ಮೊಸರನ್ನ ಎನ್ನುವ ಪರಮಾನ್ನ ಅದೆಷ್ಟು ಆರೋಗ್ಯದಾಯಕ ಗೊತ್ತಾ? – ಮಾಡೋದು ಸುಲಭ, ತಿನ್ನೋದ್ರಿಂದ ಹಲವು ಪ್ರಯೋಜನ

ಮೊಸರನ್ನ ಎನ್ನುವ ಪರಮಾನ್ನ ಅದೆಷ್ಟು ಆರೋಗ್ಯದಾಯಕ ಗೊತ್ತಾ? – ಮಾಡೋದು ಸುಲಭ, ತಿನ್ನೋದ್ರಿಂದ ಹಲವು ಪ್ರಯೋಜನ

ನ್ಯೂಸ್ ಆ್ಯರೋ : ಸಾಮಾನ್ಯವಾಗಿ ಮೊಸರನ್ನ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಶೀತ, ಕಫದ ಬಾಧೆ ಇರುವವರು ಇದರಿಂದ ಕೊಂಚ ದೂರವಿರುತ್ತಾರೆ. ಆದರೂ ಅಪರೂಪಕ್ಕೊಮ್ಮೆ ಇದನ್ನು ಸವಿಯಬೇಕು ಎನ್ನುವ ಆಸೆಯಂತೂ ಮನದೊಳಗೆ ಹುಟ್ಟು ಹಾಕುತ್ತದೆ.

ನಮ್ಮ ಅಜ್ಜ, ಅಜ್ಜಿಯರ ಕಾಲದಲ್ಲಿ ಕಾಲದಲ್ಲಿ ಹೆಚ್ಚಾಗಿ ಮೊಸರನ್ನವನ್ನೇ ತಿನ್ನುತ್ತಿದ್ದರು. ಹೀಗಾಗಿ ಅವರಲ್ಲಿ ಬಹುತೇಕರು ಶತಾಯುಷಿಗಳಾಗಿ ಬಾಳಿ ಬದುಕಿದರು. ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಮೊಸರನ್ನ ಬಹಳ ರುಚಿಕರವಾಗಿಯೂ ಇರುತ್ತದೆ. ಇದು ದೇಹಕ್ಕೆ ಪೌಷ್ಟಿಕ ಆಹಾರವೂ ಹೌದು.

ಮೊಸರನ್ನ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಮುಖ್ಯವಾಗಿ ಇದು ಇದು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅನ್ನು ಯಥೇಚ್ಛ ಪ್ರಮಾಣದಲ್ಲಿ ಹೊಂದಿದೆ. ಇದು ಹಲ್ಲು, ಸ್ನಾಯು, ಮೂಳೆಗಳ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿದೆ.

ಫೈಬರ್‌ನ ಗುಣವಿರುವ ಮೊಸರನ್ನ ಸೇವನೆಯಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೊಸರನ್ನದಲ್ಲಿ ಪ್ರೋಬಯಾಟಿಕ್‌ ಅಂಶಗಳಿವೆ. ಅಂದರೆ ಉತ್ತಮ ಬ್ಯಾಕ್ಟೀರಿಯಾಗಳು. ಇದು ಕರುಳಿನ ಆರೋಗ್ಯವನ್ನು ವೃದ್ದಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇಹದ ತೂಕ ಇಳಿಸಬೇಕು ಎನ್ನುವ ಬಯಕೆ ಇರುವವರು ಮೊಸರನ್ನವನ್ನು ನಿಯಮಿತವಾಗಿ ಸೇವಿಸಿದರೆ ಒಳ್ಳೆಯದು. ಮೊಸರಿನಲ್ಲಿ ಹೇರಳವಾದ ಪ್ರೋಟೀನ್ ಇದ್ದು, ಇದು ಹಸಿವನ್ನು ನಿಯಂತ್ರಿಸುತ್ತದೆ.

ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಮೊಸರನ್ನ ದೇಹಕ್ಕೆ ಶಕ್ತಿಯನ್ನು ನೀಡಿ, ಆಯಾಸವನ್ನು ಹೋಗಲಾಡಿಸುತ್ತದೆ.

ಮೊಸರನ್ನದಲ್ಲಿ ವಿಟಮಿನ್‌ ಮತ್ತು ಖನಿಜಗಳು ಹೇರಳವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹವು ಸೋಂಕಿನ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತದೆ.

ಒಟ್ಟಿನಲ್ಲಿ ಮೊಸರನ್ನದ ಸಾಕಷ್ಟು ಉತ್ತಮ ಗುಣಗಳಿದ್ದು, ನಿಯಮಿತವಾಗಿ ಇದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ರಾತ್ರಿ ಹೊತ್ತು ಮೊಸರು ಸೇವಿಸಬಾರದು. ಯಾಕೆಂದರೆ ಇದು ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡಬಹುದು ಮತ್ತು ನಿದ್ರೆಗೆ ತೊಂದರೆಯುಂಟು ಮಾಡಬಹುದು.

ಮೊಸರಿನ ಸೇವನೆ ಹಗಲು ಹೊತ್ತು ಉತ್ತಮ. ಇನ್ನು ಶೀತ, ಕಫದ ಬಾಧೆ ಇರುವವರು ಚಳಿ, ಮಳೆಗಾಲದಲ್ಲಿ ಮೊಸರಿನ ಉತ್ಪನ್ನಗಳನ್ನು ಸೇವಿಸದೇ ಇರುವುದು ಉತ್ತಮ.

ಮೊಸರನ್ನ ಮಾಡುವ ಸುಲಭ ವಿಧಾನ ಇಲ್ಲಿದೆ.

ಒಂದು ಲೋಟ ಸಾಮಾನ್ಯ ಬೆಳ್ತಿಗೆ ಅಕ್ಕಿಯನ್ನು ಬೇಯಿಸಿ ಇಟ್ಟುಕೊಂಡು ಬಳಿಕ ಅದಕ್ಕೆ ಮೊಸರನ್ನು ಕಲಸಿ ಇಡಿ. ಜೀರಿಗೆ, ಕರಿಬೇವು, ಕೆಂಪು ಮೆಣಸು, ಬೆಳ್ಳುಳ್ಳಿ ಸೇರಿಸಿ ತಯಾರಿಸಿದ ಒಗ್ಗರಣೆ ಹಾಕಿ. ರುಚಿ ಹೆಚ್ಚಬೇಕಾದರೆ ದಾಳಿಂಬೆ ಕಾಳುಗಳನ್ನು ಮೊಸರನ್ನದ ಕಲಸಿ ಸೇವಿಸಿ. ಹದ ಬಿಸಿಯಾಗಿರುವಾಗ ಸವಿದರೆ ಹೆಚ್ಚು ರುಚಿಕರವಾಗಿರುತ್ತದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *