಟರಾರು ಮಹೇಶ್ ಮೊಹನಾರು ಅವರ ಸಮ್ಮುಖ ನಡೆ ತೆರೆದರು. ಅನಂತರ ಅವರು ಮಾಳಿಗಪ್ಪುರಂ ದೇವಳದ ಕೀಲಿ ಕೈಯ್ಯನ್ನು ಮುಖ್ಯ ಅರ್ಚಕ ವಿ.ಹರಿಹರನ್ ಅವರಿಗೆ ನೀಡಿದರು. ಅನಂತರ ಭಕ್ತರು ದೇವರ ದರ್ಶನ ಮಾಡಿದರು. ಅಕ್ಟೋಬರ್ 22ವರೆಗೆ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.