ಪ್ಯಾಲೆಸ್ಟೈನ್ ಗೆ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ ಬೈಡೆನ್ – ಇಸ್ರೇಲ್ ಪರ ಬೈಡೆನ್ ನಿಲುವು ಬದಲಾಯ್ತಾ?

ಪ್ಯಾಲೆಸ್ಟೈನ್ ಗೆ 100 ಮಿಲಿಯನ್ ಡಾಲರ್ ನೆರವು ಘೋಷಿಸಿದ ಬೈಡೆನ್ – ಇಸ್ರೇಲ್ ಪರ ಬೈಡೆನ್ ನಿಲುವು ಬದಲಾಯ್ತಾ?

ನ್ಯೂಸ್ ಆ್ಯರೋ‌ : ಹಮಾಸ್ ಉಗ್ರರ ದಾಳಿಯಿಂದ ಇಸ್ರೇಲ್​ ರಣಾಂಗಣವಾಗಿದ್ದು, ಇಸ್ರೇಲ್​ನ ಪ್ರತಿದಾಳಿಗೆ ಪ್ಯಾಲೆಸ್ತೀನ್​ನ ಹಲವು ಪ್ರದೇಶಗಳು ಧ್ವಂಸಗೊಂಡಿವೆ. ತನ್ಮಧ್ಯೆ ಪ್ಯಾಲೆಸ್ತೀನ್​ ಸಂತ್ರಸ್ತರ ನೆರವಿಗೆ ಅಮೆರಿಕ ಮುಂದಾಗಿದ್ದು, ದೊಡ್ಡ ಆರ್ಥಿಕ ನೆರವನ್ನು ಕೂಡ ಘೋಷಣೆ ಮಾಡಲಾಗಿದೆ.

ಮಾನವೀಯ ನೆಲೆಯಲ್ಲಿ ಗಾಜಾ ಹಾಗೂ ವೆಸ್ಟ್​ ಬ್ಯಾಂಕ್​ಗೆ 100 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಲಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಘೋಷಣೆ ಮಾಡಿದ್ದಾರೆ. ಸಂಘರ್ಷ ಪೀಡಿತ ಪ್ರದೇಶದಲ್ಲಿನ ಹಾಗೂ ಸಂತ್ರಸ್ತರಾಗಿರುವ 10 ಲಕ್ಷಕ್ಕೂ ಅಧಿಕ ಪ್ಯಾಲೆಸ್ತೀನಿಯರಿಗೆ ಈ ಆರ್ಥಿಕ ನೆರವಿನಿಂದ ಅನುಕೂಲ ಆಗಲಿದೆ ಎಂದೂ ಅವರು ಹೇಳಿದ್ದಾರೆ.

ಅಲ್ಲದೆ ಈ ಆರ್ಥಿಕ ನೆರವಿನ ಹಣ ಹಮಾಸ್ ಅಥವಾ ಭಯೋತ್ಪಾದಕ ಗುಂಪುಗಳ ಪಾಲಾಗದೆ ನಿಜವಾದ ಸಂತ್ರಸ್ತರಿಗೇ ತಲುಪುವಂತೆ ಸ್ಥಳದಲ್ಲೇ ಸರಿಯಾದ ವ್ಯವಸ್ಥೆಯನ್ನೂ ನಾವು ಹೊಂದಲಿದ್ದೇವೆ ಎಂದಿರುವ ಬೈಡನ್, ಇನ್ನೊಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.


ಬಹುಪಾಲು ಪ್ಯಾಲೆಸ್ತೀನಿಯರು ಹಮಾಸರಲ್ಲ ಹಾಗೂ ಹಮಾಸ್ ಜನರು ಪ್ಯಾಲೆಸ್ತೀನಿಯರನ್ನು ಪ್ರತಿನಿಧಿಸುತ್ತಿಲ್ಲ ಎಂಬುದು ನಾನು ಸ್ಪಷ್ಟಪಡಿಸುತ್ತಿರುವುದಾಗಿ ಹೇಳಿರುವ ಬೈಡನ್ ಇನ್ನೊಂದೆಡೆ ಇಸ್ರೇಲ್ಗೂ ಅಭಯ ನೀಡಿದ್ದಾರೆ. ನಿಮ್ಮೊಂದಿಗೆ ಯುಎಸ್ ಶಾಶ್ವತವಾಗಿ ಬೆಂಬಲಕ್ಕೆ ಇರಲಿದೆ, ನೀವು ಒಂಟಿಯಲ್ಲ ಎಂಬ ಸಂದೇಶವನ್ನು ಇಸ್ರೇಲ್ಗೆ ನೀಡಿದ್ದಾರೆ.

ಜೊತೆಗೆ ಇಸ್ರೇಲ್ ಈ ಪರಿಸ್ಥಿತಿಯನ್ನು ನಿಭಾಯಿಸಿದ ಕುರಿತು ಮೆಚ್ಚುಗೆ ಸೂಚಿಸಿರುವ ಬೈಡನ್, ಇಸ್ರೇಲ್ ಜನರ ಬದ್ಧತೆ, ಜಾಣತನ, ಧೈರ್ಯದ ಕುರಿತು ನನಗೆ ಹೆಮ್ಮೆ ಎನಿಸುತ್ತಿದೆ ಎಂದೂ ಹೇಳಿದ್ದಾರೆ.

9/11 ದಾಳಿಗೆ ಹಮಾಸ್ ದಾಳಿ ಹೋಲಿಸಿದ ಬೈಡೆನ್..!

ಯುಎಸ್ ಅಧ್ಯಕ್ಷ ಜೋ ಬೈಡನ್ ಬುಧವಾರ ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಯುಎಸ್ ನಲ್ಲಿ 9/11 ಕ್ಕೆ ಹೋಲಿಸಿದ್ದಾರೆ. ನನಗೆ ಅರ್ಥವಾಗುತ್ತದೆ ಮತ್ತು ಈ ದಾಳಿಯನ್ನು ಅನೇಕ ಅಮೆರಿಕನ್ನರು ಅರ್ಥಮಾಡಿಕೊಂಡಿದ್ದಾರೆ ಎಂದು ಬೈಡನ್ ಈ ದಾಳಿಯನ್ನು ಸೆಪ್ಟೆಂಬರ್ 11, 2001 ರಂದು ವಿಶ್ವ ವ್ಯಾಪಾರ ಕೇಂದ್ರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ.

ಹಮಾಸ್ ನ ದಾಳಿಯು ಅಮೆರಿಕದಲ್ಲಿ ನಡೆದ 9/11 ರ ದಾಳಿಯಂತಿದೆ.ನನಗೆ ಅರ್ಥವಾಗುತ್ತದೆ. ಅನೇಕ ಅಮೆರಿಕನ್ನರು ಅರ್ಥಮಾಡಿಕೊಂಡಿದ್ದಾರೆ ಎಂದು ಬೈಡನ್ ಈ ದಾಳಿಯನ್ನು ಸೆಪ್ಟೆಂಬರ್ 11, 2001 ರಂದು ವಿಶ್ವ ವ್ಯಾಪಾರ ಕೇಂದ್ರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ.

ಅಲ್ಲಿ ಏನಾಯಿತು ಎಂದು ನೀವು ನೋಡಲು ಸಾಧ್ಯವಿಲ್ಲ ಮತ್ತು ನ್ಯಾಯಕ್ಕಾಗಿ ಕಿರುಚಬಾರದು. ನೀವು ಆ ಕೋಪವನ್ನು ಅನುಭವಿಸುತ್ತಿರುವಾಗ, ಅದರಿಂದ ವ್ಯಸನಗೊಳ್ಳಬೇಡಿ ಎಂದು ಬೈಡನ್ ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದ್ದಾರೆ. ಅಧ್ಯಕ್ಷ ಬೈಡನ್ ಅವರ ಹೇಳಿಕೆಯ ನಂತರ, ಆಹಾರ, ನೀರು ಮತ್ತು ಔಷಧಿಗಳು ಗಾಜಾಪಟ್ಟಿಯತ್ತ ಸಾಗಲು ಪ್ರಾರಂಭಿಸುತ್ತವೆ ಎಂದು ಇಸ್ರೇಲ್ ದೃಢಪಡಿಸಿತು.

ಈಜಿಪ್ಟ್ ನಿಂದ ಗಾಝಾಗೆ ಮಾನವೀಯ ನೆರವು ಹರಿಯಲು ಪ್ರಾರಂಭಿಸಲು ಇಸ್ರೇಲ್ ಒಪ್ಪಿಕೊಂಡಿದೆ. ಅದು ತಪಾಸಣೆಗೆ ಒಳಪಟ್ಟಿರುತ್ತದೆ ಮತ್ತು ಅದು ನಾಗರಿಕರಿಗೆ ಹೋಗಬೇಕು ಮತ್ತು ಹಮಾಸ್ ಭಯೋತ್ಪಾದಕರಿಗೆ ಅಲ್ಲ ಎಂದು ಹೇಳಿದರು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *