
ಟೀಂ ಇಂಡಿಯಾವನ್ನು ಸೋಲಿಸಿದ್ರೆ ನಾನು ನಿಮ್ಮ ಜೊತೆ ಡೇಟಿಂಗ್ ಗೆ ರೆಡಿ – ಬಾಂಗ್ಲಾ ಆಟಗಾರರಿಗೆ ಪಾಕ್ ನಟಿ ಬಂಪರ್ ಆಫರ್..!!
- ಕ್ರೀಡಾ ಸುದ್ದಿ
- October 19, 2023
- No Comment
- 176
ನ್ಯೂಸ್ ಆ್ಯರೋ : ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅ. 19ರಂದು ಭಾರತವನ್ನು ಬಾಂಗ್ಲಾದೇಶ ಕ್ರಿಕೆಟ್ ತಂಡ ಸೋಲಿಸಬೇಕು. ಹೀಗಾದರೆ ಬಾಂಗ್ಲಾದೇಶದ ಕ್ರಿಕೆಟಿಗರಿಗೆ ಭರ್ಜರಿ ಆಫರ್ ವೊಂದನ್ನು ಪಾಕಿಸ್ತಾನದ ನಟಿ ಘೋಷಿಸಿದ್ದಾರೆ.
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿಗುರುವಾರ ಮಧ್ಯಾಹ್ನ ನಡೆಯಲಿರುವ ವಿಶ್ವಕಪ್ 2023ರ 17ನೇ ಪಂದ್ಯದಲ್ಲಿ ಭಾರತ- ಬಾಂಗ್ಲಾದೇಶವನ್ನು ಎದುರಿಸಲಿದೆ.
ಈ ವಿಶ್ವಕಪ್‌ನಲ್ಲಿ ಸೋಲನ್ನು ಕಾಣದ ಭಾರತ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್ ಗಳಿಂದ ಸೋಲಿಸಿತ್ತು. ಹೀಗಾಗಿ ಈ ಬಾರಿ ನಡೆಯುವ ಪಂದ್ಯದಲ್ಲಿ ಭಾರತವನ್ನು ಸೋಲಿಸಬೇಕೆಂದು ಪಾಕಿಸ್ತಾನಿ ಅಭಿಮಾನಿಗಳು ಬಾಂಗ್ಲಾದೇಶವನ್ನು ಹುರಿದುಂಬಿಸುತ್ತಿದ್ದಾರೆ.
ಅದರಲ್ಲೂ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ಅವರು ಈ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಬಾಂಗ್ಲಾದೇಶದ ಕ್ರಿಕೆಟಿಗರಿಗೆ ಡೇಟಿಂಗ್ ಆಫರ್ ಕೊಟ್ಟಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಶಿನ್ವಾರಿ, ಭಾರತವನ್ನು ಸೋಲಿಸಿದರೆ ನಿಮ್ಮೊಂದಿಗೆ ಡೇಟ್‌ಗೆ ಬರುತ್ತೇನೆ ಎಂದು ಬಾಂಗ್ಲಾ ಕ್ರಿಕೆಟಿಗರಿಗೆ ಆಫರ್ ನೀಡಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವತ್ತಿನ ಪಂದ್ಯದಲ್ಲಿ ಏನಾಗುವುದು, ಬಾಂಗ್ಲಾದೇಶದ ಕ್ರಿಕೆಟಿಗರಿಗೆ ಈ ಅದೃಷ್ಟ ದೊರೆಯುವುದೋ ಎನ್ನುವ ಕುತೂಹಲದಿಂದ ಎಲ್ಲರೂ ಕಾಯುವಂತಾಗಿದೆ.
ಇತ್ತೀಚೆಗೆ ಅಹಮದಬಾದ್ ಕ್ರೀಡಾಂಗಣದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಸೋಲಿಸಿದ್ದು, ಬಂಗಾಳಿ ಸಹೋದರರು ಮುಂದಿನ ಪಂದ್ಯದಲ್ಲಿ ಇದರ ಸೇಡು ತೀರಿಸಿಕೊಳ್ಳುತ್ತಾರೆ. ಅವರು ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಕ್ಕೆ ಹೋಗಿ ಬಾಂಗ್ಲಾ ಹುಡುಗರೊಂದಿಗೆ ಫಿಶ್ ಡಿನ್ನರ್ ಡೇಟ್ ಮಾಡುತ್ತೇನೆ ಎಂದು ಟ್ವಿಟ್ ನಲ್ಲಿ ಹೇಳಿದ್ದಾರೆ.
ಶಿನ್ವಾರಿ ಕ್ರಿಕೆಟ್ ಕುರಿತು ಟ್ವೀಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋಲು ಅನುಭವಿಸಿದಾಗ ಬಾಬರ್ ಅಜಮ್ ಮತ್ತು ತಂಡ ಕ್ರಿಕೆಟ್ ಆಡುವ ಬದಲು ನಮ್ಮ ರಾಷ್ಟ್ರೀಯ ಭಾವನೆಗಳೊಂದಿಗೆ ಆಡುತ್ತಾರೆ ಎಂದು ಹೇಳಿ ಎಫ್‌ಐಆರ್ ದಾಖಲಿಸಲು ಮುಂದಾಗಿದ್ದರು.