ಬಿಗ್ ಬಾಸ್ ಪ್ರೊಮೋ ರಿಲೀಸ್; ಹೊಸ ಆ್ಯಂಕರ್ ಗೆ ಮಣೆ….!
ನ್ಯೂಸ್ ಆ್ಯರೋ : ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಪ್ರತ್ಯೇಕ ಫ್ಯಾನ್ ಬೇಸ್ ಅನ್ನು ಹೊಂದಿದೆ. ಜನರಿಗೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಹೇಗೆ ಕೂತುಹಲ ಇರುತ್ತದೋ ಅದೇ ರೀತಿ ಕಾರ್ಯಕ್ರಮ ನಿರೂಪಕರ ಬಗ್ಗೆಯೂ ಅಷ್ಟೇ ಕುತೂಹಲವಿದೆ.
ಎಲ್ಲಾ ಭಾಷೆಗಳಲ್ಲೂ ಈ ಬಿಗ್ ಬಾಸ್ ರಿಯಾಲಿಟಿ ಶೋ ಮೂಡಿಬರುತ್ತಿದೆ. ಹಿಂದಿ ಬಿಗ್ ಬಾಸ್ ಶೋವನ್ನು ಬಾಲಿವುಡ್ ನ ಬಾದ್ ಷಾ ಸಲ್ಮಾನ್ ಖಾನ್ ನಡೆಸಿಕೊಡ್ತಾರೆ. ತೆಲುಗು ಶೋನ ನಟ ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಟ್ರೆ, ಕನ್ನಡ ಬಿಗ್ ಬಾಸ್ ಅನ್ನು ಕಿಚ್ಚ ಸುದೀಪ್ ನಡೆಸಿಕೊಳ್ಳುತ್ತಿದ್ದಾರೆ.
ಇತ್ತ ತಮಿಳು ಬಿಗ್ ಬಾಸ್ ಅನ್ನು ನಟ ಕಮಲ್ ಹಾಸನ್ ನಡೆಸಿಕೊಡ್ತಿದ್ರು. ಇದೀಗ ತಮಿಳು ಬಿಗ್ ಬಾಸ್ ನಲ್ಲಿ ಹೊಸ ಮುಖದ ಪರಿಚಯ ಮಾಡುವ ಮೂಲಕ ಬಿಗ್ ಬಾಸ್ ಪ್ರಿಯರಿಗೆ ಸರ್ಪ್ರೈಸ್ ನೀಡಿದೆ.
ತಮಿಳಿನಲ್ಲಿ 2017 ರಿಂದ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗುತ್ತಿತ್ತು. ಕಮಲ್ ಹಾಸನ್ ಅವರು ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತಿದ್ದರು. ಇದೀಗ ತಮಿಳಿನ ಎಂಟನೇ ಆವೃತ್ತಿಯ ಬಿಗ್ ಬಾಸ್ ರಿಯಾಲಿಟಿ ಶೋವನ್ನು ನಟ ವಿಜಯ್ ಸೇತುಪತಿ ನಡೆಸಿಕೊಡಲಿದ್ದಾರೆ ಎಂದು ಪ್ರೊಮೋ ರಿಲೀಸ್ ಮಾಡುವ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ.
ಇದೀಗ ಕಮಲ್ ಹಾಸನ್ ಅವರ ಸ್ಥಾನವನ್ನು ತುಂಬುತ್ತಿರುವ ನಟ ವಿಜಯ್ ಸೇತುಪತಿ ಯಾವ ರೀತಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ಕಾದುಕುಳಿತ್ತಿದ್ದಾರೆ.
Leave a Comment