
Potato Utthapam Recipe : ಬೆಳಗಿನ ತಿಂಡಿಗೆ ಮಾಡಿ ರುಚಿಕರ ಆಲೂಗಡ್ಡೆ ಉತ್ತಪಮ್ -ಮಾಡುವ ವಿಧಾನ ಇಲ್ಲಿದೆ..
- ನಳಪಾಕ
- September 16, 2023
- No Comment
- 55
ನ್ಯೂಸ್ ಆ್ಯರೋ : ಪ್ರತಿಯೊಬ್ಬರೂ ಬೆಳಗಿನ ಉಪಾಹಾರದಲ್ಲಿ ಪ್ರತಿದಿನ ವಿಭಿನ್ನವಾದದ್ದನ್ನು ತಿನ್ನಲು ಬಯಸುತ್ತಾರೆ. ಆದರೆ ಕಚೇರಿಗೆ ಹೋಗುವುದರಿಂದ ವಿಭಿನ್ನ ಮತ್ತು ರುಚಿಕರವಾದದ್ದನ್ನು ತಯಾರಿಸಲು ಸಾಕಷ್ಟು ಸಮಯ ಇರುವುದಿಲ್ಲ. ಅಂತಹ ಪರಿಸ್ಥಿಯಲ್ಲಿ ವಿಭಿನ್ನ ಮತ್ತು ಟೇಸ್ಟಿಯಾದ ಈ ಆಲೂಗಡ್ಡೆ ಉತ್ತಪಮ್ ಉತ್ತಮ ಆಯ್ಕೆ. ಇದು ಮಾಡಲು ಸುಲಭವಾಗಿದೆ.
ನೀವು ಆಗಾಗ್ಗೆ ಈರುಳ್ಳಿ ಉತ್ತಪಮ್ ಅನ್ನು ತಿನ್ನಬಹುದು. ಆದರೆ ನೀವು ಆಲೂಗೆಡ್ಡೆ ಉತ್ತಪಮ್ ಸವಿಯುವುದು ಅಪರೂಪದಲ್ಲಿ ಅಪರೂಪ. ಒಮ್ಮೆ ಮಾಡಿ ಖಂಡಿತಾ ಮನೆ ಮಂದಿಯೆಲ್ಲ ಇಷ್ಟಪಟ್ಟು ತಿನ್ನುವರು. ನೀವು ಈ ಉತ್ತಪಮ್ ಅನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಅದನ್ನು ಸುಲಭವಾಗಿ ಕಚೇರಿ, ಕಾಲೇಜಿಗೆ ಬಾಕ್ಸ್‌ಗೆ ತೆಗೆದುಕೊಂಡು ಹೋಗಬಹುದು. ಇದು ಟೇಸ್ಟಿ, ಪೌಷ್ಟಿಕ ಹಾಗೂ ಆರೋಗ್ಯಕರ ತಿಂಡಿಯಾಗಿದೆ.
ಬೇಕಾಗುವ ಪದಾರ್ಥಗಳು:
- ಅಕ್ಕಿ – 1 ಕಪ್
- ಈರುಳ್ಳಿ – 1
- ಆಲೂಗಡ್ಡೆ – 2
- ಕ್ಯಾರೆಟ್ – 1
- ಎಲೆಕೋಸು – 1
- ಕ್ಯಾಪ್ಸಿಕಂ – 1
- ಹಸಿರು ಮೆಣಸಿನಕಾಯಿ – 2
- ಶುಂಠಿ – 2 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
- ಕಪ್ಪು ಮೆಣಸು – 1 ಟೀಸ್ಪೂನ್
- ಉಪ್ಪು – ರುಚಿಗೆ ತಕ್ಕಂತೆ
- ನೀರು – ಅಗತ್ಯವಿರುವಂತೆ
- ಎಣ್ಣೆ – ಸ್ವಲ್ಪ
ಮಾಡುವ ವಿಧಾನ
ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸು, ಶುಂಠಿ, ಹಸಿರು ಮೆಣಸಿನಕಾಯಿಗಳಂತಹ ಎಲ್ಲಾ ಹಸಿ ತರಕಾರಿಗಳನ್ನು ನುಣ್ಣಗೆ ಕತ್ತರಿಸಿ. ಆಲೂಗಡ್ಡೆಯನ್ನು ಕುದಿಸಿ ಮತ್ತು ಸಿಪ್ಪೆಯನ್ನು ತೆಗೆಯಿರಿ. ಆಲೂಗಡ್ಡೆ ಉತ್ತಪಮ್ ಮಾಡಲು, ಅಕ್ಕಿಯನ್ನು ನೀರಿನಲ್ಲಿ ತೊಳೆಯಿರಿ ಮತ್ತು ಕನಿಷ್ಠ 2-3 ಗಂಟೆಗಳ ಕಾಲ ನೆನೆಸಿ.
ಈಗ ಅಕ್ಕಿ, ಬೇಯಿಸಿದ ಆಲೂಗಡ್ಡೆ, ನೀರು, ಶುಂಠಿ, ಹಸಿರು ಮೆಣಸಿನಕಾಯಿಯನ್ನು ಮಿಕ್ಸಿ ಬ್ಲೆಂಡರ್‌ನಲ್ಲಿ ಹಾಕಿ. ಅದನ್ನು ಚೆನ್ನಾಗಿ ರುಬ್ಬಿ, ಹಿಟ್ಟು ತಯಾರಿಸಿ. ಅದನ್ನು ಒಂದು ಪಾತ್ರೆಯಲ್ಲಿ ತೆಗೆಯಿರಿ. ಅದಕ್ಕೆ ಕತ್ತರಿಸಿದ ಕ್ಯಾಪ್ಸಿಕಂ, ಈರುಳ್ಳಿ, ಎಲೆಕೋಸು, ಕ್ಯಾರೆಟ್ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ಕೆಂಪು ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ.
ಗ್ಯಾಸ್ ಮೇಲೆ ಗ್ರಿಡಲ್ ಅಥವಾ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಈಗ ತಯಾರಿಸಿಟ್ಟ ಹಿಟ್ಟನ್ನು ಒಂದು ಲೋಟದ ಸಹಾಯದಿಂದ ಸುರಿಯಿರಿ. ತವಾ ಮೇಲೆ ಚೆನ್ನಾಗಿ ಹರಡಿ. ಎರಡೂ ಬದಿಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಬಿಸಿ ಆಲೂಗೆಡ್ಡೆ ಉತ್ತಪಮ್ ಸವಿಯಲು ಸಿದ್ಧವಾಗಿದೆ. ಇದನ್ನು ಸಾಸ್, ಸಾಂಬಾರ್, ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿ.