
ಅತಿಯಾಗಿ ಮೊಬೈಲ್ ಬಳಸೋ ಪುರುಷರೇ ಎಚ್ಚರ..! – ಮಕ್ಕಳಾಗದಿರೋಕೆ ಮೊಬೈಲೇ ಕಾರಣವಂತೆ..!!
- ಆರೋಗ್ಯವೇ ಭಾಗ್ಯ
- November 4, 2023
- No Comment
- 97
ನ್ಯೂಸ್ ಆ್ಯರೋ : ಜನರ ಮೇಲೆ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಆಗಿಂದಾಗ್ಗೆ ಹೊಸಹೊಸ ವರದಿಗಳು ಬರುತ್ತಲೇ ಇವೆ. ಇತ್ತೀಚಿನ ಅಧ್ಯಯನವೊಂದು ಪುರುಷ ಆರೋಗ್ಯದ ಮೇಲೆ ಮೊಬೈಲ್ ಬೀರುವ ಪರಿಣಾಮಗಳ ಬಗ್ಗೆ ಹೇಳಿದೆ.
ಆತಂಕಕಾರಿ ವಿಷಯವೇನೆಂದರೆ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಪುರುಷರ ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಸ್ವಿಟ್ಜರ್ಲೆಂಡ್‌ನ ಜಿನೀವಾ ವಿಶ್ವವಿದ್ಯಾಲಯದ ತಂಡ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.
ಅತಿಯಾಗಿ ಮೊಬೈಲ್ ಫೋನ್ ಬಳಕೆ ಪುರುಷರಲ್ಲಿ ಇದು ಬಂಜೆತನ ಉಂಟು ಮಾಡಬಹುದು. ಮೊಬೈಲ್ ನಲ್ಲಿ ಉತ್ಪತ್ತಿಯಾಗುವ ವಿದ್ಯುತ್ಕಾಂತೀಯ ವಿಕಿರಣವು ವೀರ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಟ್ಟು ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
2005 ಮತ್ತು 2018 ರ ನಡುವೆ ನಡೆಸಿದ ಅಧ್ಯಯನದಲ್ಲಿ 18 ರಿಂದ 22 ವರ್ಷ ವಯಸ್ಸಿನ 2,886 ಪುರುಷರನ್ನು ಕೇಂದ್ರೀಕರಿಸಿ ಅಧ್ಯಯನವನ್ನು ನಡೆಸಲಾಯಿತು. ಇದರಲ್ಲಿ ಹೆಚ್ಚು ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುವವರಲ್ಲಿ ವೀರ್ಯದ ಸಾಂದ್ರತೆ ಕಡಿಮೆಯಾಗಿರುವುದು ತಿಳಿದು ಬಂದಿದೆ.
ಸಾಮಾನ್ಯವಾಗಿ ಪುರುಷರ ವೀರ್ಯದ ಸಾಂದ್ರತೆ ಪ್ರತಿ ಮಿಲಿ ಲೀಟರ್‌ಗೆ 15 ಮಿಲಿಯನ್‌ಗಿಂತ ಕಡಿಮೆಯಿದ್ದರೆ ಸಂತಾನೋತ್ಪತ್ತಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಪ್ರತಿ ಮಿಲಿ ಲೀಟರ್‌ಗೆ 40 ಮಿಲಿಯನ್‌ಗಿಂತ ಕಡಿಮೆಯಿದ್ದರೆ ಸಂತಾನೋತ್ಪತ್ತಿ ಸಾಧ್ಯತೆ ಕಡಿಮೆಯಾಗುತ್ತದೆ.
ಕಳೆದ ಐವತ್ತು ವರ್ಷಗಳಲ್ಲಿ ವೀರ್ಯಾಣು ಗುಣಮಟ್ಟ ಕುಸಿದಿದೆ ಎಂದು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಇದಕ್ಕೆ ಜೀವನಶೈಲಿಯೂ ಕಾರಣವಾಗುತ್ತದೆ ಎನ್ನಲಾಗಿದ್ದು, ಅತಿಯಾದ ಮೊಬೈಲ್ ಬಳಕೆಯೂ ಕಾರಣ ಎನ್ನಲಾಗುತ್ತಿದೆ.