ರಾಕಿಂಗ್ ಸ್ಟಾರ್ ಯಶ್ ಕಾಲಿಗೆ ಪೋಲಿಯೋ ಅಟ್ಯಾಕ್ ಆಗಿದ್ಯಾ? – ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್..!!

ರಾಕಿಂಗ್ ಸ್ಟಾರ್ ಯಶ್ ಕಾಲಿಗೆ ಪೋಲಿಯೋ ಅಟ್ಯಾಕ್ ಆಗಿದ್ಯಾ? – ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್..!!

ನ್ಯೂಸ್ ಆ್ಯರೋ : ಕಳೆದ ವರ್ಷ ಬಾಕ್ಸ್‌ ಆಫೀಸಿನಲ್ಲಿ ಧೂಳೆಬ್ಬಿಸಿದ ಕೆಜಿಎಫ್ 2 ಸಿನಿಮಾ ಬಳಿಕ ನಟ ಯಶ್ ಅವರು ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಈ ಹಿಂದೆ ತಮಿಳು ಸಿನಿಮಾ ವಿಮರ್ಶಕ ಮನೋಬಾಲಾ ಅವರು ಅಕ್ಟೋಬರ್‌ನಲ್ಲಿ ನಟ ಯಶ್ ಅವರು ತಮ್ಮ ಮುಂದಿನ ಸಿನಿಮಾ ಬಿಡುಗಡೆಯಾಗುವುದಾಗಿ ಹೇಳಿಕೊಂಡಿದ್ದರು.

ಆದರೆ ಅಕ್ಟೋಬರ್ ಕಳೆಯುತ್ತಿದ್ದರೂ ಯಶ್ ಯಾವುದೇ ಸಿನಿಮಾವನ್ನು ಘೋಷಣೆ ಮಾಡಿಲ್ಲ. ಇನ್ನೆರಡು ತಿಂಗಳು ಕಳೆದರೆ 2023 ಮುಗಿಯುತ್ತದೆ. ಯಶ್‌ ಇನ್ನು ಯಾವಾಗ ಸಿನಿಮಾ ಅನೌನ್ಸ್‌ ಮಾಡೋದು ಎಂದು ಕಾಯುತ್ತಿದ್ದವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋವೊಂದು ಶಾಕ್‌ ಕೊಟ್ಟಿದೆ.

ಈ ವಿಡಿಯೋ ನೋಡಿ ಯಶ್‌, ಹೊಸ ಸಿನಿಮಾ ಅನೌನ್ಸ್‌ ಮಾಡದಿರಲು ಕಾರಣ ಇದೇನಾ ಎಂಬ ಚರ್ಚೆ ಶುರುವಾಗಿದೆ. ಈ ವಿಡಿಯೋ ನೋಡಿದರೆ ಕೆಲವರು ಇದು ನಿಜ ಇರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ಫೇಕ್‌ ವಿಡಿಯೋ, ಯಾರದ್ದೋ ದೇಹಕ್ಕೆ ಬೇರೆ ಯಾರದ್ದೋ ಕಾಲುಗಳನ್ನು ಎಡಿಟ್‌ ಮಾಡಿ ಈ ರೀತಿ ಬೇಕಂತಲೇ ಹರಿಯಬಿಡಲಾಗಿದೆ ಎನ್ನುತ್ತಿದ್ದಾರೆ. ಅಸಲಿಗೆ ವಿಡಿಯೋದಲ್ಲಿ ಅಂಥದ್ದು ಏನಿದೆ ಎನ್ನುತ್ತೀರಾ? ಮುಂದೆ ಓದಿ.

Box Office-South India ಎಂಬ ಎಕ್ಸ್‌ ಪೇಜ್‌ ಯಶ್‌ ವರ್ಕೌಟ್‌ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದೆ. ಯಶ್‌ 19ನೇ ಸಿನಿಮಾ ಅನೌನ್ಸ್‌ ಮಾಡೋದು ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ.

ಆದರೆ ಯಶ್‌ ಕಾಲಿಗೆ ಪೋಲಿಯೋ ಅಟ್ಯಾಕ್‌ ಆಗಿದೆ, ಇದರಿಂದ ಯಶ್‌ ಗುಣಮುಖರಾಗುತ್ತಿದ್ದಾರೆ. ಸಂಪೂರ್ಣ ಆರೋಗ್ಯ ಸಮಸ್ಯೆಯಿಂದ ಹೊರಬಂದ ನಂತರ ಯಶ್‌, ಹೊಸ ಸಿನಿಮಾ ಅನೌನ್ಸ್‌ ಮಾಡುತ್ತಾರೆ ಎಂದು ಬರೆಯಲಾಗಿದೆ.

ವಿಡಿಯೋ ನೋಡಿದರೆ ಕಾಲು ಹಾಗೂ ಮೇಲಿನ ಭಾಗಕ್ಕೂ ಹೊಂದಾಣಿಕೆ ಇಲ್ಲದಂತೆ ಕಾಣುತ್ತಿದೆ. ವಿಡಿಯೋ ನೋಡಿ ಯಶ್‌ ಅಭಿಮಾನಿಗಳು ಕಂಗಾಲಾಗಿದ್ದಾರೆ. ಸಿನಿಮಾ ತಡವಾಗುತ್ತಿರಲು ಇದೇ ಕಾರಣ ಇರಬಹುದಾ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ.‌

ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದ ಯಶ್ ಅಭಿಮಾನಿಗಳು

ಇದೊಂದು ಫೇಕ್ ವಿಡಿಯೋ ಎಂದು ಯಶ್ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಎಐ ನಿಂದ ಈಗ ಯಾವ ರೀತಿ ಬೇಕಾದರೂ ಫೋಟೋಗಳನ್ನು ಸೃಷ್ಟಿಸಬಹುದು, ಅದೇ ರೀತಿ ವಿಡಿಯೋವನ್ನು ಕೂಡಾ ಈ ರೀತಿ ಎಡಿಟ್‌ ಮಾಡಿ, ಯಶ್‌ ಇಮೇಜ್‌ಗೆ ಧಕ್ಕೆ ತರಲು ಈ ರೀತಿ ಕ್ರಿಯೇಟ್‌ ಮಾಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *