Sugar Apple : ಸೀತಾಫಲ ಸೇವನೆಯಿಂದ ಹಲವು ರೋಗಗಳಿಗೆ ಮುಕ್ತಿ – ಆರೋಗ್ಯಕ್ಕೂ ಫಲ ನೀಡುತ್ತೆ ಈ ಸೀತಾಫಲ..!

Sugar Apple : ಸೀತಾಫಲ ಸೇವನೆಯಿಂದ ಹಲವು ರೋಗಗಳಿಗೆ ಮುಕ್ತಿ – ಆರೋಗ್ಯಕ್ಕೂ ಫಲ ನೀಡುತ್ತೆ ಈ ಸೀತಾಫಲ..!

ನ್ಯೂಸ್ ಆ್ಯರೋ : ಸೀತಾಫಲ (Sugar Apple) ಅತ್ಯಂತ ರುಚಿಯಾದ, ಆರೋಗ್ಯಕರವಾದ ಈ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಸೀತಾಫಲ ರುಚಿಯಲ್ಲಿ ಬೇರೆ ಹಣ್ಣಿಗಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ. ಅಂದಹಾಗೆ ಇದನ್ನು ಇಂಗ್ಲಿಷಿನಲ್ಲಿ ‘ಕಸ್ಟರ್ಡ್ ಆಪಲ್’ ಎಂದು ಕರೆಯುತ್ತಾರೆ.

ಈ ಹಣ್ಣನ್ನು ದೇಶಾದ್ಯಂತ ಬೆಳೆಯಲಾಗುತ್ತದೆ. ಆದರೂ ವಿಶೇಷವಾಗಿ ಈಶಾನ್ಯ ಮತ್ತು ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ. ಸೀತಾಫಲ ನೋಡುವುದಕ್ಕೆ ಅಷ್ಟೇನೂ ಸುಂದರವಾಗಿ ಕಾಣದಿದ್ದರೂ, ಎಲೆಗಳು ಸುವಾಸನೆ ರಹಿತವಾಗಿದ್ದರೂ ಇದರಲ್ಲಿ ಅಪಾರ ಆರೋಗ್ಯ ಪ್ರಯೋಜನಗಳಿವೆ. ಅಡಿಯಿಂದ ಮುಡಿ ತನಕ ಯಾವುದೇ ಸಮಸ್ಯೆಯಿದ್ದರೂ ಸೀತಾಫಲ ಅದನ್ನು ಹೋಗಲಾಡಿಸುತ್ತದೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ಉತ್ತರ…

ಸೀತಾಫಲದಲ್ಲಿದೆ ಭರಪೂರ ಪೌಷ್ಟಿಕಾಂಶ

ಸೀತಾಫಲದ ಪ್ರಯೋಜನಗಳನ್ನು ನಾವು ತಿಳಿಯುವ ಮೊದಲು, ಅದರಲ್ಲಿ ಪೌಷ್ಠಿಕಾಂಶ ಎಷ್ಟಿದೆ ಎಂದು ಅರ್ಥಮಾಡಿಕೊಳ್ಳೋಣ. 100 ಗ್ರಾಂ ಸೀತಾಫಲದಲ್ಲಿ 80-100 ಕ್ಯಾಲೊರಿ ಇರುತ್ತದೆ. ಸೀತಾಫಲದಲ್ಲಿ ಪ್ರೋಟೀನ್, ಕೊಬ್ಬು ಮತ್ತು ಕಬ್ಬಿಣದ ಪ್ರಮಾಣವು ಹೆಚ್ಚು ಕಂಡುಬರುತ್ತದೆ.

ಇದು ಥಯಾಮಿನ್, ರಿಬೋಫ್ಲಾವಿನ್ ಮತ್ತು ನಿಯಾಸಿನ್’ನಂತಹ ಕೆಲವು ಬಿ ಜೀವಸತ್ವಗಳನ್ನು ಹೊಂದಿದೆ. ಇದು ಫೈಬರ್ ಮತ್ತು ಕಾಂಪ್ಲೆಕ್ಸ್ ಕಾರ್ಬ್‌ಗಳ ಉತ್ತಮ ಮೂಲವಾಗಿದೆ. ಅಷ್ಟೇ ಅಲ್ಲ, ಸೀತಾಫಲ ಪ್ರಮುಖ ಖನಿಜಗಳಾದ ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ರಂಜಕಗಳಿಂದ ಕೂಡಿದೆ. ಇದು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. ಇವು ಶೇ 70 ರಷ್ಟು ತೇವಾಂಶವನ್ನು ಹೊಂದಿರುವ ಹೈಡ್ರೇಟಿಂಗ್ ಹಣ್ಣುಗಳು. ಹಾಗೆಯೇ ಆಸ್ಕೋರ್ಬಿಕ್ ಆಮ್ಲ ಅಥವಾ ವಿಟಮಿನ್ ಸಿ ಯ ನೈಸರ್ಗಿಕ ಮೂಲವಾಗಿದೆ.

ಕರುಳಿನ ಆರೋಗ್ಯ ಕಾಪಾಡಲು

ಸೀತಾಫಲ ಪ್ರಮುಖವಾಗಿ ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವುದರಿಂದ, ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಸೀತಾಫಲ ಹಣ್ಣನ್ನು ನಿಯಮಿತವಾಗಿ ಸೇವಿಸಿದಾಗ ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊದಲೇ ಹೇಳಿದ ಹಾಗೆ ಸೀತಾಫಲ ತಾಮ್ರ ಮತ್ತು ನಾರಿನಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸೀತಾಫಲ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಅತಿಸಾರ ಸಮಸ್ಯೆಯನ್ನು ಹತೋಟಿಯಲ್ಲಿ ಇಡುತ್ತದೆ. ದೇಹದೊಳಗಿನ ಹುಣ್ಣು, ಗ್ಯಾಸ್ಟ್ರಿಕ್ ತಡೆಯುತ್ತದೆ. ಸೀತಾಫಲ ಹಣ್ಣು ಡಿಟಾಕ್ಸ್ ಮಾಡುವುದರಿಂದ ಕರುಳುಗಳು ಮತ್ತು ಇತರ ಜೀರ್ಣಕಾರಿ ಅಂಗಗಳನ್ನು ಆರೋಗ್ಯಕರವಾಗಿರಿಸಿಕೊಳ್ಳುತ್ತದೆ.

ಆ್ಯಂಟಿ ಏಜಿಂಗ್ ಹಣ್ಣು

ಸೀತಾಫಲ ಹಣ್ಣಿನಲ್ಲಿರುವ ಮುಖ್ಯ ಅಂಶವೆಂದರೆ ಆಸ್ಕೋರ್ಬಿಕ್ ಆಮ್ಲ ಅಥವಾ ವಿಟಮಿನ್ ಸಿ. ದೇಹವು ಉತ್ಪಾದಿಸಿಕೊಳ್ಳಲಾಗದ ಕೆಲವು ಪೋಷಕಾಂಶಗಳಲ್ಲಿ ಇದು ಒಂದಾಗಿದೆ. ನೀವು ಸೇವಿಸುವ ಆಹಾರ ಮೂಲಗಳಿಂದ ಇದು ಬರಬೇಕಾಗುತ್ತದೆ. ಆದರೆ ಸೀತಾಫಲ ಈ ವಿಟಮಿನ್‌ನ ಅತ್ಯಂತ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ, ಆಂಟಿ ಏಜಿಂಗ್ ಹಣ್ಣಾಗಿರುವ ಸೀತಾಫಲ ದೇಹದೊಳಗಿನಿಂದ ಸ್ವತಂತ್ರ ರಾಡಿಕಲ್ಸ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹ ಸೀತಾಫಲ ಪ್ರಮುಖ ಪಾತ್ರವಹಿಸುತ್ತದೆ.

ವಿಟಮಿನ್ ಸಿ ದೇಹದ ಪ್ರತಿರಕ್ಷೆಗೆ ಸಹ ಒಳ್ಳೆಯದು. ಆದ್ದರಿಂದ ಸೀತಾಫಲ ಸೇವಿಸುವುದರಿಂದ ನೀವು ಶೀತ, ಕೆಮ್ಮು ಮತ್ತು ಇತರ ಸಣ್ಣ ಕಾಯಿಲೆಗಳನ್ನು ಬರದಂತೆ ತಡೆಯಬಹುದು. ರುಮಟಾಯ್ಡ್ ಸಂಧಿವಾತದಂತಹ ಕಾಯಿಲೆಗಳನ್ನು ತಡೆಯಲು ಸಹ ಇದು ಸಹಾಯ ಮಾಡುತ್ತದೆ.

ಹೃದಯಾಘಾತವಾಗದಂತೆ ತಡೆಯುತ್ತದೆ

ಸೀತಾಫಲದಲ್ಲಿ ಮೆಗ್ನೀಶಿಯಂ ಅಂಶ ಹೆಚ್ಚಿರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಇದು ವಿಟಮಿನ್ ಬಿ 6 ಅನ್ನು ಒಳಗೊಂಡಿದ್ದು, ಇದು ಹೃದಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು, ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ನಿಮ್ಮ ಅಪಧಮನಿಗಳು ಆರೋಗ್ಯವಾಗಿರುವಂತೆ ಸಹ ಸೀತಾಫಲ ಸಹಾಯ ಮಾಡುತ್ತದೆ.

ಸೀತಾಫಲದಲ್ಲಿ ಕಬ್ಬಿಣ ಸಮೃದ್ಧವಾಗಿರುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಇವು ಅತ್ಯಂತ ಉಪಯುಕ್ತವಾಗಿವೆ. ಇದು ರಕ್ತವನ್ನು ಹೆಚ್ಚಿಸಿ, ರಕ್ತಹೀನವಾಗದಂತೆ ತಡೆಯುತ್ತದೆ. ಗರ್ಭಿಣಿಯರು ಮತ್ತು ಸಣ್ಣ ಪುಟ್ಟ ಕಾಯಿಲೆಗಳಿಂದ ಬಳಲುತ್ತಿರುವವರು ಸೀತಾಫಲವನ್ನು ನಿಯಮಿತವಾಗಿ ಸೇವಿಸಬೇಕು.

ಮಧುಮೇಹ ಇರುವವರು ಸೇವಿಸಬಹುದು

ಸೀತಾಫಲದ ಬಗ್ಗೆ ಇರುವ ಒಂದು ತಪ್ಪು ತಿಳುವಳಿಕೆಯೆಂದರೆ ಇದು ಅತ್ಯಂತ ಸಿಹಿಯಾಗಿರುತ್ತದೆ. ಆದ್ದರಿಂದ ಮಧುಮೇಹ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು. ಆದರೆ ಇದರ ಗ್ಲೈಸೆಮಿಕ್ ಸೂಚ್ಯಂಕವು ಕೇವಲ 54 ಮಾತ್ರ. ಹಾಗಾಗಿ ಇದನ್ನು ಮಿತವಾಗಿ ಸೇವಿಸಬಹುದು. ಆದರೆ ಇದರಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಸಿಹಿಯಾಗಿರುವುದರಿಂದ ನಿಮ್ಮ ಕಡುಬಯಕೆಗಳನ್ನು ಸಹ ತೃಪ್ತಿಪಡಿಸುತ್ತದೆ.

ಸೀತಾಫಲವು ಪಿಸಿಒಡಿ ಸಮಸ್ಯೆ ಹೊಂದಿರುವ ಮಹಿಳೆಯರಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ದಿನನಿತ್ಯ ಸೀತಾಫಲ ಸೇವಿಸುವುದರಿಂದ ಗರ್ಭಾವಸ್ಥೆಯಲ್ಲಿ ಗರ್ಭಪಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿ ಮಹಿಳೆ ಗರ್ಭಾವಸ್ಥೆಯಲ್ಲಿ ಸೀತಾಫಲ ತಿನ್ನಬೇಕು. ಏಕೆಂದರೆ ಇದು ಎದೆ ಹಾಲು ಉತ್ಪಾದನೆಗೆ ಸಹಾಯ ಮಾಡುತ್ತದೆ.

ದೇಹದ ಉಷ್ಣತೆ ಕಡಿಮೆ ಮಾಡುತ್ತದೆ

ಸೀತಾಫಲ ಹೈಡ್ರೇಟಿಂಗ್ ಗುಣಗಳಿಂದಲೇ ಫೇಮಸ್. ಇದರಲ್ಲಿ ತೇವಾಂಶ ಸಮೃದ್ಧವಾಗಿರುವುದರಿಂದ ಇದು ದೇಹವನ್ನು ತಂಪಾಗಿಡುತ್ತದೆ. ವಾಸ್ತವವಾಗಿ ಆಯುರ್ವೇದ ಗ್ರಂಥಗಳು ಸೀತಾಫಲ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿವೆ. ಅಂದರೆ ದೇಹದಲ್ಲಿ ಹೆಚ್ಚಿನ ಉಷ್ಣತೆಯಿರುವ ಜನರು ಇದರಿಂದ ಪ್ರಯೋಜನ ಪಡೆಯಬಹುದು.

ಶೀತ ಮತ್ತು ಕೆಮ್ಮು ಇರುವವರು ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಸೀತಾಫಲ ದೇಹದೊಳಗೆ ಈ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಇದು ಕಾಂಪ್ಲೆಕ್ಸ್ ಕಾರ್ಬ್‌ಗಳ ಅತ್ಯುತ್ತಮ ಮೂಲವಾಗಿರುವುದರಿಂದ ಇದು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ತೂಕ ಹೆಚ್ಚಳ-ಅಸ್ತಮಾ ನಿವಾರಣೆಗೆ

ಸೀತಾಫಲ ವ್ಯಕ್ತಿಯ ತೂಕವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸೀತಾಫಲವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ 6 ಇರುವುದರಿಂದ ಇದು ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಸ್ತಮಾದಿಂದ ನಿಮ್ಮನ್ನು ರಕ್ಷಿಸುತ್ತದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *