ಪ್ರೊ ಕಬಡ್ಡಿ ಲೀಗ್ ಡೇಟ್ ಫಿಕ್ಸ್; ಕಬಡ್ಡಿ ಪ್ರಿಯರಿಗೆ ಸಿಹಿ ಸುದ್ದಿ…!
ನ್ಯೂಸ್ ಆ್ಯರೋ : ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ, ಪ್ರೊ ಕಬಡ್ಡಿಯ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯುತ್ತಿದೆ. ಇದೀಗ ಕಬಡ್ಡಿ ಪ್ರಿಯರೆಲ್ಲ ಕಾದು ಕುಳಿತಿದ್ದ ಪಿಕೆಎಲ್ ನ ದಿನ ಪ್ರಕಟವಾಗಿದೆ.
ಅಕ್ಟೋಬರ್ 18ರಿಂದ ಟೂರ್ನಿಯು ಆರಂಭವಾಗಲಿದ್ದು, ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಗಳು ಇನ್ನಷ್ಟೇ ಪ್ರಕಟವಾಗಬೇಕಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಈ ಹಿಂದೆಯೇ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಕೊನೆಗೊಂಡಿದ್ದು, 12 ತಂಡಗಳಿಗೆ ಒಟ್ಟು 118 ಆಟಗಾರರನ್ನು ಹರಾಜು ಮಾಡಲಾಗಿದೆ. 8 ಆಟಗಾರರು ₹1 ಕೋಟಿಗಿಂತ ಹೆಚ್ಚು ಮೊತ್ತ ಪಡೆದುದಿರುವುದು ಪ್ರೊ ಕಬಡ್ಡಿ ಇತಿಹಾಸದಲ್ಲೇ ಮೊದಲು.
ಈ ಹಿಂದಿನ ಎಲ್ಲಾ ಆವೃತ್ತಿಯ ಕಬ್ಬಡಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಯಾವುದೇ ಪಂದ್ಯಗಳು ನಡೆಯದಿರುವುದು ಬೆಂಗಳೂರಿನ ಕಬಡ್ಡಿ ಪ್ರಿಯರಿಗೆ ನಿರಾಸೆಯುಂಟುಮಾಡಿದೆ.
Leave a Comment