
ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತೆ ಗೊತ್ತಾ? – ಈ ದಿನ ಹುಟ್ಟಿದವರಿಗೆ ತೊಂದರೆ ಜಾಸ್ತಿ, ಆದ್ರೆ ಗೆಲುವು ನಿಶ್ಚಿತ..!
- ಧಾರ್ಮಿಕ
- November 4, 2023
- No Comment
- 101
ನ್ಯೂಸ್ ಆ್ಯರೋ : ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಜನಿಸಿದ ದಿನಕ್ಕೆ ಅನುಗುಣವಾಗಿ ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಶನಿವಾರ ಜನಿಸಿದ ವ್ಯಕ್ತಿಗಳ ಕುರಿತು ಮಾಹಿತಿ ನೀಡಲಿದ್ದೇವೆ. ಶನಿವಾರ ಜನಿಸಿದ ವ್ಯಕ್ತಿಗಳ ಮೇಲೆ ಶನಿ ದೇವನ ವಿಶೇಷ ಪ್ರಭಾವ ಇರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿವಾರ, ಶನಿದೇವನಿಗೆ ಸಮರ್ಪಿತ ದಿನವಾಗಿದೆ. ಈ ಕಾರಣದಿಂದ ಶನಿದೇವನ ಪ್ರಭಾವ ವ್ಯಕ್ತಿಗಳ ಮೇಲೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಜೀವನ ಏರಿಳಿತಗಳಿಂದ ಕೂಡಿರುತ್ತದೆ
ಜೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ ಶನಿವಾರ ಜನಿಸಿದ ವ್ಯಕ್ತಿಗಳ ಜೀವನ ಏರಿಳಿತದಿಂದ ಕೂಡಿರುತ್ತದೆ. ಈ ವ್ಯಕ್ತಿಗಳ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಕೊನೆಗೆ ಇವರು ಗೆದ್ದೇಗೆಲ್ಲುತ್ತಾರೆ.
ಇವರಿಗೆ ಕೋಪ ಹೆಚ್ಚಾಗಿರುತ್ತದೆ
ಶನಿವಾರ ಜನಿಸಿದ ಜನರು ಹೆಚ್ಚು ಕೋಪಿಷ್ಠರಾಗಿರುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇವರ ಕೋಪ ಮೂಗಿನ ಮೇಲಿರುತ್ತದೆ.
ಪರಿಶ್ರಮ ಜೀವಿಗಳಗಿರುತ್ತಾರೆ
ಶನಿವಾರ ಜನಿಸಿದ ಜನರು ಪರಿಶ್ರಮ ಜೀವಿಗಳಾಗಿರುತ್ತಾರೆ. ತಮ್ಮ ಪರಿಶ್ರಮದಿಂದ ಇವರು ಯಶಸ್ಸನ್ನು ಸಾಧಿಸುತ್ತಾರೆ.
ಶನಿದೇವನ ಕೃಪೆ
ಶನಿವಾರ ಜನಿಸಿದ ಜನರ ಮೇಲೆ ಶನಿದೇವನ ವಿಶೇಷ ಕೃಪೆ ಇರುತ್ತದೆ. ಇವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ, ಇವರ ಮೇಲೆ ಶನಿದೇವನ ವಿಶೇಷ ಕೃಪೆ ಇರುವುದರಿಂದ ಇವರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪಾರಾಗುತ್ತಾರೆ.
ಎಲ್ಲಾ ಕಾರ್ಯಗಳನ್ನು ಸಂಪೂರ್ಣ ಶ್ರದ್ಧೆಯಿಂದ ನಿರ್ವಹಿಸುತ್ತಾರೆ
ಶನಿವಾರ ಜನಿಸಿದ ಜನರು ಯಾವುದೇ ಕೆಲಸ ಮಾಡಿದರು ಕೂಡ ಅದನ್ನು ಸಂಪೂರ್ಣ ಶ್ರದ್ಧೆ ಹಾಗೂ ನಿಷ್ಠೆಯಿಂದ ಪೂರ್ಣಗೊಳಿಸುತ್ತಾರೆ. ಈ ಜನರ ಕೆಲಸ ಯಾವಾಗಲು ಉತ್ತಮ ಗುಣಮಟ್ಟದ್ದಾಗಿರುತ್ತದೆ.
ಇತರರಿಗೆ ಸಹಾಯ ಮಾಡುವ ಜೀವಿಗಳು
ಶನಿವಾರ ಹುಟ್ಟಿದವರು ಪರ ಸಹಾಯ ಮೆರೆಯುವಂತರಾಗಿರುತ್ತಾರೆ. ಯಾರಿಗಾದರೂ ಕೂಡ ಸಹಾಯ ಮಾಡುವಲ್ಲಿ ಇವರು ಯಾವತ್ತು ಮುಂದು. ದಾನ-ಪುಣ್ಯ ಕಾರ್ಯಗಳನ್ನು ಮಾಡುವಲ್ಲಿ ಇವರು ಯಾವತ್ತು ಮುಂದಿರುತ್ತಾರೆ.