ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ನೆನೆಸಿದ ನೀರು ‌ಸೇವಿಸಿ – ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗಗಳಿವೆ ಗೊತ್ತಾ?

ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ನೆನೆಸಿದ ನೀರು ‌ಸೇವಿಸಿ – ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗಗಳಿವೆ ಗೊತ್ತಾ?

ನ್ಯೂಸ್ ಆ್ಯರೋ‌ : ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳು ಹಾಗೂ ನಾವು ಬಳಸುವಂತಹ ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಆಯುರ್ವೇದವು ಹಲವಾರು ವಿಧದ ಔಷಧಿಗಳನ್ನು ತಯಾರಿಸುತ್ತದೆ ಮತ್ತು ಇದು ತುಂಬಾ ಪರಿಣಾಮಕಾರಿ ಹಾಗೂ ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದು. ಆಯುರ್ವೇದದಲ್ಲಿ ಸೂಚಿಸಿರುವಂತಹ ಕೆಲವೊಂದು ವಿಧಾನಗಳನ್ನು ನಾವು ಪಾಲಿಸಿಕೊಂಡು ಹೋದರೆ ಅದು ನಮಗೆ ದಿನನಿತ್ಯದಲ್ಲಿ ಆರೋಗ್ಯ ಕಾಪಾಡಲು ತುಂಬಾ ನೆರವಾಗಲಿದೆ.

ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ರಾತ್ರಿ ವೇಳೆ ನೆನೆಸಿಟ್ಟು ಅದರ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎಷ್ಟು ಲಾಭವಾಗಲಿದೆ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ. ಅದೇ ರೀತಿ ಈಗ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟುಕೊಂಡು ಅದನ್ನು ಕುಡಿದರೆ ಎಷ್ಟು ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಇವೆ. ಇದು ದೇಹದ ಆರೋಗ್ಯವನ್ನು ಕಾಪಾಡುವ ಜತೆಗೆ ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು.

ತೂಕ ಇಳಿಸಲು, ಯಕೃತ್, ಕಿಡ್ನಿ ಮತ್ತು ಚಯಾಪಚಯಕ್ಕೆ ಇದು ತುಂಬಾ ಒಳ್ಳೆಯದು. ಮೆಂತ್ಯೆಕಾಳಿನ ನೀರಿನಿಂದ ಅದ್ಭುತ ಲಾಭಗಳು ಇವೆ. ಇದನ್ನು ನೀವು ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಮ್ಮ ಆಹಾರ ಕ್ರಮದಲ್ಲಿ ಮೊದಲಿಗೆ ಮೆಂತ್ಯೆ ನೀರನ್ನು ಕುಡಿದರೆ ಅದರಿಂದ ಯಾವ ಲಾಭಗಳು ಆಗಲಿದೆ ಎಂದು ತಿಳಿಯಿರಿ.

ಕಫ ಇರುವ ಜನರಿಗೆ ತುಂಬಾ ಒಳ್ಳೆಯದು

ಕಫ ಹೆಚ್ಚಾಗಿ ಇರುವಂತಹ ಜನರ ದೇಹದಲ್ಲಿ ಉಷ್ಣತೆ(ಅಗ್ನಿ)ಯು ಕಡಿಮೆ ಇರುವುದು ಎಂದು ಆಯುರ್ವೇದವು ಹೇಳುತ್ತದೆ.

ಕಫ ಇರುವ ವ್ಯಕ್ತಿಗಳಲ್ಲಿ ಪ್ರತಿರೋಧಕ ಶಕ್ತಿಯು ಕಡಿಮೆ ಇರುವುದು ಮತ್ತು ಇದರಿಂದ ಶೀತ, ಕೆಮ್ಮು ಮತ್ತು ಜ್ವರ ಬರುವುದು. ಮೆಂತ್ಯೆ ನೀರು ಕುಡಿದರೆ ಅದು ದೇಹಕ್ಕೆ ಉಷ್ಣತೆ ನೀಡುವುದು ಹಾಗೂ ದೇಹದ ಪ್ರತಿರೋಧಕ ಶಕ್ತಿ ಕೂಡ ವೃದ್ಧಿಸುವುದು.

ಬಾಣಂತಿಯರ ಆರೋಗ್ಯ ವೃದ್ಧಿಗೂ ಸಹಕಾರಿ

ಮೆಂತ್ಯೆ ನೀರು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಯಾಕೆಂದರೆ ಇದು ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಮೆಂತ್ಯೆ ಕಾಳನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಅದರಿಂದ ವಿವಿಧ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.

ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಮೆಂತ್ಯೆ ಕಾಳು ತುಂಬಾ ಲಾಭಕಾರಿ. ಇದರಿಂದಾಗಿ ಬಾಣಂತಿಯರಿಗೆ ಮೆಂತ್ಯೆ ಕಾಳಿನಿಂದ ತಯಾರಿಸಿದ ಲಾಡು ನೀಡಲಾಗುತ್ತದೆ.

ಮೆಂತ್ಯೆಯಲ್ಲಿರುವಂತಹ ಕೆಲವೊಂದು ಅಂಶಗಳು ಗರ್ಭಕೋಶವನ್ನು ಮೊದಲಿನ ಸ್ಥಿತಿಗೆ ತರಲು ನೆರವಾಗುವುದು. ಇದರಿಂದ ಮೆಂತ್ಯೆ ನೀರನ್ನು ಬಳಸಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಮೆಂತ್ಯೆ ಕಾಳು ತುಂಬಾ ಪರಿಣಾಮಕಾರಿ ಆಗಿರುವುದು. ಇದು ಇನ್ಸುಲಿನ್ ಪ್ರತಿರೋಧಕವನ್ನು ಸರಿಪಡಿಸುವುದು ಮತ್ತು ಹೆಚ್ಚು ಸೂಕ್ಷ್ಮ ಮತ್ತು ಪ್ರತಿಕ್ರಿಯಾತ್ಮಕ ವಾಗಿಸುವುದು. ಹೀಗಾಗಿ ಇದನ್ನು ಮಧುಮೇಹಿಗಳು ಬಳಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ತೂಕ ಇಳಿಸಲು ಸಹಕಾರಿ

ಮೆಂತ್ಯೆ ಕಾಳಿನ ನೀರನ್ನು ನಿತ್ಯವೂ ಕುಡಿದರೆ ಅದರಿಂದ ತೂಕ ಇಳಿಸಲು ತುಂಬಾ ನೆರವಾಗುವುದು. ಇದು ಚಯಾಪಚಯಕ್ಕೆ ವೇಗ ನೀಡುವುದು. ಇದು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು ಮತ್ತು ತೂಕ ಇಳಿಸಲು ಮತ್ತು ನಿರ್ವಹಿಸಲು ಸಹಕರಿಸುವುದು. ತೂಕ ಇಳಿಸಲು ಬಯಸಿದ್ದರೆ ಆಗ ನೀವು ಮೆಂತ್ಯೆ ಕಾಳನ್ನು ಬಳಸಿ.

ಉತ್ತಮ ಜೀರ್ಣಕ್ರಿಯೆ

ಮೆಂತ್ಯೆ ಕಾಳು ಆಮ್ಲ ವಿರೋಧಿಯಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಬಲ ಬರುವುದು ಮತ್ತು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆಯು ಕಡಿಮೆ ಆಗುವುದು. ಇದನ್ನು ಶೀತ ತಿಂಗಳುಗಳಲ್ಲಿ ತಿಂದರೆ ಒಳ್ಳೆಯದು ಎಂದು ಆಯುರ್ವೇದ ಮತ್ತು ಯೋಗ ತಜ್ಞ ಯೋಗಾಚಾರ್ಯ ಅನೂಪ್ ಅವರು ಸಲಹೆ ನೀಡುತ್ತಾರೆ.

ಇತರ ಲಾಭಗಳು

ಮೆಂತ್ಯೆ ಕಾಳಿನ ನೀರು ದೇಹದಲ್ಲಿ ದ್ರವಾಂಶ ನಿಲ್ಲುವುದು ಮತ್ತು ಹೊಟ್ಟೆ ಉಬ್ಬರ ತಡೆಯುವುದು. ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಇದೆ ಮತ್ತು ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅದರಿಂದ ದೇಹವು ಆರಾಮವಾಗಿರಲು ನೆರವಾಗುವುದು.

ಗಮನಿಸಬೇಕಾದ ಅಂಶಗಳು

ಒಂದು ಕಪ್ ನೀರಿಗೆ ಒಂದು ಚಮಚ ಮೆಂತ್ಯೆ ಕಾಳು ಹಾಕಿ ಅದರ ನೀರು ಕುಡಿದರೆ ತುಂಬಾ ಒಳ್ಳೆಯದು. ಕರುಳಿನ ಅಲ್ಸರ್ ಇರುವವರು ಇದನ್ನು ಸೇವಿಸಬಾರದು. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಚರ್ಮವು ಒಣಗುವ ಸಮಸ್ಯೆಯು ಕಾಡುವುದು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *